;

ಮನೆಕುಸಿದು ಮೃತಪಟ್ಟ ಕುಟುಂಬಕ್ಕೆ,ವಸತಿ ಯೊಂದಿಗೆ 10ಲಕ್ಷ ಪರಿಹಾರ ನೀಡಬೇಕು- ಗುನ್ನಳ್ಳಿ ರಾಘವೇಂದ್ರ ಆಗ್ರಹ…!!!

ಮನೆಕುಸಿದು ಮೃತಪಟ್ಟ ಕುಟುಂಬಕ್ಕೆ,ವಸತಿ ಯೊಂದಿಗೆ 10ಲಕ್ಷ ಪರಿಹಾರ ನೀಡಬೇಕು- ಗುನ್ನಳ್ಳಿ ರಾಘವೇಂದ್ರ ಆಗ್ರಹ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಡೇಲಡಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತುಪ್ಪಕ್ಕನಹಳ್ಳಿ ಗ್ರಾಮದಲ್ಲಿ, ಇತ್ತೀಚೆಗೆ ಮನೆ ಬಿದ್ದು ವೃದ್ಧೆ ಎಂ.ಬಿ.ಕೊಟ್ರಮ್ಮ ಮೃತಪಟ್ಟಿರುವ ಘಟನೆ ಜರುಗಿತ್ತು.ಮೃತರ ಕುಟುಂಬವನ್ನು ಭೆಟ್ಟಿಯಾದ ಸಿಐಟಿಯು ಕಾರ್ಯದರ್ಶಿ ಹಾಗೂ ಎಸ್ಡಿ ಎಮ್ಸಿ ರಾಜ್ಯಮುಖಂಡ,ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ಭೆಟ್ಟಿ ಮಾಡಿ ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು.ನಂತರ ಮಾತನಾಡಿ ಸರ್ಕಾರ ಶೀಘ್ರವೇ ಮೃತ ನಿರಾಶ್ರಿತ ಕುಟುಂಬಕ್ಕೆ ವಸತಿ ಕಲ್ಪಿಸಬೇಕು, ಹಾಗೂ ಹತ್ತು ಲಕ್ಷರೂ ಪರಿಹಾರ ನೀಡಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಹತ್ತಾರು ನಿರಾಶ್ರಿತರಿದ್ದು ಅವರು ವಸತಿ ಹೊಂದಿಲ್ಲ,ಪ್ರತಿ ಗ್ರಾಮಗಳಲ್ಲಿ ಹತ್ತಾರು ನಿರಾಶ್ರಿತರು ಬೀಳುವಂತಹ ದುಸ್ಥಿತಿಯ ಮನೆಗಳಲ್ಲಿದ್ದಾರೆ.ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ನಿರಾಶ್ರಿತರು ಬೀಳುವಂತಹ ಶಿಥಿಲಾವಸ್ಥೆಯ ಮನೆಯಲ್ಲಿದ್ದಾರೆ. ಅವರ ಜೀವಕ್ಕೆ ಬೆಲೆ ಇಲ್ಲವೇ.!? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇಕಾಬಿಟ್ಟಿ ಆಶ್ವಾಸನೆಗಳನ್ನು ನೀಡೋ ಜನಪ್ರತಿನಿಧಿಗಳು,ಸಂಕಷ್ಥದಲ್ಲಿರುವ ಬೀದಿಗೆ ಬಂದಿರುವ ನಿರಾಶ್ರಿತರ ಹಾಗೂ ಬಡ ಕಾರ್ಮಿಕರ ಗೋಳು ಆಲಿಸುತ್ತಿಲ್ಲ ಎಂದು ದೂರಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೇ ಮನೆಬಿದ್ದು ಮೃತಪಟ್ಟಿರುವ ಕುಟುಂಬಗಳಿಗೆ,ಶೀಘ್ರವೇ ವಸತಿಯೊಂದಿಗೆ 10ಲಕ್ಷರೂ ಪರಿಹಾರ ನೀಡಬೇಕು ಮತ್ತು ನಿರಾಶ್ರಿತ ಕುಟುಂಬಗಳಿಗೆ.ಶೀಘ್ರವೇ ವಸತಿಯೊಂದಿಗೆ ಯೋಗ್ಯ ಪರಿ ಮತ್ತು ಪರಿಹಾರ ಕಲ್ಪಿಸಬೇಕೆಂದು ರಾಘವೇಂದ್ರ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಸಂಸದರು ಮನಸ್ಸು ಮಾಡಬೇಕಿದೆ ಮತ್ತು ಶೀಘ್ರವೇ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕಿದೆ,ಸೂಕ್ತ ಪರಿಹಾರ ನೀಡಬೇಕಿದೆ ಅವರು ತಮ್ಮ ಕನಿಷ್ಠ ಜವಾಬ್ದಾರಿಯನ್ನ ಸಕಾಲಕ್ಕೆ ನಿರ್ವಹಿಸಬೇಕಿದೆ.ತಾಲೂಕಾಡಳಿತ ಜಿಲ್ಲಾಡಳಿತ ಪ್ರಾಮಾಣಿಕವಾಗಿ ನೆರವು ಕಲ್ಪಿಸಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಜನವಿರೋಧಿನೀತಿಯ ವಿರುದ್ಧ ,ಸಮಾನ ಮನಸ್ಕ ಸಂಘಟನೆಗಳು ಹಾಗೂ ವಿವಿದ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಬೀದಿಗಿಳಿದು ಹೋರಾಡಬೇಕಾಗುತ್ತದೆ.ನಮ್ಮದು ಪಕ್ಷಾತೀತ ಹೋರಾಟವಾಗಿದ್ದು, ಪಕ್ಷಾತೀತವಾಗಿ ಸಮಾನ ಮನಸ್ಕ ಜನಪ್ರತಿನಿಧಿಗಳ ಸಹಕಾರದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ವೃದ್ಧೆ ಮನೆಕುಸಿತಕ್ಕೆ ಬಲಿಯಾಗಿರುವುದು ಒಂದು ದುರಾದೃಷ್ಟ ಸಂಗತಿಯಾಗಿದ್ದು, ತುಪ್ಪಕ್ಕನಹಳ್ಳಿಯ ಕೊಟ್ರಮ್ಮಳು ಮೃತಪಟ್ಟಿರುವ ಅನಾವುತಕ್ಕೆ ಪ್ರಕೃತಿಯ ವೈಪರಿತ್ಯ ಕಾರಣವಾದರೂ,ಸ್ಥಳೀಯ ಆಡಳಿತ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೂ ಪರೋಕ್ಷ ಕಾರಣ ಎಂದು ಅವರು ಕಿಡಿಕಾರಿದ್ದಾರೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸದೇ ಸ್ಥಳೀಯ ಆಡಳಿತ ನಿರ್ಲಕ್ಷ್ಯ ತೋರಿದ್ದು,ಇಂತಹ ಕುಟುಂಬಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ಅನಾವುತಕ್ಕೆ ಕಾರಣ ಎಂದು ರಾಘವೇಂದ್ರ ದೂರಿದ್ದಾರೆ.ಈ ಸಂದರ್ಭದಲ್ಲಿ ಹೋರಾಟಗಾರ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ, ತುಪ್ಪಕ್ಕನಹಳ್ಳಿ ಗ್ರಾಮಸ್ಥರು ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು…

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;