ರಾಜ್ಯ ಮಟ್ಟಡ ನೋಡಲ್ ಅಧಿಕಾರಿಗಳ ತಂಡದ ಸದಸ್ಯರಾದ ಮಾನ್ಯ ಜಂಟಿ ನಿರ್ದೇಶಕರ ಭೇಟಿ…!!!

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ನಿಮಿತ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಾಗನೂರ ತಾ:ಮೂಡಲಗಿಯಲ್ಲಿ ಸರ್ಕಾರದ ಆದೇಶದಂತೆ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಯುಕ್ತ ರಾಜ್ಯ ಮಟ್ಟಡ ನೋಡಲ್ ಅಧಿಕಾರಿಗಳ ತಂಡದ ಸದಸ್ಯರಾದ ಮಾನ್ಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರಾದ ಶ್ರೀ ಎಸ್.ಎ.ಮುಲ್ಲಾ ಸರ್ ರವರು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿಯ ಪತ್ರಾOಕಿತ ವ್ಯವಸ್ಥಾಪಕರಾದ ಹಿರೇಮಠ ಸರ್ ಮತ್ತು ಗೋಕಾಕ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಲಪ್ಪನವರ ಸರ್ ಈ ಎಲ್ಲ ಅಧಿಕಾರಿಗಳು ಇಂದು ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ನಮ್ಮ ಶಾಲೆಯ ಸ್ವಚ್ಛತೆ ಕುರಿತು ಹರ್ಷ ವ್ಯಕ್ತಪಡಿಸಿ ಎಲ್ಲ ಸಿಬ್ಬಂದಿಗಳ ಜೊತೆ ಸ್ವಚ್ಛತಾ ಅಭಿಯಾನ ಕುರಿತು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಲು ಸಲಹೆ ನೀಡಿದರು ಜೊತೆಗೆ ಮಕ್ಕಳ ಜೊತೆ ಸಂವಾದ ನಡೆಸಿ ಶಾಲೆಯ ಡಿಜಿಟಲ್ ವರ್ಗ ಕೋಣೆಯನ್ನು ಉದ್ಘಾಟನೆ ಮಾಡಿದರು ಶಾಲಾ ಆವಣದಲ್ಲಿ ಸಸಿ ನೆಡುವ ಮೂಲಕ ಶಾಲೆಯ ಪರಿಸರವನ್ನು ಕಂಡು.. ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿಯ ಡಾ.ಉಮಾ.ಸಾಲಿಗೌಡರ ರವರು ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳಿಗೆ ಮತ್ತು ಮಕ್ಕಳಿಗೆ ಶುಭಾಶಯ ಕೋರಿದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend