ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ . ಯಲ್ಲಿ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರಾದ ತಾಲೂಕು ಅಧ್ಯಕ್ಷ ಹರಕುಣಿ ಗಣೇಶ್ ಮತ್ತು ವಿಜಯನಗರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಚ್ ವೀರನಗೌಡ ಅವರ ಮೇಲೆ ಇಲ್ಲಿಯ ಪಿ.ಎಸ್ ಐ .ಸರಳ.ಮೇಡಂ ಅವರು ಅನಗತ್ಯ ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿ ಕೆ ಆರ್ ಎಸ್ ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರು ಪೊಲೀಸರನ್ನು ಪ್ರಶ್ನಿಸಲು ಪೋಲಿಸ್ ಠಾಣೆಗೆ ದೌಡಾಯಿಸಿದ ಘಟನೆ ಸೋಮವಾರ ಮಧ್ಯಾಹ್ನ ಜರುಗಿತು ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ .ರಾಜ್ಯ ಉಪಾಧ್ಯಕ್ಷರಾದ .ಲಿಂಗನಗೌಡ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಕೆಲಕಾಲ ವಾಗ್ವಾದ ಜರುಗಿತು .ಠಾಣೆಗೆ ಆಗಮಿಸಿದ ಮುಖಂಡರು ಮೊದಲು ಸೌಮ್ಯವಾಗಿಯೇ ಪೊಲೀಸರಲ್ಲಿ ತಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾತು ಆರಂಭಿಸಿದರು ಮಾತಿಗೆ ಮಾತು ಬೆಳೆದು ಕೆಲಕಾಲ ವಾಗ್ವಾದಕ್ಕೆ ತಿರುಗಿತು ನಂತರ ವಾತಾವರಣ ತಿಳಿಯಾಯಿತು ಉಳಿದ ಅರ್ಧ ಗಂಟೆಗೂ ಹೆಚ್ಚು ಕಾಲ ಠಾಣೆಯ ಬಾಗಿಲಲ್ಲಿಯೇ ಚರ್ಚಿಸಿದರು .ಬಳಿಕ ಸುದ್ದಿಗಾರರೊಡನೆ ಮಾತನಾಡಿದ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ನಮ್ಮ ಕಾರ್ಯಕರ್ತರಿದ.ಯಾವುದೇ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ ಆದರೆ ಅಮಾಯಕರ ಮೇಲೆ ಐಪಿಎಸ್ ಸೆಕ್ಷನ್ 353 ರ ಅಡಿಯಲ್ಲಿ ದೂರು ದಾಖಲಿಸಿದ್ದು ಪೊಲೀಸ್ ಅಧಿಕಾರಿಗಳ ವರ್ತನೆ ಸರಿಯಲ್ಲ .ಘಟನೆಯನ್ನು ಸರಿಯಾಗಿ ಇನ್ನೊಮ್ಮೆ ಪರಿಶೀಲನೆ ಮಾಡಬೇಕು ಅನಗತ್ಯವಾಗಿ ಅಮಾಯಕರನ್ನು ಸಿಲುಕಿಸುವ ವ್ಯವಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು ಪಕ್ಷದ ಜಿಲ್ಲಾಧ್ಯಕ್ಷ ಹಡಗಲಿಯ ಚಂದ್ರಶೇಖರ .ದೊಡ್ಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾ.ಯ ಗಣೇಶ್ ಹಡಗಲಿಯ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಮುಖಂಡರಾದ ವರುಣ್ ಕುಮಾರ್ ವಸಂತ್ .ಗಾದಿಲಿಂಗಪ್ಪ 30 ಕೊ.ಹೆಚ್ಚು ಕಾರ್ಯಕರ್ತರು ಹಾಜರಿದ್ದರು . .ಸಿಪಿಐ ಮಂಜುನಾಥ್. ಕೂಡ್ಲಿಗಿ ಯ ಸಿಪಿಐ ವಸಂತ್ ಅಸೋದೆ .ಪಿ ಎಸ್ ಐ. ಸರಳ ಮೇಡಂ .ತಂಬ್ರಹಳ್ಳಿ ಪಿಎಸ್ ಐ .ಎಸ್ ಮಾರುತಿ .ಪೋಲಿಸ್ ಠಾಣಾ ಸಿಬ್ಬಂದಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು…
ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ವರದಿಗಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
