;

ಕಂಪ್ಲಿ ಶಾಸಕ ಗಣೇಶರವರಿಂದ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟನೆ…!!!

ಶಾಸಕ ಗಣೇಶರವರಿಂದ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟನೆ
ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮದಲ್ಲಿ ತಳ್ಳಿರು ತೋರಣಗಳಿಂದ ಅಲಂಕಾರಗೊಂಡ 6ನೇ ಅಂಗನವಾಡಿ ಕೇಂದ್ರವನ್ನು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಗಣೇಶರವರು ಬುಧವಾರ ನೂತನ ಕಟ್ಟಡ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಸರೋಜ ರವರು ಸ್ವಾಗತ ಭಾಷಣ ಮಾಡಿದರು ಮಹಾಂಕಾಳಿಯವರು ಪ್ರಾರ್ಥನೆ ಹಾಡುವ ಮೂಲಕ ಜ್ಯೋತಿ ಬೆಳಗಿಸಿದರು.ಶಾಸಕರು ಮಾತನಾಡಿ ಸುಮಾರು ಅಂದಾಜು 18 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ ಪುಟ್ಟ ಪುಟ್ಟ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲ್ಲಿ ಎಂದು ಹೇಳಿದರು ಮತ್ತೆ ಇದೆ ಸಮಯದಲ್ಲಿ ಅಂಗನವಾಡಿ ಕೇಂದ್ರಕ್ಕೆ ಭೂಮಿಯನ್ನು ದಾನ ಕೊಟ್ಟವರನ್ನ ನೆನೆಯುತ್ತಾ ಇದೆ ರೀತಿ ಭೂಮಿಯನ್ನು ದಾನ ಕೊಟ್ಟರೆ ಶಾಲೆ.ಅಂಗನವಾಡಿ ಕೇಂದ್ರದ ಕಟ್ಟಡಗಳು ನಿರ್ಮಿಸಲು ಶಾಸಕರ ಅನುದಾನದಲ್ಲಿ ವ್ಯವಸ್ಥೆ ಮಾಡುತ್ತೆನೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಭೂದಾನಿಗಳಾದ ಲಕ್ಷ್ಮಣರವರನ್ನು ಶಾಸಕರು ಸನ್ಮಾನಿಸಿದರು. ಸಿಂಧುರಾಣಿಯವರು ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ತುಬಾಕಿ ಮಲ್ಲಯ ಅಧ್ಯಕ್ಷರು.ರಾಮಲಿಂಗಮ್ಮ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಅಸಿಸ್ಟೆಂಟ್ ಸಿಡಿಪಿಓ ಮಾಲುಬಿ ಮತ್ತು ನಾರಯಣಮ್ಮ.ಕೋಳೂರು ಬಿ ವೃತ್ತದ ಮೇಲ್ವಿಚಾರಕರಾದ ವೈ ಕಲ್ಯಾಣಮ್ಮ.ಪಿಡಿಒ ರಾಜೇಶ್ವರಿ.ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕ್ರಪ್ಪ. ತಾಯಪ್ಪ.ಊರಿನ ಮುಖಂಡರಾದ ಸಿದ್ದನಗೌಡ. ಶ್ರೀನಿವಾಸ.ಅಂಗನವಾಡಿ ಕಾರ್ಯಕರ್ತೆಯರಾದ ಜಯಲಕ್ಷ್ಮಿ. ಬಸಮ್ಮ.ಹೇಮಾವತಿ.ನೇತ್ರಾ. ಅನ್ನಪೂರ್ಣ.ಶ್ರೀದೇವಿ. ತಿಪ್ಪಮ್ಮ.ಸಾಯಿಕುಮಾರಿ.ವರಲಕ್ಷ್ಮಿ. ಸಹಾಯಕಿರಾದ ಜೆ ಶಾರದಾ.ಗೌರಮ್ಮ.ಲಕ್ಷ್ಮೀ ವಿಶಾಲಕ್ಷೀ.ಮಲಮ್ಮ ಇನ್ನೂ ಮುಂತಾದವರು ಉಪಸ್ಥಿತರಿದ್ದರು…

ವರದಿ. ವಿರೇಶ್ ಹಳೇಕೋಟೆ ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;