ಶಹಾಪುರ ತಾಲೂಕಿನ, ಬೀರನೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ತಾಳಕ್ಕೆ, ತನಿಖಾಧಿಕಾರಿ, ಶಂಖರ್ ರೆಡ್ಡಿ ಮೌನ..
ನಮ್ಮ ರಾಜ್ಯದಲ್ಲಿ ಹಲವು ಗ್ರಾಮಪಂಚಾಯಿತಿಗಳಲ್ಲಿ ಹತ್ತು ಹಲವು, ಬೋಗಸ್ ಹಾಗೂ ಅಭಿವೃದ್ಧಿ ಅಧಿಕಾರಿ ಹಾಗೂ ಹಲವು ರಾಜಕಾರಣಿ ಕೈಗಳಿಗೆ ಸರ್ಕಾರದ ಯೋಜನೆಗಳು ಸಿಲುಕಿ ಬಡವರ ಕೈಗೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಾಟಕೀಯ ರೀತಿಯಲ್ಲಿ ಆಡಳಿತ ವ್ಯವಸ್ಥೆ ನಡೆಯುತ್ತಿದ್ದರು ಯಾವೊಬ್ಬ, ಶಾಸಕರಾಗಲಿ ಸಂಬಂಧ ಪಟ್ಟ ಮೇಲಾಧಿಕಾರಿಗಳಗಲಿ ಯಾರು ಸಹ ಇಂತಹ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣವನ್ನು ಹಾಕುವುದನ್ನು ಬಿಟ್ಟು ಬರೀ ಬೊಗಳೆಯ ರೀತಿಯಲ್ಲಿ ಬರೀ ಅಸ್ವಾಸನೆಯ ಮಹಾ ಪೂರವನ್ನು ಅರೆಸಿ, ರಾಜಕೀಯ ನಾಟಕವನ್ನು ಆಡುವುದನ್ನು ನೋಡಿದರೆ, ಇದು ರಾಮ ರಾಜ್ಯವ ಅಥವಾ ರಾವಣರ ರಾಜ್ಯವೋ ಎಂಬುದು ಮಾತ್ರ ಇಲ್ಲಿ ಅನುಮಾನ ರೀತಿಯಲ್ಲಿ ಇದ್ದುಕಾಣುವುದು ಮಾತ್ರ ಶೋಷಣೆಯ ಸಂಕೇತ ಹಾಗೂ ಇದನ್ನು ಪ್ರಶ್ನೆ ಮಾಡಲು ಹಲವು ಸಾಮಾಜಿಕ ಕಾರ್ಯಕರ್ತರು ಹೊರಟರೆ ಇವರಿಗೆ ಇಲ್ಲ ಸಲ್ಲದ ಆರೋಪ ಮತ್ತು ಜೀವ ಬೆದರಿಕೆಯ ಕರೆ ತಪ್ಪಿದ್ದಲ್ಲ ಅಂದರೆ ಇಲ್ಲಿ ನಮ್ಮ ನಾಡಲ್ಲಿ ನಾವು ಮತವನ್ನು ಚಲಾಯಿಸಿ ಸಮಾಜವನ್ನು ಉದ್ದಾರ ಮಾಡಲಿ ಎಂದು ಆರಿಸಿ ಕಳಿಸಿರುವ ಜನಪ್ರತಿನಿದಿನಗಳು ಮಾಡುವ ಕಾರ್ಯ ಇದೆಯಾ ಎನ್ನುವ ಅನುಮಾನ ಎಲ್ಲರಲ್ಲಿ ಕಾಡುವ ಯಕ್ಷ ಪ್ರಶ್ನೆ.ಈಗ ನಾವು ಹೇಳ ಹೊರಟಿರುವ ಗ್ರಾಮಪಂಚಾಯಿತಿಯ ವಿವರ ಅಂದರೆ ಈ ಒಂದು ಗ್ರಾಮಪಂಚಾಯಿತಿ ಇರುವುದು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ “ಬೀರನೂರು ಎನ್ನುವ ಗ್ರಾಮಪಂಚಾಯಿತಿ ವಿಷಯದ ಬಗ್ಗೆ ಇಲ್ಲಿರುವ ಈ ಇಂದೇ ಇದ್ದ ಅಭಿವೃದ್ಧಿ ಅಧಿಕಾರಿ “ಹನುಮಂತರಾಯಪ್ಪ “ಎನ್ನುವ ಉದ್ದಟತನದ ಬೇಜವಾಬ್ದಾರಿ ಅಭಿವೃದ್ಧಿ ಅಧಿಕಾರಿಯ ಆಡಳಿತ ಅವಧಿಯಲ್ಲಿ, ಹಲವಾರು SBM ಯೋಜನೆಯ ಶೌಚಾಲಯಗಳು ಒಬ್ಬರದ್ದು ಇನ್ನೊಬ್ಬವರಿಗೆ, ಹಾಗೂ ಮತ್ತೊಬ್ಬರದ್ದು ಇನ್ಯಾರಿಗೋ ಮಾಡಿ ಹಾಗೂ “ಶಾಲಾ ವಿದ್ಯಾರ್ಥಿಗಳ ಬುಕ್ ಬಿಲ್ ಕೊಡಲು ಸತಾಯಿಸಿ “ಅಂದು ಬಾ ಇಂದು ಬಾ ಎನ್ನುವಂತೆ, ಹಳೆ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ದೆವ್ವ ಬಂದಾಗ “ನಾಳೆ ಬಾ “ಎನ್ನುವ ಬರವಣಿಗೆಯನ್ನು ಹೇಗೆ ಬರೆದಿರುತ್ತಾರೋ ಅದೇ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ದಿನಮ್ ಪ್ರತಿ ಓಡಾಡಿಸಿ ಅವರಿಗೆ ಪಂಗನಾಮವನ್ನು ಅಚ್ಚಿಸಿದ್ದಲ್ಲದ್ದೇ, ಸಂಬಂಧ ಪಟ್ಟ ಗ್ರಾಮಪಂಚಾಯಿತಿ ಹಲವು ಹಳ್ಳಿಗಳ ಗ್ರಾಮಸ್ಥರಿಗೆ ಶೌಚಾಲಯ, ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ವಿಫಲರಾಗಿರುವ ಇಂತಹ “ಭ್ರಷ್ಟ “ಅಧಿಕಾರಿಯ ಆಡಳಿತ ವ್ಯವಸ್ಥೆಯನ್ನು ಖಂಡಿಸಿ ಗ್ರಾಮದ ಹಲವು ಯುವಕರು, ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ಮನವಿಯನ್ನು ಕೊಟ್ಟರು ಸಹ ಏನೂ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಬೀರನೂರು ಗ್ರಾಮದ ಯುವಕರು ಹಾಗೂ, ಗ್ರಾಮಪಂಚಾಯಿತಿ ಸದಸ್ಯರು ಅಂದರೆ ಹೇಗಿರಬೇಕು ಈ ಭ್ರಷ್ಟ ಭೂಪ ನೀವೇ ಯೋಚಿಸಿ, ಈ ಹಿಂದೆ ಇದ್ದ EO “ಅಧಿಕಾರಿ ಬಸವರಾಜ್ “ಎನ್ನುವ ವಸ್ತುನಿಷ್ಟ ಅಧಿಕಾರಿಗೆ ಗ್ರಾಮದ ಯುವಕ ಹಾಗೂ ಸಾಮಾಜಿಕ ಹೋರಾಟಗಾರ, ಮೌನೇಶ್ ಜಾರಕಿಹೊಳಿ “ಎನ್ನುವ ಯುವಕ ಹಲವಾರು ಬಾರಿ
: ಮನವಿಯನ್ನು, ಕಾಟಮ್ಮನಹಳ್ಳಿ ಅಂಗನವಾಡಿ ಶೌಚಾಲಯದ 14,ನೇ ಹಾಗೂ 15ನೇ ಹಣಕಾಸು ದುರುಪಯೋಗದ ಪರಿಶೀಲನೆಯನ್ನು ಮಾಡಲು ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಇದರ ಸೂಕ್ತ ತನಿಖೆಗೆ, ತಾಲೋಕು ಕೈಗಾರಿಕಾ ವಿಸ್ತರಣಾ ಅಧಿಕಾರಿಯಾದ, ಶ್ರೀಯುತ ಶಂಕರ್ ರೆಡ್ಡಿ ಎನ್ನುವವರನ್ನು ತನಿಖೆಗೆ ತಾಲೋಕು EO ಆಡಳಿತ ಅಧಿಕಾರಿ ಹಾಗೂ ಜಿಲ್ಲೆಯ CEO ಅಧಿಕಾರಿಗಳು ನೇರವಾದ ವರದಿಯನ್ನು ಕೊಡಲು ನೇಮಕ ಮಾಡಿದರು ಸಹ, ಈ ಅಧಿಕಾರಿ ಹಗರಣ ಮಾಡಿರುವ ಅಧಿಕಾರಿಗೆ ಸಾತ್ ನಿಡಿದ್ದಾರೆಂದು ಹಲ್ಲಿನ ಸಾಮಾಜಿಕ ಹೋರಾಟಗಾರ, ಮೌನೇಶ್ ಜಾರಕಿಹೊಳಿ ದೂರಿದ್ದಾರೆ ಹಾಗೂ ಇದರ ಬಗ್ಗೆ ಸೂಕ್ತ ತನಿಖಾ ವರದಿಯನ್ನು ಕೆಳಲು ಹೋದರೆ ಈ ತನಿಖಾಧಿಕಾರಿ ಅವಾಚ್ಯ ಶಬ್ದ ಹಾಗೂ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಹೋರಾಟ ಗಾರ ತಮ್ಮ ಅಳಲನ್ನು ನಮ್ಮ ಎಚ್ಚರಿಕೆ ಪತ್ರಿಕಾ ತಂಡಕ್ಕೆ ಹೇಳಿಕೊಂಡಿದ್ದಾರೆ ಹಾಗೂ ಸಮಾಜದ ಹೋಳಿತಿಗಾಗಿ ನಾವು ಇಷ್ಟೆಲ್ಲಾ ಕಷ್ಟವನ್ನು ಪಟ್ಟರೂ ಸಹ ನಮಗೆ ನ್ಯಾಯ ಸಿಗುವುದು ತುಂಬಾ ಕಷ್ಟ ಎನ್ನುವುದನ್ನು ಇವರು ಹೇಳುತ್ತಾ. ಹಾಗೂ ಸಾಮಾಜಿಕ
ಕಾರ್ಯಕರ್ತರು ಗ್ರಾಮಪಂಚಾಯಿತಿ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡಿದರೆ ಅವರಿಗೆ ಕೊಲೆ ಬೆದರಿಕೆ ಇದೆಂತ ಕಾನೂನು ಪ್ರಶ್ನೆ ಮಾಡುವುದೇ ತಪ್ಪು ಎಂದಾದರೆ ಏತಕ್ಕೆ ಬೇಕು ನಮಗೆ ಸರ್ಕಾರ ಹಾಗೂ ಶಾಸಕರು ಅಲ್ವಾ ನೀವೇ ಯೋಚನೆ ಮಾಡಿ,ನಮ್ಮ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಸರಿಯಾದ ರೀತಿಯಲ್ಲಿ ಸಿಗದೇ, ಡ್ಯಾoಗೂ ಹಾಗೂ ಕಾಲರದಂತಹ ಹಲವಾರು ಕಾಹಿಲೆಗಳು ಬಂದೋದಾಗಿದರು ಸಹ ಕೇಳುವವರೇ ಇಲ್ಲ ಗ್ರಾಮದ “ಅಂಬೇಡ್ಕರ್ ಭವನದ ಅಭಿವೃದ್ಧಿಗೆ ಸರ್ಕಾರದಿಂದ ಸೂಕ್ತ ಸುತ್ತೋಲೆ ಬಂದರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬತೆ ಇರುವುದನ್ನು ನೋಡಿದರೆ ಇಲ್ಲಿರುವ ಹನುಮಂತರಾಯಪ್ಪ ಎನ್ನುವ ಅಭಿವೃದ್ಧಿ ಅಧಿಕಾರಿಗೆ ಯಾರಾದರೂ ದೊಡ್ಡ ಶಾಸಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಒಂದು ಕುಮ್ಮಕ್ಕು ಇರಬಹುದಾ!ಅದೇ ತಿಳಿಯದಂತಾಗಿದೆ ನಾವೇನು ಯಾರಪ್ಪನ ಆಸ್ತಿಯನ್ನು ಮಾರಿ ಗ್ರಾಮ ಅಭಿವೃದ್ಧಿ ಮಾಡಿ ಅಂತ ಹೇಳುತ್ತಿಲ್ಲಾ ನಮ್ಮ ಸರ್ಕಾರದ ಹಣದ ಸದ್ಭಳಕೆಯನ್ನು ಮಾಡಿಕೊಂಡು ಮಾಡಲಿ ಎಂಬುದೇ ನಮ್ಮ ಆಶಯ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
