;

ಸಿಂಧನೂರು :ಐಕ್ಯೂ ಇಂಟರ್ ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ…!!!

ಸಿಂಧನೂರು :ಐಕ್ಯೂ ಇಂಟರ್ ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ.

ನಗರದ ನೆಕ್ಕುಂಟಿ ಸೂರ್ಯನಾರಾಯಣ ಎಜುಕೇಶನ್ ಟ್ರಸ್ಟ್ , ಐಕ್ಯೂ ಇಂಟರ್ ನ್ಯಾಷನಲ್ ಪಿಯು ಕಾಲೇಜು, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಶ್ರೀರಾಮನಗರ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಶಕ್ತಿ ರಕ್ತ ಭಂಡಾರ ಕೇಂದ್ರ ಸಿಂಧನೂರು, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಹೊಸಳ್ಳಿ ಕ್ಯಾಂಪ್, ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹೊಸಳ್ಳಿ (ಇ. ಜೆ) ಕ್ಯಾಂಪ್ ಸಿಂಧನೂರಿನ ಹೊರವಲಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಳಿಕೃಷ್ಣ ತಾಲೂಕು ಕಮ್ಮವಾರಿ ಸಂಘ ಅಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀರಾಮಚಂದ್ರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಜುನಾಥ್ ಭೋಗಾವತಿ ತಾಲೂಕು ದಂಡಾಧಿಕಾರಿಗಳು ಮಾತನಾಡಿ ಒಂದು ಜೀವ ಉಳಿಸುವ ಸದುದ್ದೇಶದಿಂದ ರಕ್ತದಾನ ಮಾಡಬೇಕು. ನಮ್ಮ ಜೀವವನ್ನು ಉಳಿಸಬಹುದು. ರಕ್ತವನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಆರೋಗ್ಯವಂತ ವ್ಯಕ್ತಿ ಮತ್ತೊಬ್ಬರಿಗೆ ರಕ್ತದಾನ ಮಾಡಿದರೆ ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು
ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶ್ರೀಮತಿ ಸೌಮ್ಯ ಹಿರೇಮಠ್ ಪಿಎಸ್ಐ ಸಿಂಧನೂರು, ಅಶೋಕ್ ನಲ್ಲ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿಗಳು, ಡಾ.ಅಜೇಯ ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಡಾ. ಅರವಿಂದ, ಡಾ. ವಿಶ್ವನಾಥರೆಡ್ಡಿ ಆಡಳಿತಾಧಿಕಾರಿಗಳು ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಡಾ. ಹನುಮಂತಪ್ಪ ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಅಭಿಲಾಶ್ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಕಾಪುರ, ಗೌತಮ್ ಆರೋಗ್ಯ ಕೇಂದ್ರ ಹೊಸಳ್ಳಿ, ಶ್ರೀಮತಿ ಸುಗುಣ ಇನ್ನೂ ಅನೇಕರು ಭಾಗವಹಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;