ಸೋರುತಿಹುದು ಮನೆಯ ಮಾಳಿಗೆ
ಹೊನ್ನಾಳಿ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣಾ ದಿನಾಂಕ 22-12-2020 ರಂದು ನಡೆದಿರುತ್ತದೆ ಮತ್ತು ನ್ಯಾಮತಿ ತಾಲೂಕಿನ ಚುನಾವಣೆ ದಿನಾಂಕ 27-12-2020 ರಂದು ನಡೆದಿರುತ್ತದೆ ದಿನಾಂಕ 15-02-21ಕ್ಕೆ ತಾಲೂಕಿನ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ ನಂತರ ದಿನಾಂಕ 16-02-21 ರಿಂದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ,ಮೈಸೂರು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ರಾಜ್ಯದ್ಯಂತ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಐದು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು ನಂತರ ರಾಜ್ಯದಲ್ಲಿ ಕೊರೋನ ಹೆಚ್ಚಾದ ಕಾರಣ ದಿನಾಂಕ21-04-2021 ರಂದು ತರಬೇತಿಯು ಸ್ಥಗಿತಗೊಂಡಿತು ನಂತರ ಕೊರೋನ ಪ್ರಮಾಣ ಕಡಿಮೆಯಾದ ನಂತರ15-07-2021ರಂದ ಪುನಃ ಪ್ರಾರಂಭವಾಯಿತು ನಿಗದಿತ ದಿನಾಂಕ ದಂದು ಸದಸ್ಯರು ತರಬೇತಿಗೆ ವೈಯಕ್ತಿಕ ಕಾರಣದಿಂದಾಗಿ ಗೈರು ಹಾಜರಾಗಿದ್ದ ಸದಸ್ಯರಿಗೆ ತರಬೇತಿ ದಿನಾಂಕ 16-08-2021 ರಂದು ಕೊನೆಯ ಅವಕಾಶ ನೀಡಲಾಗಿತ್ತು ಆದರೆ ಅವಳಿ ತಾಲೂಕುಗಳಾದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಸರ್ಕಾರ ಕೊಟ್ಟ ಅವಕಾಶವನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಅವಕಾಶ ಕೊಡದೆ ತಾಲೂಕು ಪಂಚಾಯಿತಿಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಇದರಿಂದಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಯಬೇಕಾದ ವಿಚಾರಗಳು ಏನು ಎಂದರೆ ಗ್ರಾಮ ಪಂಚಾಯಿತಿ ಸದಸ್ಯರ ಜವಾಬ್ದಾರಿಗಳು ಮತ್ತು ಅಧಿಕಾರ ಪ್ರಜೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು, ಸಭೆಗಳು, ಸಮಿತಿಗಳು, ಸಂಪನ್ಮೂಲಗಳು ಇಂತಹಾ 18 ವಿಷಯಗಳಿಂದ ಸದಸ್ಯರು ವಂಚಿತರಾಗಿರುತ್ತಾರೆ, ಇದರಿಂದ ಮಾಹಿತಿ ಕೊರತೆಯಿಂದ ಗ್ರಾಮಾಭಿವೃದ್ಧಿಗೆ ಮಾರಕವಾಗುತ್ತದೆ ಹಾಗೆಯೇ ತರಬೇತಿ ಹಾಜರಾದ ಸದಸ್ಯರಿಗೆ ಸರ್ಕಾರ ನೀಡಿರುವಂತಹ ಅತಿ ಅವಶ್ಯಕವಾಗಿ ಬೇಕಾದ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ1993 ಕಾಯ್ದೆ ಪುಸ್ತಕ ಮತ್ತು ಪಂಚಾಯಿತಿ ಪ್ರಪಂಚ ಪುಸ್ತಕಗಳನ್ನ ತರಬೇತಿ ಕೊನೆಯ ದಿನ ಹಾಜರಾದ ಸದಸ್ಯರಿಗೆ ಸರ್ಕಾರದಿಂದ ಉಚಿತವಾಗಿ ಕೊಡುತ್ತಾರೆ ಆದರೆ ಪಂಚಾಯತಿ ಪ್ರಪಂಚ ಪುಸ್ತಕವನ್ನ ಇಲಾಖೆ ತಡವಾಗಿ ತಾಲ್ಲೂಕು ಪಂಚಾಯತಿಗೆ ಕಳುಹಿಸಿದ ಕಾರಣ ಹಾಜರಾದ ಎಲ್ಲ ಸದಸ್ಯರಿಗೆ ತಲುಪಿಸ ಬೇಕಿತ್ತು ಆದರೆ ಇಂದಿನ ವರೆಗೆ ತಲುಪಿಸುವ ಕೆಲಸ ಇನ್ನು ಮಾಡಿಲ್ಲ ಮತ್ತು ತಾಲೂಕ್ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಪ್ರಯಾಣ ಭತ್ಯೆಯನ್ನು ಸದಸ್ಯರಿಗೆ ತಲುಪಿಸಬೇಕೆಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದ್ದರು ಸಹ ಇದುವರೆಗೂ ಪ್ರಯೋಜನವಾಗಿಲ್ಲ .
ಮಾಹಿತಿ ಕೊರತೆಯಿಂದ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಅನುಷ್ಠಾನ ಮಾಡುತ್ತಾರೆ ಅದಕ್ಕೆ ಜವಾಬ್ದಾರಿ ಯಾರು ? ಸರ್ಕಾರ ಕೊಟ್ಟ ಅವಕಾಶವನ್ನು ಸರಿಯಾದ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸರ್ಕಾರದ ಸೌಲಭ್ಯ ಸಮಯಕ್ಕೆ ಸರಿಯಾಗಿ ತಲುಪಿಸದೆ ವಂಚನೆ ಮಾಡಿರುತ್ತಾರೆ ತರಬೇತಿ ಹಾಜರಾದ ಸದಸ್ಯರಿಗೆ ಸರ್ಕಾರ ನೀಡಲಾದ ಸೌಲಭ್ಯಗಳನ್ನು ಬೆಳಿಗ್ಗೆ 12 ಕ್ಕೆ ಟೀ ಬಿಸ್ಕೆಟ್ ಮಧ್ಯಾಹ್ನದ ಊಟ ಮತ್ತೆ ಸಂಜೆ 4 ಕ್ಕೆ ಟೀ ಬಿಸ್ಕೆಟ್ ನಂತರ ಪ್ರಮಾಣ ಪತ್ರವನ್ನು ಕೊಡುತ್ತಾರೆ ,ಸರ್ಕಾರ ವ್ಯವಸ್ಥಿತವಾಗಿ ತರಬೇತಿ ಹಮ್ಮಿಕೊಂಡಿದೆ ಆದರೆ ಇಲಾಖೆಯ ಅಧಿಕಾರಿಗಳ ಸಹಕಾರ ಸಿಗದೆ ಗ್ರಾಮ ಪಂಚಾಯತಿ ಸದಸ್ಯರು ವಂಚಿತರಾಗಿದ್ದಾರೆ ಇಂತಹಾ ದೊರಣೆ ಕೊನೆ ಯಾವಾಗ? ಎಂಬ ಪ್ರಶ್ನೆ ಕಾಡುತ್ತಿದೆ
ಗ್ರಾಮ ಪಂಚಾಯಿತಿ ಸದಸ್ಯರ ಸರ್ಕಾರದ ನೀಡುವ ಸೌಲಭ್ಯಗಳಿಂದ ವಂಚಿತರಾದರೆ ಸಾಮಾನ್ಯ ಪ್ರಜೆಗಳ ಗತಿ ಏನು? ಎಂಬುದೇ ಇಲ್ಲಿ ಜನಸಾಮಾನ್ಯರ ಒಂದು ಮನದಲ್ಲಿ ಕಾಡುವ ಯಕ್ಷ ಪ್ರಶ್ನೆ…ಇನ್ನಾದರೂ ಬದಲಾವಣೆಯತ್ತ ರಾಜ್ಯ ಸರ್ಕಾರ ಸಂಬಂಧ ಪಟ್ಟ ಅಧಿಕಾರಿಗಳ ಭ್ರಷ್ಟ ಆಡಳಿತ ವ್ಯವಸ್ಥೆಯ ಒಂದು ಉಪಟಳಕ್ಕೆ ಕಡಿವಾಣ ಹಾಕಲಿ ಎಂಬುದೇ ನಮ್ಮ ಒಂದು ದಿಟ್ಟ ನಿಲುವು… ಎಚ್ಚರಿಕೆ

ವರದಿ. ರೇಖಾ, ಆರ್ ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
