ಇಂದು ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾರರ ಜಾಗೃತಿ ಕ್ಲಬ್ ವತಿಯಿಂದ ಶಾಲಾ ಸಂಸತ್ ರಚನೆ ಮಾಡಲಾಯಿತು .ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಸಂಸತ್ತಿನ ರಚನೆ ಮಾಡಲಾಯಿತು . ಇಂದು ನಡೆದ ಚುನಾವಣೆಯಲ್ಲಿ ಎಂಟನೇ ತರಗತಿಯಿಂದ ಮಹಿಳಾ ಮೀಸಲಾತಿ ಅಡಿಯಲ್ಲಿ ಕೆಎಂ ಅಕ್ಷತಾ ಇವರು ಆಯ್ಕೆಯಾಗಿದ್ದು ಇವರ ಜೊತೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಯೋಗರಾಜ್, ಪಾಪಯ್ಯ ಮಹೇಶ್, ಸಿಂಧು 8ನೇ ತರಗತಿಯಲ್ಲಿ ಆಯ್ಕೆಯಾಗಿದ್ದಾರೆ 9ನೇ ತರಗತಿಯಿಂದ ಕೆಎಂ ಆಶಾ ಮಹಿಳಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದು ಉಳಿದಂತೆ ಸಾಮಾನ್ಯ ಕ್ಷೇತ್ರದಲ್ಲಿ ಶಾಂತಲಾ, ಪ್ರಶಾಂತ, ಗಜೇಂದ್ರ ಆಯ್ಕೆ ಯಾಗಿ ಸಿಂಧೂ ಮತ್ತು ಕವಿತಾ ಸಮಾನ ಮತಗಳನ್ನು ಪಡೆದಿದ್ದರಿಂದ ಲಾಟರಿಯಲ್ಲಿ ಕವಿತಾ ವಿಜೇತರಾಗಿದ್ದಾರೆ. ಹತ್ತನೇ ತರಗತಿಯಿಂದ ಮಹಿಳಾ ಮೀಸಲಾತಿ ಅಡಿಯಲ್ಲಿ ರಮ್ಯಾ ಡಿಎಂ ಆಯ್ಕೆಯಾಗಿದ್ದು ಉಳಿದಂತೆ ಸಾಮಾನ್ಯ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ,ಶಿವಕುಮಾರ ನಾಗೇಶ, ಪ್ರಮೋದ್ ಕುಮಾರ್ ಆಯ್ಕೆಯಾಗಿರುತ್ತಾರೆ 8,9ಮತ್ತು10ನೇ ತರಗತಿ ಗಳಿಂದ ಒಟ್ಟು15 ವಿದ್ಯಾರ್ಥಿಗಳನ್ನು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆ ಮಾಡಲಾಯಿತು.
ಚುನಾವಣಾ ಕಾರ್ಯದಲ್ಲಿ ಇಂದಿನ ಪ್ರಭಾರಿ ಮುಖ್ಯಗುರುಗಳಾದ ಶ್ರೀಮತಿ ಸುವರ್ಣ ಶಿಕ್ಷಕರಾದ ಕೊಟ್ರೇಶ್, ಜಯಣ್ಣ, ನವೀನ್,ವಿಜಯಕುಮಾರ್ ಸರಸ್ವತಿ ಇವರು ಗಳು ಪಾಲ್ಗೊಂಡು ಚುನಾವಣಾ ಕಾರ್ಯವನ್ನು ಉತ್ತಮವಾಗಿ ನಡೆಸಿಕೊಟ್ಟರು ಮುಖ್ಯ ಚುನಾವಣಾ ಅಧಿಕಾರಿಯಾಗಿ ಶ್ರೀ ಸಿದ್ಧಾರಾಧ್ಯ ಇವರು ಕಾರ್ಯನಿರ್ವಹಿಸಿದರು…
ವರದಿ, ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
