;

ಮರಿಯಮ್ಮನಹಳ್ಳಿ ಕೆಲ ನಿರಾಶ್ರಿತರು ಮತ್ತೆ ಭೂಮಿ ಕಳೆದುಕೊಳ್ಳುವ ಭೀತಿ! ಸರ್ಕಾರಕ್ಕೆ ಮನವಿ!!

ಮರಿಯಮ್ಮನಹಳ್ಳಿ ಕೆಲ ನಿರಾಶ್ರಿತರು ಮತ್ತೆ ಭೂಮಿ ಕಳೆದುಕೊಳ್ಳುವ ಭೀತಿ! ಸರ್ಕಾರಕ್ಕೆ ಮನವಿ!!

1953ರಲ್ಲಿ ತುಂಗಭದ್ರಾ ಆಣೆಕಟ್ಟು ಸಲುವಾಗಿ ಅಲ್ಲಿ ಮುಳುಗಡೆಯಾದ ನಾರಾಯಣ ದೇವರ ಕೆರೆಯಲ್ಲಿ ವಾಸಿಸುತ್ತಿದ್ದ ಜನರನ್ನು ಸ್ಥಳಾಂತರಿಸಲಾಯಿತು. ಹೀಗೆ ಸ್ಥಳಾಂತರಗೊಂಡ ಜನರಲ್ಲಿ ಮರಿಯಮ್ಮನಹಳ್ಳಿ ಜನರೂ ಕೂಡ. ಅಲ್ಲಿಂದ ಆಸ್ತಿ, ಮನೆ, ಹೊಲವನ್ನು ಕಳೆದುಕೊಂಡು ನಿರಾಶ್ರಿತರಾಗಿ ಬಂದ ಜನರಿಗೆ ಮರಿಯಮ್ಮನಹಳ್ಳಿ ಡಣಾಯಕನಕೆರೆ ಸುತ್ತ ಮುತ್ತ ಉಳುಮೆಗೆ ಜಮೀನುಗಳನ್ನು ಹಂಚಲಾಯಿತು. ಅದರಲ್ಲಿ SC/ST ಪಂಗಡದವರಿಗೆ ಡಣಾಯಕನಕೆರೆ ವ್ಯಾಪ್ತಿಯಲ್ಲಿ ಬರಡು ಕಲ್ಲುಮಟ್ಟಿ ಇರುವ ಭೂಮಿಯನ್ನು ಹಂಚಿದರು. ಪಾಲಿಗೆ ಬಂದದ್ದು ಪಂಚಾಮೃತ ಎನ್ನುತ್ತ ನಮ್ಮ ಹಿರಿಯರು ಕಲ್ಲು ಕಡಿದು, ಮಟ್ಟಿಗಳನ್ನು ಸವರಿ ಇರುವ ಭೂಮಿಯನ್ನೆ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಿಕೊಂಡು ಕಳೆದ 70 ವರ್ಷಗಳಿಂದ ಉಳುಮೆ ಮಾಡುತ್ತ ತಲೆಮಾರುಗಳನ್ನ ಕಳೆದಿದ್ದರೂ ಬೆರಳೆಣಿಕೆಯಷ್ಟು ಮಂದಿಗಷ್ಟೆ ಹಕ್ಕು ಪತ್ರಗಳನ್ನು ನೀಡಲಾಗಿದೆ.
2009ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB)
ಧಾರವಾಡದಿ೦ದ ನಮ್ಮ ಭೂಮಿಯನ್ನು ಕಬ್ಜ ಮಾಡಿಕೊಂಡು ಸರ್ಕಾರ ಈ ಭೂಮಿಯನ್ನು BMM ಇಸ್ಪಾತ್ ಲಿಮಿಟೆಡ್ ಕಂಪೆನಿಗೆ ನೀಡಿತು. ಇದನ್ನು ವಿರೋಧಿಸಿ ಹೋರಾಟ ಚಳವಳಿ ಮನವಿ ಪತ್ರವನ್ನು ಕೊಟ್ಟರೂ ಅಧಿಕಾರಿಗಳು ಇದನ್ನು ಲೆಕ್ಕಿಸದೆ ರಾಜಕಾರಣ ಕುತಂತ್ರ ಮತ್ತು ಅಧಿಕಾರಿಗಳ ಬಲದಿಂದ KIADB ಗೆ ರೈತರು ಒಪ್ಪದಿದ್ದರೂ ನಮ್ಮ ಭೂಮಿಯನ್ನು KIADB ಮಾಡಿದ್ದಾರೆ. KIDBಯಿಂದ ಕೆಲವು ರೈತರು ಪರಿಹಾರ ಹಣವನ್ನು ಪಡೆದಿದ್ದಾರೆ, ಇನ್ನು ಕೆಲವರು ಹಣವನ್ನು ಪಡೆದಿಲ್ಲ. 2011ರಲ್ಲಿ BMM ಕಂಪೆನಿ ಭೂಮಿಯನ್ನು ಕೊಂಡರೂ ಸಂಬಂಧಪಟ್ಟ ರೈತರಿಗೆ ಇದುವರೆಗೂ ಕೊಡಬೇಕಾದ ಯಾವ ಪರಿಹಾರವನ್ನೂ ನೀಡಿಲ್ಲ. ಮೊದಲೇ ನಿರಾಶ್ರಿತರಾಗಿ ಬಂದು ಪಡೆದ ಭೂಮಿಯಲ್ಲಿ ಅಲ್ಲಿಂದ ಇಲ್ಲಿ ತನಕ ಬರಗಾಲ ಬಂದರೂ, ಮಳೆ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೂ ನಾವು ಯಾವುದೇ ರೀತಿಯಲ್ಲಿ ಸರ್ಕಾರದ ಪರಿಹಾರ, ಸೌಲಭ್ಯಗಳನ್ನು ಪಡೆಯದೆ ಎಷ್ಟೇ ಕಷ್ಟ ಬಂದರೂ ನಿರಂತರವಾಗಿ ಉಳುಮೆ ಮಾಡುತ್ತ ಬಂದಿದ್ದೇವೆ. ಆದರೆ ಕಳೆದ ಎರಡು ತಿಂಗಳಿಂದ BMM ಇಸ್ಪಾತ್ ಲಿಮಿಟೆಡ್ ಕಂಪೆನಿಗೆ ಸೇರಿದ ನೌಕರರು ರೈತರಿಗೆ ಯಾವುದೇ ಮಾಹಿತಿ ನೀಡದೆ ನಮ್ಮ ಹೊಲಗಳಲ್ಲಿ ಸಸಿಗಳನ್ನು ನೆಡುತ್ತಿದ್ದಾರೆ. ಹೇಗೆಂದರೆ ಆಳದ ವರೆಗೂ ಗುಂಡಿ ತೋಡಿ ಸಸಿಗಳನ್ನು ನೆಡಲಾಗುತ್ತಿದೆ. ಹೀಗಿರುವಾಗ ಈ ಭೂಮಿಯನ್ನೆ ನೆಚ್ಚಿಕೊಂಡು ಉಳುಮೆ ಮಾಡುತ್ತಿರುವ ನಮ್ಮಂತವರ ಪಾಡೇನು? ಈಗಾಗಲೇ ಆಣೆಕಟ್ಟಿಗಾಗಿ ಹೊಲಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ನಾವುಗಳು ಈಗ ಪುನಃ ಹೊಲ ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದೇವೆ. ಇನ್ನೆಷ್ಟು ಇಂತಹ ಅನ್ಯಾಯಗಳನ್ನು ಎದುರಿಸಬೇಕೊ ಕಾಣೆವು.
ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ನಮ್ಮ ಮನವಿ ಏನೆಂದರೆ ಈಗಲೇ ಕಂಪನಿ ಸಸಿ ನೆಡುವ ಕೆಲಸವನ್ನು ಕೈ ಬಿಡಬೇಕು. ಜೊತೆಗೆ ನಮಗೆ ನಮ್ಮ ಹೊಲಗಳಲ್ಲಿ ಉಳುಮೆ ಮಾಡಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಾಗೇನೆ “ನಮ್ಮ ಭೂಮಿಯನ್ನು ನಮಗೆ ಮರಳಿ ಕೊಡಬೇಕು” ಇದರ ಸಲುವಾಗಿ ಇಂದು ದಿನಾಂಕ 04/02/2022 ರಂದು BMM ಇಸ್ಪಾತ್ ಲಿಮಿಟೆಡ್ ನ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು…

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;