ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಅ,27 ಬುದ್ಧ ಧರ್ಮ ದೀಕ್ಷಾ ಸಮಿತಿ ಮೊಳಕಾಲ್ಮುರು ಹಾಗೂ ಸಮಾಜ ಪರಿವರ್ತನಾ ತಂಡದ ವತಿಯಿಂದ ಮೊಳಕಾಲ್ಮುರಿನಿಂದ ಬುದ್ಧನ ಧರ್ಮವನ್ನು ಈ ನೆಲಕ್ಕೆ ಸಾರಿದ ಅಶೋಕ ಸಿದ್ದಾಪುರದವರೆಗೆ ಧರ್ಮ ಜಾಗೃತಿ ಬೈಕ್ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು. ಪರಿವರ್ತನಾ ಚಳುವಳಿಯ ಸಂಪನ್ಮೂಲ ವ್ಯಕ್ತಿ ಎಸ್. ಪರಮೇಶ್ ಮಾತನಾಡಿ, “ಧರ್ಮ ಇರುವುದು ಮನುಷ್ಯನಿಗಾಗಿಯೇ ಹೊರತು, ಮನುಷ್ಯ ಇರುವುದು ಧರ್ಮಕ್ಕಾಗಿ ಅಲ್ಲ” ಕೋಮುವಾದ, ದ್ವೇಷ, ಅಸೂಯೆ ಹೆಚ್ಚುತ್ತಿರುವ ನಾಗರೀಕತೆಯ ಈ ಕಾಲಘಟ್ಟದಲ್ಲಿ ಕರುಣೆ, ಪ್ರೀತಿ, ಮೈತ್ರಿಯನ್ನು ಒಳಗೊಂಡ ಬುದ್ಧನ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಮನುಷ್ಯನ ಸ್ವಾತಂತ್ರ್ಯ, ಸಮಾನತೆ,ಬ್ರಾತೃತ್ವ ಮತ್ತು ಮನುಷ್ಯನ ಸರ್ವೋತೋಮುಖ ಅಭಿರುದ್ದಿ ಬುದ್ಧನಲ್ಲಿದೆ, ಗೌತಮ ಬುದ್ಧ ಜಗತ್ತಿನ ಮೊದಲ ಜ್ಞಾನ ಜ್ಯೋತಿಯಾಗಿದ್ದರೆ. ಬುದ್ಧನು ಮನುಷ್ಯ, ಮನುಷ್ಯರನ್ನು ಪ್ರೀತಿಸುವುದು ನಿಜವಾದ ಧರ್ಮ, ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಬಿ ಟಿ ನಾಗಭೂಷಣ್, ದಲಿತ ಮುಖಂಡ ಎಸ್. ಜಯಣ್ಣ, ಮುಖಂಡರಾದ ರಾಜು, ಮಂಜುನಾಥ್, ಬಿ. ನಾಗರಾಜ್, ಎನ್. ನಾಗರಾಜ್, ಹನುಮಂತಪ್ಪ, ಶಿರೇಕೊಳ ಮುರುಳಿ, ಅನಿಲ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
