ವಿಧಾನಪರಿಷತ್ ಚುನಾವಣೆಯಲ್ಲಿ ರಾಯಚೂರಿನ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಸಿಂದನೂರಿನ ಕಾರ್ಯಕರ್ತರಿಂದ ಆಚರಣೆ…!!!

ಸಿಂಧನೂರು : ರಾಯಚೂರು ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶ್ರೀ ಶರಣೆ ಗೌಡ ಪಾಟೀಲ್ ಬಯ್ಯಾಪುರ ಇವರ ಗೆಲುವಿನ ಸಂಭ್ರಮಾಚರಣೆಯನ್ನು ಅಮರೇಗೌಡ ಬಯ್ಯಪೂರ್ ಶಾಸಕರು ಇವರಿಗೆ ಸನ್ಮಾನಿಸಿ ಸಿಹಿ ತಿನ್ನಿಸುವ ಮೂಲಕ ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಇವರ ನೇತೃತ್ವದಲ್ಲಿ ಆಚರಿಸಲಾಯಿತು.

ರಾಯಚೂರು – ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಾಪೂರು ಭರ್ಜರಿ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ನ ಶರಣೇಗೌಡ ಬಯ್ಯಾಪೂರುಗೆ 3362 ಮತಗಳು,ಬಿಜೆಪಿಯ ವಿಶ್ವನಾಥ ಬನ್ನಹಟ್ಟಿಗೆ 2942 ಮತಗಳು,427 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಾಪೂರು ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಶರಣೇಗೌಡರ ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದಾರೆ. ಪಟಾಕಿ ಹಾರಿಸಿ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ
ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್,ಖಾಜಿ ಮಲ್ಲಿಕ್ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್, ಬಸವರಾಜ ಹಿರೇಗೌಡರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಅನಿಲ್ ಕುಮಾರ್ ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಹಿರಿಯ ಮುಖಂಡರಾದ ಕಾಳಿಂಗಪ್ಪ ವಕೀಲರು, ದೊಡ್ಡನಗೌಡ ಕಲ್ಲೂರ್, ಅಯ್ಯಪ್ಪ ಅಧ್ಯಕ್ಷರು ಬಾದರ್ಲಿ, ಗ್ರಾಮ ಪಂಚಾಯಿತಿ ಕ್ರಾಂತಿ ಕುಮಾರ್,ನಗರಸಭೆಯ ಸದಸ್ಯರಾದ ಕರೀಂ ಸಾಬ್, ಅಮ್ಜಾದ್ ಖಾನ್, ಪ್ರಭುರಾಜ್, ಮುನೀರ್ ಪಾಷಾ, ಛತ್ರಪ.ಕೆ, ವೆಂಕಟೇಶ್ ದತ್ತುರಾವ್, ಎಚ್ ಭಾಷಾ,ಆಲಮ್ ಭಾಷಾ, ಶರಣಪ್ಪ ಉಪ್ಪಲದೊಡ್ಡಿ, ತಿಮ್ಮಯ್ಯ ಬಂಗಿ,ವೀರೇಶ್ ಹಟ್ಟಿ,ಸುರೇಶ್ ಜಾದವ್, ವೀರೇಶ್ ಪಟೇಲ್ ವಾಡಿ, ಮೈಬೂಬ್, ಶಪ್ಪು ಖಾನ್, ಇಬ್ರಾಹಿಂ ಬಾಬಾ, ನಾಗರಾಜ್ ಕೌತಾಳ,ಸಾಮಾಜಿಕ ಜಾಲತಾಣ ವಿಭಾಗದ ಬಸವರಾಜ ಪಾಟೀಲ್ ವಾಗೀಶ್, ಬಾಬಾ ಬಾಲ್ ನಾಯಕ್ ಇನ್ನು ಮುಂತಾದವರು ಉಪಸ್ಥಿತರಿದ್ದರು..

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend