;

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳ ತಮ್ಮ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ದಿನದಂದು ಅವರ ಮನದಾಳದ ಮಾತು ಎಚ್ಚರಿಕೆ ಪತ್ರಿಕಾ ತಂಡದೊಂದಿಗೆ…!!!

25 ನೇ ವಿವಾಹ ವಾರ್ಷಿಕೋತ್ಸವದ ನೋವು-ನಲಿವಿನ ಸಂಭ್ರಮದಲ್ಲಿ:- ಬೆಂಗಳೂರಿನ ಕೆ.ಆರ್.ಸರ್ಕಲ್ ನಲ್ಲಿರುವ ಯುನಿವರ್ಸಿಟಿ ವಿಶ್ವೇಶ್ವರಯ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ಓದುತ್ತಿರುವಂತ ಸಂದರ್ಭದಲ್ಲಿ ಕಾಲೇಜಿನ ನಾಯಕನಾದ ನನಗೆ ಹಾಗೂ ನನ್ನ ವಿರೋಧಿ ಬಣಕ್ಕೆ ಗುಂಪು ಘರ್ಷಣೆಗಳಾಗಿ ನಾನು ಕೆಲ ತಿಂಗಳ ಕಾಲ ಕಾಲೇಜಿನ ಹಾಸ್ಟಲ್ ತ್ಯಜಿಸಿ ಬೆಂಗಳೂರಿನ ಹನುಮಂತ ನಗರದ ನನ್ನ ಸ್ನೇಹಿತನ ರೂಂ ಸೇರಿಕೊಳ್ಳಬೇಕಾದಂತ ಪರಿಸ್ಥಿತಿ ಎದುರಾಯಿತು. ನನ್ನ ರೂಂಮಿನ ರಸ್ತೆಯಲ್ಲಿದ್ದ ಶ್ರೀಗುರು ರಾಘವೇಂದ್ರ ಮಠಕ್ಕೆ ಒಕ್ಕಲಿಗರ ಯುವತಿಯಾದ ಮಂಜುಳ ಪ್ರತಿ ಗುರುವಾರರಂದು ದರ್ಶನ ಪಡೆಯಲು ತಪ್ಪದೆ ಬರುತ್ತಿದ್ದರು.ಈಗೆ ಹೋಗುವ ಬರುವ ಸಂದರ್ಭದಲ್ಲಿ ನನ್ನ ರೂಂ ಮುಂದೆ ಸಾಗುವ ಈ ಬಾಳ ಪಯಣದಲ್ಲಿ ಇಬ್ಬರ ಕಣ್ಣೋಟದ ಮಧ್ಯೆ 1991 ರಲ್ಲಿ ಪ್ರೇಮಾಂಕುರವಾಗಿ ಐದು ವರ್ಷಗಳ ಕಾಲ ಗಾಢವಾಗಿ ಪ್ರೀತಿಸಿ ಹೆತ್ತ ತಂದೆ ತಾಯಿಗೆ ಹಾಗೂ ನನ್ನ ನಾಲ್ಕು ಸಹೋದರಿಯರ ಮನ ನೋಯಿಸಿ ಬಹಳಷ್ಟು ವಿರೋದದ ನಡುವೆಯೂ ದಿನಾಂಕ:-26/9/1996 ರಲ್ಲಿ ಬೆಂಗಳೂರಿನ ಶ್ರೀಬನಶಂಕರಿ ದೇವಾಲಯದಲ್ಲಿ ಅಂದಿನ ವಿಧಾನ ಸಭೆಯ ಲೆಜಿಸ್ಲೇಚರ್ ನ ಕಾರ್ಯದರ್ಶಿಗಳಾದ ಟಿ.ರಾಜಣ್ಣ ಹಾಗೂ ನನ್ನ ಇಂಜನೀಯರಿಂಗ್ ಕಾಲೇಜಿನ ಸಹಪಾಠಿಗಳ ಸಮಕ್ಷಮದಲ್ಲಿ ಸರಳ ವಿವಾಹವಾದಂತ ಶುಭ ಘಳಿಗೆ. ಪ್ರೇಮ ವಿವಾಹದ ನಂತರ ಬಹಳಷ್ಟು ಸಂಬಂಧಿಗಳು ನನ್ನಿಂದ ಅಂತರ ಕಾಪಾಡಿಕೊಂಡಿದ್ದು ಇಂದಿಗೂ ನನಗೆ ನೋವಿದೆ.ಕುರುಬನಾದ ನಾನು ಅನ್ಯ ಜಾತಿಯ ಒಕ್ಕಲಿಗ ಹುಡುಗಿಯನ್ನು ಮದುವೆಯಾಗಿದ್ದು ದೊಡ್ಡ ಅಪರಾಧವೆನ್ನುವಂತೆ ನನ್ನನ್ನು ಕೀಳಾಗಿ ಕಂಡರೂ, ಅದನ್ನು ಲೆಕ್ಕಿಸದೇ ನನ್ನನ್ನೇ ನಂಬಿ ಬಂದಂತ ನನ್ನ ಶ್ರೀಮತಿಗಾಗಿ ಹಗಲಿರುಳು ದುಡಿದು ಜೀವನದ ರಥ ಸಾಗಿಸುತ್ತಾ ಇಂದು ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಭ್ರಷ್ಟಾಚಾರಗಳನ್ನು ಬಯಲಿಗೆಳೆದ ಫಲವಾಗಿ ನನ್ನ ಮೇಲೆ ಅನೇಕ ಕೇಸ್ ಗಳಾಗಿವೆ. ನನ್ನ ಮೇಲೆ ಕೆಲ ಕೇಸ್ ದಾಖಲಾಗಿದ್ದು ನನಗೆ ಬೇಸರವಿಲ್ಲ, ಆದರೆ ಏನು ತಪ್ಪು ಮಾಡದ ನಾಲ್ಕು ಗೋಡೆಗಳ ಮಧ್ಯ ಹೌಸ್ ವೈಪ್ ಆಗಿದ್ದ ನನ್ನ ಶ್ರೀಮತಿಯ ಮೇಲೇನೂ ಕೇಸ್ ಆಗಿದ್ದು ಬಹಳ ಬೇಸರ ತರಿಸಿದೆ. ಇಡೀ ರಾಜ್ಯದ ಪತ್ರಕರ್ತರ ಇತಿಹಾಸದಲ್ಲಿ ಈ ರೀತಿಯ ಮಡದಿ ಮೇಲೆ ಕೇಸ್ ದಾಖಲಾಗಿದ್ದು ಇದೇ ಮೊಟ್ಟ ಮೊದಲು ಅಂತ ಕಾಣುತ್ತೇ. ನನ್ನ ಧ್ವನಿ ಹತ್ತಿಕ್ಕುವ ಸಲುವಾಗಿ ನನ್ನ ಶ್ರೀಮತಿಯ ಮೇಲೆ ಗದಾ ಪ್ರಹಾರ ನಡೆಸಿದ್ದರೂ ಜೊತೆಗೆ ಐದಾರು ಬಾರಿ ನನ್ನ ಮೇಲೆ ಕೊಲೆ ಯತ್ನ ನಡೆದಿದ್ದರೂ ಇಂದಿಗೂ ನನ್ನ ಮೇಲೆ ಬೇಸರಿಸಿಕೊಳ್ಳದೆ ಕೋಪಗೊಳ್ಳದೆ ನಗು ನಗುತ್ತಲೇ ನನಗೆ ಧೈರ್ಯ ತುಂಬುತ್ತಾ ನಾ ಇಡುವಂತಹ ಕಲ್ಲು ಮುಳ್ಳಿನ ಪ್ರತಿ ಹೆಜ್ಜೆಗೂ ಹೆಜ್ಜೆ ಹಾಕುತ್ತಾ ಇಂದಿಗೆ 25 ವರ್ಷಗಳು ಪೂರ್ತಿಯಾಗತ್ತಲಿರುವ ಈ ಶುಭ ಸಂದರ್ಭದಲ್ಲಿ ನನ್ನ ಪ್ರೀತಿಯ ಅಂಜು ಗೆ ಈ ಹೃದಯ ಪೂರ್ವಕ ಆಕಾಶದೆತ್ತರದ ಪ್ರೀತಿಯ ಜಗಮಗಿಸುವ ನಕ್ಷತ್ರಗಳ ಉಡುಗೊರೆಯ ಜೊತೆಗೆ ಜೀವನದ ಪ್ರತಿ ಕ್ಷಣದ ನನ್ನ ಬೆವರ ಹನಿ ಹನಿಯೂ ನಿನಗಾಗಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,ಬೆಂಗಳೂರು…

ವರದಿ. ಮಂಜುನಾಥ್, ಎನ್, ಸಂಪಾದಕರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *