;

ಮರಿಯಮ್ಮನಹಳ್ಳಿಯ ಕಲಾವಿದೆ ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಪದ್ಮ ಶ್ರೀ ಪ್ರಶಸ್ತಿಯ ಗರಿ…!!!

ಈ ದಿನ ಶ್ರೀಮತಿ ಬಿ ಮಂಜಮ್ಮ ಜೋಗತಿಗೆ ನಮ್ಮ ವಿಜಯನಗರ ಜಿಲ್ಲೆಯನ್ನು ದೆಹಲಿವರೆಗೆ ಮುಟ್ಟಿಸಿದ ಕೀರ್ತಿ ಸಲ್ಲುತ್ತದೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಯಲ್ಲಿ ಜೋಗತಿ ಪದಗಳನ್ನು ಹಾಡುತ್ತಾ ನಾಟಕಗಳಲ್ಲಿ ಭಾಗವಹಿಸುತ್ತಾ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಮ್ಮ ಜೋಗತಿ ಇಂದು ಭಾರತ ಸರ್ಕಾರವು ಜನಪದ ಕಲೆಗಳ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ

ಇಂದು ಮರಿಯಮ್ಮನಹಳ್ಳಿಯ ಕಲಾವಿದೆ ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಪ್ರಶಸ್ತಿಯನ್ನು ಪಡೆಯುತ್ತಿರುವ ದೃಶ್ಯ ಅತ್ಯಂತ ಸಂತೋಷವಾಗಿತ್ತು ಇಂದು ಮುಂಜಾನೆ ಪತ್ರಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಮಂಜಮ್ಮ ನವರಿಗೆ ದೊರೆತ ಬಗ್ಗೆ ಓದಿದಾಗ ಸಂತೋಷದಿಂದ ಮಂಜಮ್ಮ ನವರಿಗೆ ದೂರವಾಣಿ ಕರೆ ಮಾಡಿದಾಗ ಮಂಜಮ್ಮರವರು ತಾವು ದೆಹಲಿಯಲ್ಲಿ ರುವುದಾಗಿ ತಿಳಿಸಿದರು ಸಂಜೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ನಮ್ಮ ತಂದೆ ಶ್ರೀಯುತ ಎಂ ಪಿ ಪ್ರಕಾಶ್ ಅವರ ಕಲಾಪ್ರಿಯ ವನ್ನು ಅವರು ನೀಡಿದ ಪ್ರೋತ್ಸಾಹವನ್ನು ಮಂಜಮ್ಮ ನವರು ನೆನಪು ಮಾಡಿಕೊಂಡರು ಅದೇರೀತಿ 2019 ಏಪ್ರಿಲ್ 5 ರಂದು ಎಂ ಪಿ ರವೀಂದ್ರ ಅಣ್ಣ ನವರ ಪುಣ್ಯಸ್ಮರಣೆಯಂದು ಹರಪನಹಳ್ಳಿಯಲ್ಲಿ 150 ಜಾನಪದ ಕಲಾವಿದರಿಗೆ ಸನ್ಮಾನ ಮಾಡಿದಾಗ ಆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಬೆಳಗ್ಗೆಯಿಂದ ಸಂಜೆಯವರೆಗೆ ನಮ್ಮ ಜೊತೆ ಇದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಇಂದು ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಸರ್ಕಾರಗಳು ಅವರಿಗೆ ಇನ್ನು ಉನ್ನತವಾದ ಪ್ರಶಸ್ತಿಗಳನ್ನು ನೀಡಲಿ ಹರಪನಹಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ಕಲಾಪ್ರೇಮಿಗಳ ಪರವಾಗಿ ಅವರಿಗೆ ಅಭಿನಂದನೆಗಳು..

ವರದಿ. ಅಜಯ್. ಚ. ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;