;

ಸಿಂಧನೂರು : ಚಲವಾದಿ ಮಹಾಸಭಾದಿಂದ ಕೊಲೆ ಆರೋಪಿಗಳನ್ನುಬಂದಿಸುವಂತೆ ತಹಶೀಲ್ದಾರವರಿಗೆ ಮನವಿ…!!!

ಸಿಂಧನೂರು : ಚಲವಾದಿ ಮಹಾಸಭಾದಿಂದ ಕೊಲೆ ಆರೋಪಿಗಳನ್ನುಬಂದಿಸುವಂತೆ ತಹಶೀಲ್ದಾರವರಿಗೆ ಮನವಿ.

ಕುನ್ನಟಗಿ ಕ್ಯಾಂಪ್ ನಲ್ಲಿ ದಿನಾಂಕ:23/09/2021ರಂದು ಸುಮಾರು ಸಂಜೆ 6:00 ಘಂಟೆಗೆ ಹುಟ್ಟು ಹಬ್ಬದ ಅಂಗವಾಗಿ ಪಟಾಕಿ ಸಿಡಿಸಿದ ಕಾರಣಕ್ಕೆ ಅಲ್ಲಿಯ ಲಕ್ಷೀಕಾಂತರೆಡ್ಡಿ, ಖಾದರಸಾಬ, ಇಮಾಮಸಾಬ್, ಇನ್ನೂ ಅನೇಕ ಜನ ಸೇರಿಕೊಂಡು ದಲಿತ ಜನಾಂಗದವರ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇಂಥಹ ಕೊಲೆ ಆರೋಪಿಗಳನ್ನು ಬಂದಿಸಿ ಕೊಲೆಯಾದ ಜಮದಗ್ನಿ ಕುಟುಂಬಕ್ಕೆ ಮೂವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ,ಅವರ ಕುಟುಂಬಕ್ಕೆ ಸೂಕ್ತ ಪೋಲಿಸ್ ರಕ್ಷಣೆ ಒದಗಿಸಬೇಕು ಎಂದು ಮಾನ್ಯ ದಂಡಾದಿಕಾರಿಗಳಾದ ಮಂಜುನಾಥ ಬೋಗಾವತಿ ಮತ್ತು ಡಿ.ವಾಯ್. ಎಸ್. ಪಿ. ವೆಂಕಟಪ್ಪ ನಾಯಕ ಯವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಮಣ್ಣ ಗೊನ್ವಾರ್, ಎಂಬಿ ದೊಡ್ಡಮನಿ, ಎಚ್.ಎಮ್. ಬಡಿಗೇರ್, ಅಯ್ಯಪ್ಪ ಮಲ್ಲಾಪುರ್, ಹುಲಗಪ್ಪ ಮಲ್ಕಾಪುರ್ ಬಿಎಸ್ಪಿ ಮುಖಂಡರು, ಚನ್ನಬಸವ ಏಳುರಾಗಿಕ್ಯಾಂಪ್, ನರಸಪ್ಪ ಕಟ್ಟಿಮನಿ,ಲಗಮಪ್ಪಗೊರೆಬಾಳ, ಹನುಮಂತಪ್ಪ ವಕೀಲರು ಬೂದಿವಾಳ, ನಿರುಪಾದಿ ಸಾಸಲಮರಿ,ಬಸವರಾಜ್ ಪುಲ್ಲದಿನ್ನಿ, ಪಂಪಾಪತಿ ಬೂದಿಹಾಳ, ಮಲ್ಲಪ್ಪ ಗೋನಾಳ, ಹನುಮಂತಪ್ಪ ಗೋಮರ್ಸಿ, ಬಿ.ಎನ್ ಯಾರದಿಹಾಳ್,ಇನ್ನೂ ಅನೇಕ ದಲಿತಪರ ಸಂಘಟನೆ ನಾಯಕರು ಬಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;