ಡಾ. ವಿರೂಪಾಕ್ಷಿ ಪೂಜಾರಹಳ್ಳಿ ವಿರಚಿತ ಪುಸ್ತಕ
ಲೋಕಾರ್ಪಣೆ ಕಾರ್ಯಕ್ರಮಕ್ಕೆ.!
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರ ಗ್ರಾಮ ಪಂಚಾಯಿತಿಯ ರಂಗ ಪರಿಸರದಲ್ಲಿ ಇಂದು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದಲ್ಲಿ ಎಲೆ ಮರೆಕಾಯಿಯಂತಿರುವ ಸಾಧಕರನ್ನು ಪುಸ್ತಕರೂಪದಲ್ಲಿ ಗುರುತಿಸಿ ಗೌರವಿಸುವಲ್ಲಿ ಡಾ. ಪೂಜಾರಹಳ್ಳಿ ವಿರುಪಾಕ್ಷಪ್ಪನವರ ಕಾರ್ಯ ಶ್ಲಾಘನೀಯ ಎಂದು ಸಿದ್ದಯ್ಯನ ಕೋಟೆ ಶ್ರೀಬಸವಲಿಂಗ ಸ್ವಾಮೀಜಿ ಹೇಳಿದರು. ತಾಲೂಕಿನ ರಾಯಾಪುರ ರಂಗ ಪರಿಸರದಲ್ಲಿ ಚಿನ್ನಹಗರಿ ಪ್ರಕಾಶನ ಪೂಜಾರಹಳ್ಳಿ ಇವರಿಂದ ಪರಿಶಿಷ್ಟ ಜಾತಿ, ಪಂಗಡಗಳಸಾಂಸ್ಕೃತಿಕವೇದಿಕೆ ಸಹಯೋಗದಲ್ಲಿ ಡಾ.ವಿರುಪಾಕ್ಷಪ್ಪ ಪೂಜಾರಹಳ್ಳಿಯವರು ರಚಿಸಿದ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಸಾಧಕರು ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಬುಡಕಟ್ಟು ಮತ್ತು ಆಚರಣೆ ಇಂದಿಗೂ ಜೀವಂತವಾಗಿ ಇರಿಸಿಕೊಂಡಿರುವ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದಲ್ಲಿ ಅನೇಕರು ಸಾಮಾಜಿಕ, ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಎಲೆ ಮರೆಯಲ್ಲಿ ಔಚಿತ್ಯ ಪೂರ್ಣ ಸಾಧನೆಗಳನ್ನು ಮಾಡುತ್ತಿರುವ ಸಮುದಾಯದ ಸಾಧಕರನ್ನು ಡಾ.ವಿರುಪಾಕ್ಷಪ್ಪ ಪೂಜಾರಹಳ್ಳಿ ಗುರುತಿಸಿ ಪುಸ್ತಕರೂಪದಲ್ಲಿ ಗೌರವಿಸಿರುವ ಕಾರ್ಯ ಇಂದಿನ ಯುವ ಜನಾಂಗಕ್ಕೆ ಪ್ರೇರಣ ಎಂದರು. ವೃತ್ತ ನಿರೀಕ್ಷಕ ಉಮೇಶ ನಾಯಕ ಮಾತನಾಡಿ, ಬುಡಕಟ್ಟು ಸಂಸ್ಕೃತಿಯನ್ನು ಒಡಲಾಳದಲ್ಲಿರಿಸಿ ಕೊಂಡಿರುವ ತಳ ಸಮುದಾಯಗಳಿಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಇದರಿಂದ ಶೋಷಿತ ಸಮುದಾ ಯಗಳು ಇಂದಿಗೂ ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲಿ ಎಂದರು. ಬುಡಕಟ್ಟು ಸಮುದಾಯದ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಟೇಲ್ ಪಾಪನಾಯಕ, ಕಾಂಗ್ರೆಸ್ ಮಹಿಳಾ ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷ್ಮಿ, ಜಿ.ಪಂ ಮಾಜಿ ಸದಸ್ಯ ಕೆ.ಜಗಳೂರಯ್ಯ, ಜೆಡಿಎಸ್ ಯುವ ಮುಖಂಡ ಮುರಳೀಧರ ನಾಯಕ, ಹಿರಿಯ ವಕೀಲ ರಾಜಶೇಖರ ನಾಯಕ, ಗ್ರಾಪಂಸದಸ್ಯ ಕುಮಾರಸ್ವಾಮಿ, ಉಪನ್ಯಾಸಕ ಗೋವಿಂದಪ್ಪ, ಕಂಪಳ ರಂಗ ಸ್ವಾಮಿ ದೇವಸ್ಥಾನ ಪೂಜಾರಿ ರೇವಣ್ಣ, ವಿ.ಮಾರನಾಯಕ, ಸಂಗೀತ ಶಿಕ್ಷಕ ಕೆ.ಒ.ಶಿವಣ್ಣ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಎಸ್.ಸಿ.ದೇವಯ್ಯ, ಪಶು ಇಲಾಖೆ ನಿವೃತ್ತ ಅಧಿಕಾರಿ ತಿಪ್ಪೇಸ್ವಾಮಿ, ಕಾರ್ಯಕ್ರಮ ನಿರೂಪಣೆ ಓಬಣ್ಣ ಶಿಕ್ಷಕರು, ಕೊಮ್ಮನಪಟ್ಟಿ ಶ್ಯಾಮಣ್ಣ ಕಳಗಳಹಟ್ಟಿ ಗೋವಿಂದ ಇನ್ನಿತರರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
