ಹತ್ತೂರ ನಾಯಕರನ್ನು ಹತ್ತಿರದಿಂದ ಬೇಟಿಯಾದ ಕ್ಷಣ
ಇವತ್ತು ದಿನಾಂಕ 3/10/2021 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ನಗರದ
ಶ್ರೀ_ಸನ್ಮಾನ್ಯ_ಶ್ರೀ_ಜನಸತೀಶ_ಅಣ್ಣಾ_ಜಾರಕಿಹೊಳಿ ಕೆ.ಪಿ.ಸಿ.ಸಿ ( ಕಾರ್ಯಾಧ್ಯಕ್ಷರು) ಮಾಜಿ ಸಚಿವರು ಹಾಲಿ ಶಾಸಕರು ಆದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರನ್ನು
ದಲಿತ ನಾಯಕರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ಸಂಸ್ಥಾಪಕ/ರಾಜ್ಯಾಧ್ಯಕ್ಷರಾದ
#ಶ್ರೀ_ಸನ್ಮಾನ್ಯ_ಶ್ರೀ_ಚಂದ್ರಕಾಂತ_ಎಸ್_ಕಾದ್ರೋಳ್ಳಿ ಸರ್ ಅವರು ಸೌಜನ್ಯ ಬೇಟಿ ಆಗುವುದರ ಮೂಲಕ ಹತ್ತು ಹಲವಾರು ವಿಷಯ ಚರ್ಚಿಸಲಾಯಿತು.
ಮುಂದಿನ ದಿನಮಾನಗಳಲ್ಲಿ ಡಿಸೆಂಬರ 18-12-2021 ರಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜೋಡಿಗಳಿಗೆ ಸಾಮೂಹಿಕ ವಿವಾಹ ಹಾಗೂ ಈಗಾಗಲೇ ಗುರುತಿಸುರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ( ತಂದೆ ತಾಯಿ ಇಲ್ಲದ ಮಕ್ಕಳು ) ಅನಾಥ ಮಕ್ಕಳಿಗೆ ಮತ್ತು ಕಳೆದ ವರ್ಷ ಅತೀ ಹೆಚ್ಚು ಅಂಕ ಗಳಿಸಿದ ಎಸ್.ಎಸ್ .ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ ಮಕ್ಕಳಿಗೆ ಕಂಪ್ಯೂಟರ್ ವಿತರಣೆ ಹಾಗೂ ಕೊರೋಣ ಸಮಯದಲ್ಲಿ ಅಸು ನೀಗಿದ ಹಲವಾರು ಬಡ ( ವಿಧವೆಯರಿಗೆ ) ಹೊಲಗೆ ಯಂತ್ರ ವಿತರಣೆ ಮಾಡುವ ಕುರಿತು ಕಾರ್ಯಕ್ರಮ ದ ಹಲವು ವಿಷಯಗಳನ್ನು ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಸರ್ ಅವರ ಹತ್ತಿರ ಚರ್ಚಿಸಲಾಯಿತು
ಹಾಗಾಗಿ ಈ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವ ಜೋಡಿಗಳು ನವೆಂಬರ 30-11-2021 ರ ಒಳಗಾಗಿ ನಿಮ್ಮ ಜೋಡಿಯನ್ನು ನೋಂದಣಿ ಮಾಡತಕ್ಕದು ( ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜೋಡಿಗಳಿಗೆ ಮಾತ್ರ ಅವಕಾಶ ) .
ಈ ಒಂದು ಬೇಟಿ ಸಂದರ್ಭದಲ್ಲಿ ಪ್ರಚಾರ ಸಮಿತಿ ರಾಜ್ಯಾದ್ಯಕ್ಷರು ಬೆಳಗಾವಿ ವಿಭಾಗೀಯ ಅದ್ಯಕ್ಷರು
ಬೆಳಗಾವಿ ಜಿಲ್ಲಾ ಅಧ್ಯಕ್ಷರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರು
ಬೆಳಗಾವಿ ನಗರ ಜಿಲ್ಲಾ ಅಧ್ಯಕ್ಷರು
ಹಾಗೂ ತಾಲೂಕ ಅಧ್ಯಕ್ಷರು ನಗರ ತಾಲುಕಾ ಅದ್ಯಕ್ಷರು ಹಾಗೂ ಹಲವು ಕಾರ್ಯಕರ್ತರು
ಭಾಗಿಯಾಗಿದ್ದರು….

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
