ಅಂಬೇಡ್ಕರ್ ಅವರ ಹೆಸರಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನೂತನವಾಗಿ ನಾಮಫಲಕ ಉದ್ಘಾಟಿಸಿದರು…ಅಂಬೇಡ್ಕರ್ ಅವರ ಹೆಸರಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನೂತನವಾಗಿ ನಾಮಫಲಕ ಉದ್ಘಾಟಿಸಿದರು…!!!

ಸಿಂಧನೂರು : ದಿನಾಂಕ 01/10/ 2021 ರಂದು ವೆಂಕಟೇಶ್ವರ ಕ್ಯಾಂಪಿನಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ರಾವು ಸಾಹುಕಾರ್ ರವರು ವಿಶ್ವರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೇಲಿನ ಅಭಿಮಾನಕ್ಕಾಗಿ ಮತ್ತು ಅವರ ಜ್ಞಾನಕ್ಕಾಗಿ ಮನಸೋತು ಅಂಬೇಡ್ಕರ್ ಅವರ ಹೆಸರಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನೂತನವಾಗಿ ನಾಮಫಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ನಾಗೇಶ್ ರಾವ್ ದೇಶಕ್ಕೆ ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಎಲ್ಲಾ ಮಾನವಕುಲವನ್ನು ಸಮಾನವಾಗಿ ಬಾಳಿ ಬದುಕಬೇಕು ಎಂಬುದನ್ನು ಸಂವಿಧಾನಾತ್ಮಕವಾಗಿ ತೋರಿಸಿಕೊಟ್ಟಿದ್ದಾರೆ . ಹಕ್ಕು ಅಧಿಕಾರಗಳನ್ನು ಸಹ ನೀಡಿದ್ದಾರೆ .ಎಲ್ಲಾ ವರ್ಗದ ಎಲ್ಲಾ ವಯಸ್ಸಿನ ಜನರಿಗೆ ಅಂಬೇಡ್ಕರವರು ಮಹಾನ್ ಸ್ಫೂರ್ತಿದಾಯಕವಾದ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರಾದ ಹುಲಗಪ್ಪ ಮಲ್ಕಾಪುರ್ ಅವರು ಮಾತನಾಡಿ ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬುವ ಘೋಷವಾಕ್ಯದ ಮೂಲಕ ಎಲ್ಲಾ ವರ್ಗದ ಜನರು ಬದುಕಲು ಅನುವಾಗುವಂತೆ ಈ ದೇಶಕ್ಕೆ ಸಂವಿಧಾನವನ್ನು ಬರೆದುಕೊಟ್ಟಿದ್ದಾರೆ. ವಿದ್ಯಾಭ್ಯಾಸದ ಸಮಯದಲ್ಲಿ ಅನೇಕ ವಿದೇಶೀಯ ಪದವಿಗಳನ್ನು ಪಡೆದಿದ್ದಾರೆ .
ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ದೇಶಕ್ಕೆ ಸೇವೆಯನ್ನು ಸಲ್ಲಿಸಿದ್ದಾರೆ .
ನೂತನವಾಗಿ ಆಯ್ಕೆ ಆಗಿರುವಂತಹ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ವರಾವ್ ಸಾಹುಕಾರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೊಸದಾಗಿ ನಾಮಫಲಕ ಉದ್ಘಾಟನೆ ಮಾಡಿದ್ದು ಬಹಳ ಸಂತೋಷದ ವಿಷಯ ಮತ್ತು ಇಂತಹ ಜನಪ್ರತಿನಿಧಿಗಳನ್ನು ನಮ್ಮ ಮಧ್ಯೆ ಇರುವುದು ಕೂಡಾ ನಾವೆಲ್ಲರೂ ಸಂತೋಷ ಪಡುವಂತ ವಿಷಯವಾಗಿದೆ. ಇನ್ನೂ ಇವರು ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳಲ್ಲಿ ಬೆಳೆಯಲಿ ಎಂದರು. ಬಹುಜನ ಸಮಾಜ ಪಕ್ಷದ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಫೋಟೋವನ್ನು ಕಾಣಿಕೆಯಾಗಿ ನಾಗೇಶರಾವ್ ಇವರಿಗೆ ನೀಡಿದರು.
ಈ ಸಂದರ್ಭದಲ್ಲಿ ಹುಲಗಪ್ಪ ಗ್ರಾಮ ಪಂಚಾಯಿತಿ ಸದಸ್ಯರು ವೆಂಕಟೇಶ್ವರ ಕ್ಯಾಂಪ್, ರಂಗನಾಥ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ವೀರೇಶ್ ಬುದಿವಲ್ ಕ್ಯಾಂಪ್ ಗ್ರಾಮ ಪಂಚಾಯತ್ ಸದಸ್ಯರು, ಹಿರಿಯ ಮುಖಂಡರಾದ ದೊಡ್ಡಮನಿ ಮಾಸ್ಟರ್, ದೇವಪ್ಪ, ರಂಗನಾಥ್, ತಿಮ್ಮಣ್ಣ ಮಲ್ಕಾಪುರ್, ಆನಂದ, ಮುಖ್ಯಗುರುಗಳು, ಅಂಗನವಾಡಿ ಕಾರ್ಯಕರ್ತರು, ವೆಂಕಟೇಶ್ವರನ ಎಲ್ಲಾ ಗ್ರಾಮಸ್ಥರು ಸಹ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend