ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ :ಕೆ ಕರಿಯಪ್ಪ
ವಿಧಾನಪರಿಷತ್ ಸದಸ್ಯ ವಿಶ್ವನಾಥಗೆ ತಿರುಗೇಟು ನೀಡಿದ – ಕೆ. ಕರಿಯಪ್ಪ.
ಸಿಂಧನೂರು: ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥರವರು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂರನ್ನ ಮತ್ತು ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಭಕಾಸೂರ ಎಂದು ಹೇಳಿಕೆಯನ್ನು ಖಂಡಿಸಿ ಇಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಜನರ ಮನಸಿನಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ವಿಧಾನಪರಿಷತ್ ಸದಸ್ಯ ವಿಶ್ವನಾಥ ಅವರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಕೆಳ ಮಟ್ಟದಿಂದ ಸಂಘಟಿಸಿರುವ ಸಿದ್ದರಾಮಯ್ಯನವರು ಎಲ್ಲಾ ವರ್ಗದ ಜನರ ನಾಯಕ.ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಗಳಾಗಿದ್ದಾಗ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು, ಸರ್ವರ ಹಿತ ಕಾಯುವ ಕೆಲಸ ಮಾಡಿದ್ದಾರೆ ಅಂತವರ ಬಗ್ಗೆ ಮಾತನಾಡುವಾಗ ನೀವು ಎಚ್ಚರವಹಿಸಿ ಮಾತನಾಡಬೇಕು. ನಿಮಗೆ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ನೈತಿಕ ಅರ್ಹತೆಯಿಲ್ಲ,ರಾಜ್ಯದ ಹಿತ ಕಾಯುವ ಎಲ್ಲಾ ಜನರ ಏಳಿಗೆಗಾಗಿ ಶ್ರಮಿಸುವ ಸಿದ್ದರಾಮಯ್ಯನವರ ಪರವಾಗಿ ಹೋರಾಟಕ್ಕೆ ಎಂದಿಗೂ ಸಿದ್ಧರಿದ್ದೇವೆ ಎಂದರು. ಅವರ ಬಗ್ಗೆ ಗೊತ್ತಿಲ್ಲದಿದ್ದರೆ ಇನ್ನೊಬ್ಬರಿಂದ ತಿಳಿದುಕೊಂಡು ಮಾತನಾಡುವುದನ್ನು ಕಲಿಯಿರಿ ಎಂದು ಕಿವಿ ಮಾತನ್ನು ಹೇಳುತ್ತಾ,ಈ ಬಗ್ಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಧ್ವನಿ ಎತ್ತುವ ಕೆಲಸ ಮಾಡಬೇಕೆಂದು ಪತ್ರಿಕೆ ಹೇಳಿಕೆ ಮುಖಾಂತರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಕರಿಯಪ್ಪ ಅಭಿಮಾನಿ ಬಳಗದ ಗೌರವಾಧ್ಯಕ್ಷ ಹುಸೇನಪ್ಪ ಸೂಲಂಗಿ, ಅಧ್ಯಕ್ಷ ಶ್ರೀನಿವಾಸ್ ವೈ,ಮಲ್ಲಿಕಾರ್ಜುನಪಿ.ಡಬ್ಲೂ.ಡಿ ಕ್ಯಾಂಪ್ ಕಾರ್ಯಾಧ್ಯಕ್ಷರು, ರಮೇಶ ಯಾದವ ಉಪಾಧ್ಯಕ್ಷರು,ಮುತ್ತು ಪ್ರಧಾನ ಕಾರ್ಯದರ್ಶಿ, ದೌಲಸಾಬ ದೊಡ್ಡಮನಿ ಸಹಕಾರ್ಯದರ್ಶಿ, ರಾಜು ಅಡವಿಭಾವಿ ನಗರ ಘಟಕ ಅಧ್ಯಕ್ಷರು, ನಿರುಪಾದಿ ಸೂಲಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
