;

ಮೊಳಕಾಲ್ಮೂರು: ಶೇಂಗಾ ಇಳುವರಿ ಕುಸಿತದಿಂದ ಕಂಗಾಲಾದ ರೈತರು.!

ಮೊಳಕಾಲ್ಮೂರು: ಶೇಂಗಾ ಇಳುವರಿ ಕುಸಿತದಿಂದ ಕಂಗಾಲಾದ ರೈತರು.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾದ ಕಟಾವು ಕಾರ್ಯ ಆರಂಭವಾಗಿದೆ. ಇಳುವರಿ ಕುಸಿತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಈ ಭಾಗದ ಮುಖ್ಯವಾಣಿಜ್ಯ ಬೆಳೆ ಎಂದು ಶೇಂಗಾ ಹಲವು ವರ್ಷಗಳಿಂದ ಗುರುತಿಸಿಕೊಂಡಿದೆ. ತಾಲ್ಲೂಕಿನಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಉತ್ತಮವಾಗಿ ಬೆಳೆದಿದ್ದ ಶೇಂಗಾ ಅಕ್ಟೋಬರ್ ತಿಂಗಳಿನಲ್ಲಿ ಕೈಕೊಟ್ಟ ಮಳೆಯಿಂದಾಗಿ ಪೂರ್ಣ ಕೈತಪ್ಪಿತು. ಹಾಗೂ ಕಾಯಿ ಕಟ್ಟುವ ಸಮಯದಲ್ಲಿನ ಮಳೆ ಅಭಾವವು ಸಂಕಷ್ಟಕ್ಕೀಡು ಮಾಡಿದೆ. ಸಾಮಾನ್ಯವಾಗಿ ನವೆಂಬರ್ ಅಂತ್ಯಕ್ಕೆ ಶೇಂಗಾ ಕಟಾವು ಮಾಡಲಾಗುತ್ತಿತ್ತು. ಆದರೆ ಈ ವರ್ಷ ತುಸು ಮುಂಚೆ ಬಿತ್ತನೆ ಮಾಡಲಾಗಿದೆ. ಅಲ್ಲದೇ ಕೊಳೆರೋಗ ಕಾಣಿಸಿಕೊಂಡು ಬುಡ ಕೊಳೆಯಲು ಆರಂಭವಾಗಿರುವುದರಿಂದ ಕಟಾವಿಗೆ ರೈತರು ಮುಂದಾಗಿದ್ದಾರೆ. ಹಸಿ ಇಲ್ಲದ ಕಾರಣ ಮಡಿಕೆ ಒಡೆದು ಕಟಾವು ಮಾಡಲಾಗುತ್ತಿದೆ. ಇದರಿಂದ ಹೆಚ್ಚು ಖರ್ಚಾಗುತ್ತಿದೆ ಎಂದರು 4 ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, 24 ಚೀಲ ಇಳುವರಿ ಬಂದಿದೆ ಕಾಯಿ ಜಟ್ಟಿದ್ದು ತೂಕವಿಲ್ಲ ಎಂದು ರೈತರಾದ ನಾಗೇಂದ್ರಪ್ಪ, ನಾಗಣ್ಣ ಅಳಲು ತೋಡಿಕೊಂಡಿದ್ದಾರೆ….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;