ಸಿಂಧನೂರು :ಕಲ್ಯಾಣ ಕರ್ನಾಟಕ ಹಸಿರು ತೋರೋಣ ಮಾಡುವದೇ ನಮ್ಮ ಗುರಿ ಶಂಕರಗೌಡ…!!!

ಸಿಂಧನೂರು :ಕಲ್ಯಾಣ ಕರ್ನಾಟಕ ಹಸಿರು ತೋರೋಣ ಮಾಡುವದೇ ನಮ್ಮ ಗುರಿ ಶಂಕರಗೌಡ.

ವನಸಿರಿ ಪೌಂಡೇಶನ್ ದಿಂದ ಗಿಡಗಳ ನರ್ಸರಿ ಪ್ರಾರಂಭ.
ಎಲೆಕೂಡ್ಲಿಗಿ ಗ್ರಾಮದ ಶಂಕರಗೌಡ ಅವರ ಹೊಲದಲ್ಲಿ ಗಿಡಗಳ ನರ್ಸರಿಯನ್ನು ಅಮರಯ್ಯ ಶಾಸ್ತ್ರೀ ಎಲೇಕೂಡ್ಲಿಗಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ವನಸಿರಿ ಹಸಿರು ಕನಸು, ಗಿಡಗಳನ್ನು ಬೆಳೆಯಿಸಿ ಉಚಿತವಾಗಿ ಕೊಡಲು ಈ ನರ್ಸರಿ ಮಾಡಿದ್ದಾರೆ.ವನಸಿರಿ ತಂಡ ಸುಮಾರು 5-6 ವರ್ಷಗಳಿಂದ ಗಿಡಗಳು ಹಚ್ಚುವದು, ಸಂರಕ್ಷಿಸುವುದು, ಯಾರಾದ್ರೂ ಗಿಡ ಕಡಿದರೆ ಅವರಿಗೆ ದಂಡ ಹಾಕುವುದು. ಈಗಾಗಲೇ ವನಸಿರಿ ತಂಡ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಸರ ಉಳಿವಿಗಾಗಿ ದೊಡ್ಡ ಹೆಸರು ಮಾಡಿದೆ. ಈಗ ಮತ್ತೆ ತಾವೇ ಸ್ವತಃ ಗಿಡಗಳನ್ನು ಬೆಳೆಸಲು ಈ ನರ್ಸರಿ ಮಾಡುತ್ತಿರುವದು ಒಳ್ಳೆಯ ಕಾರ್ಯ. ವನಸಿರಿ ಬಳಗಕ್ಕೆ ಒಳ್ಳೆಯದಾಗಲಿ ಎಂದರು.

ಶಂಕರಗೌಡ ಎಲೆಕೂಡ್ಲಿಗಿ ಮಾತನಾಡಿ ನಮ್ಮ ಸಂಸ್ಥೆ ಈಗಾಗಲೇ ಸರಕಾರಿ ಶಾಲೆ, ದೇವಸ್ಥಾನ,ರುದ್ರಭೂಮಿ, ರೈತರ ಹೊಲದಲ್ಲಿ, ರಸ್ತೆ ಅಕ್ಕ ಪಕ್ಕದಲ್ಲಿ ಗಿಡ ನೆಡುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಈಗ ಈ ನರ್ಸರಿ ಮಾಡುವ ಉದ್ದೇಶ ನಮ್ಮ ತಂಡ ಸಸಿಗಳನ್ನು ಬೆಳೆಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಚಿತವಾಗಿ ಕೊಟ್ಟು, ಅವುಗಳನ್ನು ಸಂರಕ್ಷಣೆ ಮತ್ತು ಪೋಷಣೆ ಮಾಡುವ ಜವಾಬ್ದಾರಿ ಹೊತ್ತು ನಾವೇ ಹೋಗಿ ಸರ್ಕಾರಿ ಶಾಲೆಯಲ್ಲಿ, ರೈತರ ಹೊಲದ ಬದುವಿನಲ್ಲಿ, ರುದ್ರಭೂಮಿಯಲ್ಲಿ ನೆಡುವ ಕಾರ್ಯ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಕಲ್ಯಾಣ ಕರ್ನಾಟಕ ಹಸಿರು ತೋರೋಣ ಮಾಡುವದೇ ನಮ್ಮ ಗುರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪುರ್ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ಆದನಗೌಡ,ಶಿವು ಪಾಟೀಲ್, ಶಿವು ಸಾವುಕಾರ ಎಲೆಕೂಡ್ಲಿಗಿ, ವನಸಿರಿ ಸದಸ್ಯ ಮುದಿಯಪ್ಪ, ಶ್ರೀಮತಿ ಪಾರ್ವತಿ ಶಂಕರಗೌಡ ಇನ್ನೂ ಅನೇಕ ಯುವಕರು ಮತ್ತು ಎಲೇಕೂಡ್ಲಿಗಿ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend