;

ಹರಪನಹಳ್ಳಿ ಕ್ಷೇತ್ರದ ಜನನಾಯಕಿ ಎಂಪಿ ವೀಣಾ ಮಹಾಂತೇಶ್ ಅವರಿಂದ ಯಕ್ಷಗಾನ ಮತ್ತು ರಂಗ ಪ್ರಯೋಗಕ್ಕೆ ಚಾಲನೆ…!!!

*ಇಂದು ಹರಪನಹಳ್ಳಿ ತಾಲೂಕಿನ ಬಸವನಾಳ ಗ್ರಾಮದಲ್ಲಿ ಕ್ಷೇತ್ರದ ಜನನಾಯಕಿ ಎಂಪಿ ವೀಣಾ ಮಹಾಂತೇಶ್ ಅವರಿಂದ ಯಕ್ಷಗಾನ ಮತ್ತು ರಂಗ ಪ್ರಯೋಗಕ್ಕೆ ಚಾಲನೆ*
ನೈಪುಣ್ಯ ಟ್ರಸ್ಟ್ ಉದ್ಘಾಟನೆ ನಿಮಿತ್ಯ ಇಂದು ದಿನಾಂಕ 15/11/2021 ರಂದು ರಂಗ ಪ್ರಯೋಗ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬಸವನಾಳು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು . ಯಕ್ಷಗಾನ ರಂಗಪ್ರಯೋಗಕ್ಕೆ ಎಂಪಿ ವೀಣಾ ಮಹಾಂತೇಶ್ ಡೊಳ್ಳು ಬಾರಿಸುವದರ ಮುಖಾಂತರ ಚಾಲನೆ ನೀಡಿದರು . ತಾಲೂಕಿನ ಚಿಕ್ಕ ಗ್ರಾಮ ಬಸವನಾಳ ದಲ್ಲಿ ನೈಪುಣ್ಯ ಟ್ರಸ್ಟ್ ಮುಖಾಂತರ ಅರ್ಥಗರ್ಭಿತ ಸಮಾಜಕ್ಕೆ ಒಳ್ಳೆಯ ಸಂದೇಶ್ ಸಾರುವ ನಾಟಕ , ಯಕ್ಷಗಾನ ,ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಯುವಜನಾಂಗವನ್ನು ಪುನಃ ನಾಡಿನ ಸಾಂಸ್ಕೃತಿಕ ಬೇರಿನ ತವರು ಹಳ್ಳಿಗಳ ಮಟ್ಟಕ್ಕೆ ಆಕರ್ಷಿಶಿ ಕಲೆ ಸಾಹಿತ್ಯದ ಸ್ಪರ್ಶ ನೀಡುವ ಸಂಘಟಿಕರ ಪ್ರಯತ್ನವನ್ನು ಶ್ಲಾಘಿಸಿ ತಂದೆ ಎಂಪಿ ಪ್ರಕಾಶರನ್ನು ನೆನಪಿಸಿ ಕೊಂಡರು .ರಾಷ್ಟ್ರೀಯ ದೇಶಿ ಶೈಲಿ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರು ಟ್ರಸ್ಟ್ ಉದ್ಘಾಟಿಸಿದರು . ರಂಗ ನಿರ್ದೇಶಕ ಬಿ. ಪರುಶರಾಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿಎಸ್ಐ ನಾಗರಾಜ್ , ಮೀನಾಕ್ಷಮ್ಮ , ಬಸವರಾಜ್ , ಫಕೀರಪ್ಪ , ದೇವರಾಜ್ , ಹೆಚ್ ದೇವರಾಜ್ , ನಾಗಮ್ಮ ,ಮದ್ದಾನಪ್ಪ ಕೊಟ್ರೇಶ್ , ಉಮಾಮಹೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ಶಾಲೆಗೆ ಭೂಧಾನ ಮಾಡಿದ ಶ್ರೀ ತೇಜೇಶ್ವರ ಗೌಡರ ಮತ್ತು ಸರಕಾರಿ ಸೇವೆ ಮಾಡುತ್ತಿರುವ ಪ್ರತಿಭಾನ್ವಿತರಿಗೆ ಗೌರವ ಸನ್ಮಾನ ಸಲ್ಲಿಸಿದರು ….

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;