;

ಗೌರಿ ಹಬ್ಬದ ಸಂಭ್ರಮದಲ್ಲಿದ್ದ ನಾರಿಯರ ಜೊತೆಗೂಡಿ ಶುಭಕೋರಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ,ಎಂ ಪಿ ವೀಣಾ ಮಹಾಂತೇಶ್!!

ಗೌರಿ ಹಬ್ಬದ ಸಂಭ್ರಮದಲ್ಲಿದ್ದ ನಾರಿಯರ ಜೊತೆಗೂಡಿ ಶುಭಕೋರಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ #ಎಂ_ಪಿ_ವೀಣಾ_ಮಹಾಂತೇಶ್!!

ಇದೇನು ಆಶ್ಚರ್ಯ ಅನ್ಕೋಬೇಡಿ.. ಗೌರಿ ಹುಣ್ಣಿಮೆಯ ನಂತರದಲ್ಲಿ ಗೌರಿ ಪೂಜೆಯ ಸಂಭ್ರಮದಲ್ಲಿರುವ ಪೋರಿಯರು ನಾವೂ ಸಂಚರಿಸುವ ಕೂಡ್ಲಿಗಿ ತಾಲ್ಲೂಕಿನಾದ್ಯಂತ ರಸ್ತೆಗೆ ಅಡ್ಡಲಾಗಿ ನಿಂತು ವಾಹನ ಸವಾರರಿಗೆ ತಡೆದು ಹಣ ಸಂಗ್ರಹಿಸಿ ಹಬ್ಬದಾಚರಣೆ ಮಾಡುವ ವಿಧಾನ ಈ ಹಿಂದಿನಿಂದಲೇ ನಡೆಯುತ್ತಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಆ ಸಂಭ್ರಮ ಮುಂದುವರೆದಿದ್ದು ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ಅವರು ಬಳ್ಳಾರಿಯಲ್ಲಿ ವಿ.ಪ ಸದಸ್ಯ ಕೆ.ಸಿ ಕೊಂಡಯ್ಯ ನವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಮುಗಿಸಿ ಹರಪನಹಳ್ಳಿಗೆ ವಾಪಸ್ ಬರುವಾಗ ದಿಢೀರನೇ ತಮ್ಮ ಕಾರಿಗೆ ಒಬ್ಬರ ಕೈಯನ್ನೊಬ್ಬರು ಹಿಡಿದು ಸರಪಳಿ ನಿರ್ಮಿಸಿ ಅಡ್ಡಲಾಗಿ ಬಂದ ಪೋರಿಯರ ಕಂಡು ಕಾರು ನಿಲ್ಲಿಸಿ ವಿಚಾರಿಸಿದಾಗ ಮೇಲಿನ ಹಬ್ಬದ ಆಚರಣೆಯ ಬಗ್ಗೆ ತಿಳಿದುಕೊಂಡರು.
ರಸ್ತೆಯಲ್ಲಿ ಸಂಚರಿಸುವವರು ತಾವೂ ತಮ್ಮ ಕೈಲಾದ ಧನ ಸಹಾಯವನ್ನು ನೀಡಿ ಹೊರಟು ಹೋಗುತ್ತಾರೆ. ಅದಕ್ಕೆ ಅಪವಾದ ಎಂಬಂತೆ ಎಂ.ಪಿ ವೀಣಕ್ಕನವರು, ಕಾರು ನಿಲ್ಲಿಸಿದ್ದೇ ತಡ ಕಾರಿನಿಂದಿಳಿದು ಅಲ್ಲೊಂದು, ಇಲ್ಲೊಂದು ಗುಂಪಿನಲ್ಲಿ ಹಣ ಸಂಗ್ರಹಕ್ಕೆ ನಿಂತಿದ್ದ ಯುವತಿಯರನ್ನು ಗುಂಪುಗೂಡಿಸಿ, ಆ ಪೋರಿಯರೊಂದಿಗೆ ಹಬ್ಬದ ಸಂಭ್ರಮಾಚರಣೆಯನ್ನು ಅನುಭವಿಸಿ, ತಮ್ಮ ಕೈಲಾದ ಧನಸಹಾಯ ನೀಡಿ. ತಾವೂ ಆ ಯುವತಿಯರ ಪಾಲಿನ ವಿಶೇಷ ಪ್ರತಿನಿಧಿ ಎಂಬುದಾಗಿ ಕರೆಸಿಕೊಂಡರು….
ಗೌರಿ ಹಬ್ಬದ ಸಂಭ್ರಮದಲ್ಲಿದ್ದ ಯುವತಿಯರಿಗೆ ದೇವರು ಶುಭವನ್ನುಂಟು ಮಾಡಲಿ.. ಎಲ್ಲ ಯುವತಿಯರಿಗೂ ಭವಿಷ್ಯದ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ…..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;