;

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ.ಕಾರ್ಯಕ್ರಮ ಯಶಸ್ವಿ…!!!

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ.

ಸಿಂಧನೂರು ಪೆ.3 ಪತ್ರಕರ್ತರು, ಸಮಾಜ ಸೇವೆ ,ಶಿಕ್ಷಣ ವಿಶಿಷ್ಟ ಕೃಷಿ ಮಾಡಿದ ಸಾಧಕರಿಗೆ ಧಾರವಾಡದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕರುನಾಡು ನಕ್ಷತ್ರ ರಾಜ್ಯ ರತ್ನ ವಿಭೂಷಣ ಪ್ರಶಸ್ತಿ 2022 ನೇ ಸಾಲಿಗೆ ನಾಗರಾಜ ಬೊಮ್ಮನಾಳ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ( ರಿ) ಕಾರಟಗಿ ಆಯ್ಕೆ ಮಾಡಿ ಗೌರವಿಸಿ ಸನ್ಮಾನಿಸಿದೆ.

ಕಾರಟಗಿಯ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ಗೆ ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘದ ಸಿಂಧನೂರು ತಾಲುಕ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಜಾಸೇನೆ ದಿನಪತ್ರಿಕೆಯ ಸಂಪಾದಕರು ,ವರದಿಗಾರರಾಗಿ ಕಾರ್ಯನಿರ್ವಹಿಸುತ್ತಾ ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರದ ಕಳೆ ತೆಗೆಯುವ ಕೃಷಿ ಮಾಡುತ್ತಾ ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯ ಕಾರ್ಯ ವೈಖರಿಯನ್ನು ಗುರುತಿಸಿ ಈ ಪ್ರಶಸ್ತಿ ಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿಯವರು ನೀಡಿ ಸನ್ಮಾನಿಸಿ ಗೌರವಿಸಿದರು . ಕಾರುಣ್ಯಾಶ್ರಮದ ತಾಯಿಯಾದ ಸುಜಾತ ಚನ್ನಬಸಯ್ಯ ಸ್ವಾಮಿ ಹಿರೇಮಠ’ ಕರುನಾಡು ಸಾಮಾಜಿಕ ಸೇವಾರತ್ನ – 2022 ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು ಮತ್ತು ಸಿಂಧನೂರಿನ ಸಮಾಜ ಸೇವಕ ಎಂದು ಹೆಸರು ಪಡೆದ ಆಟೋ ಚಾಲಕರಾದ ಉಸ್ಮಾನ್ ಪಾಷಾ ಮಕಂದರ್ ಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ಹಾಗೂ ಶಿಕ್ಷಣದಲ್ಲಿ ವಿಶಿಷ್ಟ ಸಾಧನೆ ಮಾಡಿದ ಲಕ್ಷ್ಮೀ ಸಿದ್ದಾಪುರಗೂ ಕೂಡ ಪ್ರಸಾರ ಭಾರತಿ ಸೇವಾ ಟ್ರಸ್ಟ್ ( ರಿ ) ಅದ್ಯಕ್ಷರಾದ ಜೆ.ನಾಗರಾಜ ರವರು 80 ಜನ ಸಾಧಕರಿಗೆ ಇದೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ,ಪದಕ ಗಳನ್ನು ಧಾರವಾಡ ದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ದಲ್ಲಿ ವಿತರಿಸಿ ಸನ್ಮಾನಿಸಿ ಗೌರವಿಸಿದರು.

ಇದೇ ಸಂಧರ್ಭದಲ್ಲಿ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘದ ಅದ್ಯಕ್ಷರು, ಪತ್ರಕರ್ತರಾದ ಪಂಪಾಪತಿ ಬಿ ಹೂವಿನಬಾವಿ,ಉಪಾಧ್ಯಕ್ಷರು ,ವರದಿಗಾರರಾದ ವಿರೇಶ ಹೊಸಳ್ಳಿ, ವೆಂಕೋಬ ಭೂತಲಿದಿನ್ನಿ ,ಪರಶುರಾಮ, ದುಗ್ಗಪ್ಪ ಮಲ್ಲಾಪೂರು ,ವಿರೇಶ ಹುಡಾ , ಕಾರುಣ್ಯಾಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯ ಸ್ವಾಮಿ ,ಪಂಪಯ್ಯಸ್ವಾಮಿ, ರೇಖಾ, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;