ಸಿಂಧನೂರು : ನಗರದ ಗಂಗಾನಗರದಲ್ಲಿ ಒಂದೇ ಕುಟುಂಬದ ಮೂವರು ಹೆಣ್ಣುಮಕ್ಕಳು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಈ ವಿಷಯ ಶಾಸಕರಿಗೆ ತಿಳಿಯುತ್ತಿದ್ದಂತೆ,ವಾರ್ಡ್ ನಂ 18 ವ್ಯಾಪ್ತಿಗೆ ಬರುವ ಕೆವಿ ನಗರದ ಮೆಕಾನಿಕ್ ಸೈಯದ್ ಇಮಾಮ್ ಉದ್ದಿನ್ ಇವರ ಕುಟುಂಬಕ್ಕೆ ಮಾನ್ಯಶಾಸಕರಾದ ವೆಂಕಟರಾವ್ ನಾಡಗೌಡ್ರು ಭೇಟಿ ನೀಡಿ ಕುಟುಂಬದವರ ಜೊತೆ ಎಷ್ಟು ವರ್ಷಗಳಿಂದ ಈ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಚರ್ಚೆ ಮಾಡಿ.ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರುಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.ಈ ಮಕ್ಕಳ ವೈದ್ಯಕೀಯ ತಪಾಸಣೆಯ ದಾಖಲಾತಿಗಳನ್ನು ವೈಧ್ಯರುಗಳಿಗೆ ಮಾಹಿತಿ ನೀಡಿದರು.ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂದು ದೂರವಾಣಿ ಮುಖಾಂತರ ವೈದ್ಯರಲ್ಲಿ ಮಾನ್ಯ ಶಾಸಕರು ಕೋರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಬಸವರಾಜ್ ನಾಡಗೌಡ್ರು,
ನಗರಸಭೆಯ ಮಾಜಿ ಸದಸ್ಯರಾದ ಶ್ರೀ ನದಿ ಮುಲ್ಲಾ, ಸಲೀಂ ಜಾವಗಲ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
