ಸಿಂಧನೂರು : ದೇವದಾಸಿ ಮತ್ತು ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಲು ಸಂಘಟನೆ ಮುಂದಾಗಲಿ ನ್ಯಾಯದೀಶ ಕೋಟೆಪ್ಪ ಕುಂಬ್ಳೆ…!!!

ಸಿಂಧನೂರು : ದೇವದಾಸಿ ಮತ್ತು ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಲು ಸಂಘಟನೆ ಮುಂದಾಗಲಿ ನ್ಯಾಯದೀಶ ಕೋಟೆಪ್ಪ ಕುಂಬ್ಳೆ.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಿಂಧನೂರು ಗೆಳೆಯರ ಬಳಗ ಸಂಘ ಉದ್ಘಾಟನೆ,ಸಾಧಕರಿಗೆ ಸನ್ಮಾನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಸ ದೊಡ್ಡಮನಿ ರವರು ಸಸಿಗೆ ನೀರೆರೆಯುವ ಮುಖಾಂತರ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂದೇನವಾಜ್ ಸಿಂಧನೂರು ಗೆಳೆಯರ ಬಳಗದ ಅಧ್ಯಕ್ಷರು ವಹಿಸಿದ್ದರು. ಕಾನೂನು ಸಲಹೆಗಾರರಾದ ರಾಯಪ್ಪ ವಕೀಲರು ಸಿಂಧನೂರು ಗೆಳೆಯರ ಬಳಗ ಸಂಘದ ಬಗ್ಗೆ ,ಅವರ ಸಾದನೆ ಮತ್ತು ಕರ್ತವ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು ಶ್ರೇಯಾಂಸ ದೊಡ್ಡಮನಿ, ಬಡವರಿಗೆ ಸರ್ಕಾರದ ಸೌಲಭ್ಯಗಳು ತಲುಪಿಸುವ ಪ್ರಯತ್ನ ಸಂಘಗಳು ಮಾಡಬೇಕು.ಸಹಾಯದ ಅವಶ್ಯಕತೆ ಇರುವವರಿಗೆ ನೆರವಾಗುವುದೇ ಸಂಘಟನೆಯ ಮೂಲ ಉದ್ದೇಶವಾಗಿರಬೇಕು ಎಂದರು.

ನಂತರ ಮಾತನಾಡಿದ ಒಂದನೇ ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆಯವರು, ಸಮಾಜದಲ್ಲಿ ದೇವದಾಸಿ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ನಿರ್ಮೂಲನೆ ಮಾಡಲು ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲು ಸಂಘ ಮುಂದಾಗಲಿ ಎಂದು ಹೇಳಿದರು.

ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಆನಂದಪ್ಪ ಎಂ ರವರು ಕಾನೂನು ಅರಿವು-ನೆರವು ಬಗ್ಗೆ ತಿಳಿಸಿದರು

ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯರಿಗೆ, ನೇತ್ರ ತಜ್ಞರಿಗೆ,ಪತ್ರಕರ್ತರಿಗೆ, ನಿವೃತ್ತ ಶಿಕ್ಷಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಚಿತ್ರಕಲಾವಿದರಿಗೆ, ನಿವೃತ್ತ ಅಧಿಕಾರಿಗಳಿಗೆ ಇನ್ನೂ ಅನೇಕ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ. ಭೀಮನಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅಶೋಕ್ ಬೆನ್ನೂರ್, ಡಾ. ಚನ್ನನಗೌಡ ಪಾಟೀಲ್ ನೇತ್ರ ತಜ್ಞರು, ಪ್ರಹ್ಲಾದ ಗುಡಿ ವಕೀಲರು ಪತ್ರಕರ್ತರು, ಸಮಾಜ ಕಲ್ಯಾಣ ಅಧಿಕಾರಿ ಮಹಾಲಿಂಗಪ್ಪ ,ತಾಲೂಕು ಪಂಚಾಯತ್ ವ್ಯವಸ್ಥಾಪಕರು ಸರಳಾದೇವಿ ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.
ರಂಗಮ್ಮ ಗಲಗ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮದ ಕೊನೆಗೆ ವಂದನಾರ್ಪಣೆ ಮಾಡಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend