;

ಚಳ್ಳಕೆರೆ :-ಸೇತುವೆ ಶಿಥಿಲವ್ಯವಸ್ಥೆಯಲ್ಲಿದ್ದರು,ಕ್ರಮವನ್ನು ತೆಗೆದುಕೊಳ್ಳದ ಸಂಬಂಧ ಪಟ್ಟ ಭ್ರಷ್ಟ ಮೇಲಾಧಿಕಾರಿಗಳು…!!!

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿನ ಪೌದಿಯಮ್ಮ(ಭಗವತಿ) ಅಮ್ಮನ ದೇವಸ್ಥಾನಕ್ಕೆ ತಿರುಗುವ ತಿರುವಿನಲ್ಲಿರುವ ಸೇತುವೆ ಭೂಮಿಯಿಂದ ಬೇರ್ಪಟ್ಟಿದ್ದು , ಇನ್ನೇನು ಆಗಲೋ , ಈಗಲೋ ಕಳಚಿ ಬೀಳುವಂತೆ ಇದ್ದು , ಈ ರಸ್ತೆಯು ಮೈಸೂರಿಗೆ ತೆರಳುವ ಪ್ರಧಾನ ರಸ್ತೆಯಾಗಿದ್ದು , ಈ ರಸ್ತೆಯಲ್ಲಿನ ಬದಿಯಲ್ಲಿರುವ ಸೇತುವೆ ಶಿಥಿಲಾ ವ್ಯವಸ್ಥೆ ಗೆ ತಲುಪಿದ್ದು ವರ್ಷಗಳೇ ಕಳೆದವು . ಹಾಗೂ ಈ ರಸ್ತೆಯು ಸಹ ಬಹಳ ಕಿರಿದಾಗಿದ್ದು ಈ ರಸ್ತೆಯಲ್ಲಿ ಆ್ಯಕ್ಸಿಡೆಂಟ್ ಗಳು ಸಹ ಬಹಳಷ್ಟು ನಡೆಯುತ್ತಿದ್ದು ಅದೆಷ್ಟೂ ಕುಟುಂಬಗಳು ಬೀದಿಪಾಲಾಗಿದೆಯೋ ತಿಳಿಯದಂತಾಗಿದೆ ಎಂದು ತಾಲ್ಲೂಕಿನ ಸಾರ್ವಜನಿಕರು ಈ ಸರ್ಕಾರದ ಮೇಲೆ ಅವರುಗಳ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ .

ಇದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಸಾರ್ವಜನಿಕರು ಹಲವು ಭಾರಿ ನಗರಸಭೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಹಾಗೂ PWD ಅಧಿಕಾರಿಗಳಿಗೆ ದೂರು ನೀಡಿದರೂ ಸಮೇತ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತೆ ಇರುವುದು ನಿಜಕ್ಕೂ ಸಹ ಶೋಷನಿಯ ವಿಷಯವಾಗಿದೆ ಎಂಬುದಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಸಂಬಂಪಟ್ಟಂತೆ ನಗರಸಭೆ ಆಡಳಿತ ಮತ್ತು PWD ಅಧಿಕಾರಿಗಳು ಎಚ್ಚೆತ್ತು ಕೊಂಡು ಸರಿಪಡಿಸಬೇಕು. ಎಂದು ಸಾರ್ವಜನಿಕರ ಕೋರಿಕೆಯಾಗಿದೆ
ದುರಾಸ್ತಿಗೊಂಡಿರುವ ಈ ಸೇತುವೆಯು ಇನ್ನೇನೂ ಇವಾಗಲೋ ಅವಾಗಲೋ ಕಳಚಿ ಬೀಳುವ ಸ್ಥಿತಿಯಲ್ಲಿರವುದರಿಂದ ತಾಲ್ಲೂಕಿನ ಶಾಸಕರು ಈ ದುರಾಸ್ತಿಗೊಂಡಿರುವ ರಸ್ತೆಯನ್ನು ಆದಷ್ಟು ಬೇಗ ಆಗಲಿಕರಣ ಮಾಡಿ ಈ ಸೇತುವೆಯನ್ನು ಸರಿಪಡಿಸಿಕೊಡುವಂತೆ ಈ ಮೂಲಕ ಹಿರಿಯೂರು ತಾಲೂಕಿನ ಸಮಸ್ತ ಸಾರ್ವಜನಿಕರ ಪರವಾಗಿ ಮನವಿ….

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;