ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರೆ ಎಳೆದ ಶಾಸಕ ನಾಡಗೌಡ.
ಸಿಂಧನೂರು : ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು,
ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ನಗರದಿಂದ ದೂರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣದ ಕುರಿತು ಸ್ಥಳ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಮುಖಂಡರನ್ನು ಸಭೆಯನ್ನು ಕರೆಯಲಾಗಿತ್ತು. ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಗೂ ತಹಶೀಲ್ದಾರರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಿದರು.
ಕಲ್ಲೂರು ಗ್ರಾಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಸ್ಥಳಾಂತರ ಕುರಿತು ಹಿರಿಯ ಮುಖಂಡ ಕೆ. ವಿರುಪಾಕ್ಷಪ್ಪನವರು ನಗರದ ಪಿ.ಡಬ್ಲ್ಯೂ.ಡಿ. ಕ್ಯಾಂಪಿನ ನೀರಾವರಿ ಇಲಾಖೆಯಲ್ಲಿ ಒಟ್ಟು 29 ಎಕರೆ ಸರಕಾರಿ ಜಾಗ ಇದೆ. ಅದರಲ್ಲಿ ಎರಡು ಎಕರೆ ಜಾಗ ಪೋಲಿಸ್ ಠಾಣೆಗೆ ಬಿಟ್ಟುಕೊಡಲಾಗಿದ್ದು ಉಳಿದ ಜಾಗದಲ್ಲಿ ನೀರಾವರಿ ಸಿಬ್ಬಂದಿಗಳು ವಾಸಿಸುತ್ತಿದ್ದು ಉಳಿದ ಜಾಗದಲ್ಲಿ ಎರಡು ಎಕರೆ ಎಲ್ಲಿ ಇದೆ ಎಂಬುದನ್ನು ಗುರುತಿಸಿ ಆಸ್ಪತ್ರೆ ನಿರ್ಮಿಸಲು ಸಲಹೆಗಳನ್ನು ನೀಡಿದರು.
ಸರ್ವ ಪಕ್ಷದ ಮುಖಂಡರ ಸಭೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರು ಒಂದು ಇಲಾಖೆಯ ಜಾಗವನ್ನು ಇನ್ನೊಂದು ಇಲಾಖೆಗೆ ಸರಕಾರಿ ಜಾಗ ಪರಭಾರೆಯಾಗಬೆಕಾದರೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಬೇಕಾಗಿರುತ್ತದೆ. ಇದೇ ತಿಂಗಳು 14 ನೇ ತಾರೀಖಿನಂದು ಅಧಿವೇಶನ ನಡೆಯಲಿದ್ದು ಅಂದು ಸರ್ವ ಪಕ್ಷದ ಮುಖಂಡರನ್ನು ಕರೆದುಕೊಂಡು ಜಾಗ ಸ್ಥಳಾಂತರಿಸಲು ಮುಖ್ಯಮಂತ್ರಿ ಬಳಿ ಚಚ್ರೆ ನಡೆಸಲಾಗುವುದು ಎಂದರು. ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಜಾಗ ಪರಿಶೀಲಿಸಲು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು.
ಬಸನಗೌಡ ಬಾದರ್ಲಿಯವರು ಯಾವುದೇ ಕಾರಣಕ್ಕೂ ಸ್ಮಶಾನ ಇರುವ ಜಾಗದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಅಮರೇಗೌಡ ವಿರುಪಾಪುರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಕರಿಯಪ್ಪ, ಬಸನಗೌಡ ಬಾದರ್ಲಿ, ಹನುಮೇಶ ಸಾಲುಗುಂದಾ, ತಹಶೀಲ್ದಾರಾದ ಮಂಜುನಾಥ ಭೋಗಾವತಿ ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
