;

ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರ 114ನೇ ಜನ್ಮ ದಿನಾಚರಣೆ…!!!

ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರ 114ನೇ ಜನ್ಮ ದಿನಾಚರಣೆ.

ಯಾವ ಕ್ರಾಂತಿ, ಜನತೆಗೆ ಸ್ವಾತಂತ್ರ‍್ಯವನ್ನು ತಂದುಕೊಟ್ಟ ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ದೇಶದ ಮೂಲೆಮೂಲೆಗೂ ಒಯ್ಯಬೇಕು. ಕೋಟ್ಯಾಂತರ ಮರ್ದಿತ ಜನರಿಗೆ ತಲುಪಿಸಬೇಕು. ಬಂಡವಾಳಶಾಹಿ ಸಾಮ್ರಾಜ್ಯವಾದಿ ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ…”*
*-ಭಗತ್ ಸಿಂಗ್*

ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಮಹನ್ ಕ್ರಾಂತಿಕಾರಿ ಭಗತ್ ಸಿಂಗ್ ರ 114ನೇ ಜನ್ಮ ದಿನಾಚರಣೆಯನ್ನು ನಗರದ ಮುನ್ಸಿಪಲ್ ಪಿಯುಸಿ ಕಾಲೇಜುನಲ್ಲಿ ಕಾರ್ಯಕ್ರಮ ಮಾಡಲಾಯಿತು, ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಉಪಾನ್ಯಾಸಕರಾದ ವೆಂಕಟೇಶ್ ಅವರು ಮಾಲಾರ್ಪಣೆ ಮಾಡಿದರು. ಕಸ್ತೂರಿ ಬಾಯಿ ಶಾಲೆ, ಸರಳಾದೇವಿ ಕಾಲೇಜು, ವಿಮ್ಸ್ ಕ್ರೀಡಾಂಗಣ, ಐಟಿಐ ಮೈದಾನ ಮತ್ತು ಮುನ್ಸಿಪಲ್ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ AIDSO ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ ಅವರು ಮಾತನಾಡುತ್ತಾ, ದೇಶವನ್ನು ಕೇವಲ ಬ್ರಿಟಿಷರ ದಬ್ಬಾಳಿಕೆ ಮತ್ತು ಅಧಿಕಾರದಿಂದ ಮುಕ್ತಗೊಳಿಸುದು ನಿಜವಾದ ಸ್ವಾತಂತ್ರ್ಯ ಅಲ್ಲ, ಬದಲಿಗೆ ಯಾವ ರೀತಿಯಿಂದಲೂ ಮಾನವನಿಂದ ಮಾನವನ ಶೋಷಣೆ ನಡೆದಂತಹ ಸಮಾಜ ನಿರ್ಮಾಣ ಮಾಡುವುದು ನಿಜವಾದ ಸ್ವಾತಂತ್ರ‍್ಯ ಎಂದು ಭಗತ್ ಸಿಂಗ್ ರ ನಂಬಿಕೆ. ಈ ವಿಚಾರಗಳು ಇಂದಿಗೂ ಪ್ರಸ್ತುತ. ಇಂತಹ ಉದಾತ್ತ ವಿಚಾರ, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು AIDSO ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಇಡೀ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಎಲ್ಲಿಯೂ ಕೂಡ ರಾಜಿಮಾಡಿಕೊಳ್ಳದೇ ಹೋರಾಟ ಕಟ್ಟಿದ ಮಹನ್ ಕ್ರಾಂತಿಕಾರಿ ಭಗತ್ ಸಿಂಗ್. ಅವರು ಇಂದಿಗೂ ಪ್ರಸ್ತತ ಎಂದು ಹೇಳುತ್ತಾ 1917 ರಲ್ಲಿ ರಷ್ಯಾದಲ್ಲಿ ಸಮಾಜವಾದ ದೇಶವಾದಗ ಅಲ್ಲಿನ ಉಚಿತ ಶಿಕ್ಷಣ, ಉಚಿತ ಆರೋಗ್ಯ, ಮಹಿಳೆಯರ ಘನತೆಯುಕ್ತ ಜೀವನ, ವೇಶ್ಯಾವಾಟಿಕೆ ನಿರ್ಮೂಲನ, ಶಿಕ್ಷಣ ಮುಗಿಸಿದ ಪ್ರತಿಯೊಬ್ಬರಿಗೂ ಉದ್ಯೋಗ ಖಾತ್ರಿ. ಈ ರೀತಿ ನಮ್ಮ ಭಾರತವನ್ನು ಸಮಾಜವಾದಿ ರಾಷ್ಟ್ರ ನಿರ್ಮಾಣ ಮಾಡುವುದು ಭಗತ್ ಸಿಂಗ್ ಅವರ ಕನಸಾಗಿತ್ತು. ಅ ಕನಸು ನನಸು ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು ಹಾಗೂ ಅವರ ಜೀವನ ಮೌಲ್ಯ, ಆದರ್ಶ ನಮ್ಮದು ಅಗಲಿ, ಭಗತ್ ಸಿಂಗ್ ವಿಚಾರ ಎಲ್ಲಾ ಕಡೆ ಹರಡಬೇಕು.

ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಇನ್ನು ಬಡತನ, ನಿರುದ್ಯೋಗ, ಮಹಿಳೆಯರು ಮೇಲಿನ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತಿಲ್ಲ, ಇಂತಹ ಬಂಡವಾಳ ಸಮಾಜ ತೊಲಗಿಸಿ ಸಮಸಮಾಜ ಕಟ್ಟುವುದು ಅವಶ್ಯಕತೆ ನಮ್ಮಲ್ಲರದು ಎಂದು ಹೇಳಿದರು.

ಈ ಸಂದರ್ಭದಲ್ಲಿ AIDSO ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರಾದ ಕೆ.ಈರಣ್ಣ, ನಿಹಾರಿಕ, ಅನುಪಮ, ಮತ್ತು ಸದಸ್ಯರಾದ ಉಮಾದೇವಿ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು..

ವರದಿ. ಎಂ, ಎಲ್, ವೆಂಕಟೇಶ್ ಬಳ್ಳಾರಿ, ಉಪಸಂಪಾದಕರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;