ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೊಪ್ಪಳ ಜಿಲ್ಲೆಯ ಚಿಕ್ಕ ಜಲಪಾತ
ಹೌದು ಸ್ನೇಹಿತರೆ ಯಾವಾಗ್ಲೂ ಮಳೆಯಿಲ್ಲದೆ ಬಿಸಿಲಿನಿನಿಂದ ಸುಡುತ್ತಿದ್ದ ಕೊಪ್ಪಳ ಜಿಲ್ಲೆ ಈಗ ಚಿಕ್ಕ ಜಲಪಾತದಿಂದ ಪ್ರವಾಸಿಗರ ಹಾಗೂ ನಿಸರ್ಗ ಪ್ರಿಯರ ನೆಚ್ಚಿನ ತಾಣವಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಹತ್ತಿರದ ಒಂದು ಚಿಕ್ಕ ಹಳ್ಳಿಯಾದ ಕಬ್ಬರಾಗಿ ಗ್ರಾಮದಲ್ಲಿ ಈ ಜಲಪಾತ ಇದೆ . ಈ ಜಲಪಾತದ ಹೆಸರು ಕಪಿಲ ತೀರ್ಥ ಇದು ಕೊಪ್ಪಳ ಜಿಲ್ಲೆಯಿಂದ ಸುಮಾರು 72 ಕಿಮೀ ದೂರದಲ್ಲಿದೆ. ಈ ಜಲಪಾತವು ಮಳೆಗಾಲದಲ್ಲಿ ಮಾತ್ರ ಕಂಡುಬರುತ್ತದೆ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದ ಕಾರಣ ಈ ಜಲಪಾತವು ಸೃಷ್ಟಿಯಾಗಿದೆ. ಮತ್ತೆ ಮಳೆಗಾಲ ಮುಗಿದ ನಂತರ ಅಂದರೆ 5 ರಿಂದ 6 ತಿಂಗಳುಗಳ ಒಳಗೆ ಜಲಪಾತವು ಕ್ರಮೇಣ ಮಾಯವಾಗಿ ಬಿಡುತ್ತದೆ. ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂತಹ ಕೆಲವು ಚಿಕ್ಕ ಪುಟ್ಟ ಜಲಪಾತಗಳು ಮಳೆಗಾಲದಲ್ಲಿ ಆಗಾಗ ಕಂಡುಬರುತ್ತವೆ. ಏ ನೆ ಆಗ್ಲಿ ಸ್ನೇಹಿತರೆ ಬಿಸಿಲ ನಾಡು ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಚಿಕ್ಕ ಜಲಪಾಠಗಳಿರುವುದು ಇಲ್ಲಿಯ ಜನರಿಗೆ ಖುಷಿ ತಂದಿದೆ….

ವರದಿ.ಶರಣಗೌಡ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
