ಶೀಘ್ರದಲ್ಲೇ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಅರಂಭ!!
ರಾಜ್ಯದ ಎಲ್ಲಾ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಯೋಜನೆಯನ್ನ 21/10/2021 ರಿಂದ ಪುನರ್ ಅರಂಭ ಮಾಡಲಾಗುವುದು ಎಂದು ಜಂಟಿ ನಿರ್ದೇಶಕರು ಮ.ಉ.ಯೋ ಅಲ್ಲೈನ್ ಮೀಟಿಂಗ್ ನಲ್ಲಿ ರಾಜ್ಯದ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
14 ಮಾರ್ಚ್ 2020 ರಿಂದ ಪ್ರಸ್ತುತದ ವರೆಗೂ ಕೋವಿಡ್ 19 ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ 1-10 ನೇ ತರಗತಿಯ ಮಧ್ಯಾಹ್ನ ದ ಉಪಹಾರ ಯೋಜನೆಯನ್ನ ಸ್ಥಿಗತಗೊಳಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಅದೇಶ ಹಾಗು ರಾಷ್ಟ್ರೀಯ ಆಹಾರ ಭದ್ರತಾ ಅಧಿನಿಯಮ 2013, ಮಧ್ಯಾಹ್ನ ಉಪಹಾರ ನಿಯಮಗಳು 2015 ರಂತೆ ಬಿಸಿ ಊಟದ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿತ್ತು. ಈಗ ದಿನಾಂಕ 21 ರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯ ವರೆಗೆ ಬಿಸಿ ಊಟವನ್ನ ಒಂದಿಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಅರಂಭಿಸಲು ಸೂಚಿಸಲಾಗಿದೆ…

ವರದಿ. ಅಜಯ್. ಚ. ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
