;

ಸಂಗೀತ ನಿರ್ದೇಶಕ ರಂಗಭೂಮಿ ಕಲಾವಿದ ಚಿರತಗುಂಡು ಏಕಾಂತಪ್ಪ ಇನ್ನಿಲ್ಲ…!!!

ಸಂಗೀತ ನಿರ್ದೇಶಕ ರಂಗಭೂಮಿ ಕಲಾವಿದ ಚಿರತಗುಂಡು ಏಕಾಂತಪ್ಪ ಇನ್ನಿಲ್ಲ.

ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಚಿರತಗುಂಡು ಗ್ರಾಮದ ರಂಗಭೂಮಿ ಕ್ಷೇತ್ರದ ನಕ್ಷತ್ರ ಎಂದೇ ಗುರುತಿಸಲಾಗುತ್ತಿದ್ದ ಸಂಗೀತ ನಿರ್ದೇಶಕ ಹಿರಿಯಕಲಾವಿದ ಚಿರತಗುಂಡು ಏಕಾಂತಪ್ಪ (46) ಸೋಮವಾರ ನಿಧನರಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು.ಅಪಾರ ಬಂಧು ಬಳಗವನ್ನು ರಂಗಭೂಮಿ ಕಲಾವಿದರನ್ನು ಬಿಟ್ಟು ಅಗಲಿದ್ದಾರೆ. ಗ್ರಾಮೀಣಾ ಭಾಗದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನ ಮಾಡಿಸಿ ಪರಿಚಯಿಸಿದ ಮಹತ್ವದ ಕೊಂಡಿಯೊಂದು ಈ ಮೂಲಕ ಕಳಚಿದಂತಾಗಿದೆ. ಮೂಲತಃ ತಾಲೂಕಿನ ಗಡಿ ಗ್ರಾಮ ಚಿರತಗುಂಡು ಗ್ರಾಮದವರಾದ ಏಕಾಂತಪ್ಪ ಕಳೆದೆರಡು ವಾರಗಳಿಂದ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಚಿರತಗುಂಡು ಗ್ರಾಮದಲ್ಲಿ ಇಹಲೋಕ ತ್ಯಜಿಸಿದರು.

ರಂಗಭೂಮಿ ಕಲಾವಿದ ಸಂಗೀತ ನಿರ್ದೇಶಕ, ಗಾಯಕ, ಗೀತರಚನಾಕಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತರಾಗಿದ್ದ ಏಕಾಂತಪ್ಪ ಕನ್ನಡ ಮತ್ತು ತೆಲುಗು ರಂಗಭೂಮಿಕೆಗೆ ಶ್ರೀಮಂತಿಕೆ ತಂದುಕೊಟ್ಟಿದ್ದರು.ಚಿತ್ರದುರ್ಗಾ.ಬಳ್ಳಾರಿ.ದಾವಣಗೆರೆ.ಪಕ್ಕದ ಆಂಧ್ರಪ್ರದೇಶದಲ್ಲಿ ಸಾಕಷ್ಟು ಸಾಮಾಜಿಕ ಪೌರಾಣಿಕ ನಾಟಕಗಳನ್ನು ಹಾಡಿಸಿ ಯಶಸ್ವಿಯಾಗಿ ರಂಗದ ಮೇಲೆ ತಂದಿದ್ದ.ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರಲ್ಲಿತ್ತು.ಕೊನೆವರೆಗೂ ರಂಗಭೂಮಿ ಸೇವೆಯಲ್ಲೆ ಜೀವನ ನಡೆಸಿದರು.

ಚಿರತೆ ಗುಂಡು ಗ್ರಾಮದ ವಾಲ್ಮೀಕಿ ಸಮಾಜದ ರುದ್ರಭೂಮಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

*ಸಂತಾಪ*: ನಿಧನಕ್ಕೆ ಮೊಳಕಾಲ್ಮೂರು ಮಾಜಿ ಶಾಸಕರಾದ ನೆರಲಗುಂಟೆ ತಿಪ್ಪೇಸ್ವಾಮಿ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಶಾಸನ ಸಮಿತಿ ಸದಸ್ಯರಾದ ಡಿ.ಓ.ಮುರಾರ್ಜಿ. ಗಾಯಕ ತಿಮ್ಮನಹಳ್ಳಿ ಡಿ.ಬಿ ನಿಂಗರಾಜು ಸೇರಿದಂತೆ ವಿಜಯನಗರ ಬಳ್ಳಾರಿ ಜಿಲ್ಲೆಯ ರಂಗಾಸಕ್ತರು.ಕೂಡ್ಲಿಗಿ ತಾಲೂಕಿನ ಹವ್ಯಾಸಿ ರಂಗಭೂಮಿ ಕಲಾವಿದರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ…

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;