ಅಸ್ಪೃಶ್ಯತೆ ನಿವಾರಣೆಗೆ ಪೊಲೀಸರ ವಿನೂತನ ಜಾಗೃತಿ ಅಭಿಯಾನ*
ಬೇವಿನಹಳ್ಳಿ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಜಾತಿ ಗಲಭೆ ಪ್ರಕರಣ ದಾಖಲಾಗಿಲ್ಲ ಹೀಗಾಗಿ ಈ ಗ್ರಾಮವು ಸದಾ ಸರ್ವ ಜನಾಂಗದವರಲ್ಲಿ ಸಾಮರಸ್ಯ ಬೀರುವ ಗ್ರಾಮವಾಗಿದೆ ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ( ಸಿಪಿಐ ) ವಿಶ್ವನಾಥ್ ಹಿರೇಗೌಡ ಹೇಳಿದರು.
ಅವರು ಬೇವಿನಹಳ್ಳಿಯಲ್ಲಿ “ಅಸ್ಪೃಶ್ಯತೆ ಮುಕ್ತ ಗ್ರಾಮ” ಎಂಬ ಅಸ್ಪೃಶ್ಯತೆ ನಿವಾರಣೆ ವಿನೂತನ ಜಾಗೃತಿ ಅಭಿಯಾನದ ಪ್ರಾಯೋಗಿಕ ಕಾರ್ಯಕ್ರಮ ಆಯೋಜಿಸಿ ಮಾತನಾಡಿದರು.
ದೇಶವು ಸ್ವಾತಂತ್ರ್ಯಗೊಂಡು 75ವರ್ಷ ಕಳೆದರು ಇಲ್ಲಿಯವರೆಗೆ ಕೆಲ ಗ್ರಾಮಗಳಲ್ಲಿ ಅಸ್ಪೃಶ್ಯತೆ ಜೀವಂತ ಇದೆ ಎನ್ನುವುದು ಅತ್ಯಂತ ಬೇಸರದ ಸಂಗತಿ. ಇತ್ತೀಚಿಗೆ ಕುಷ್ಟಗಿ ತಾಲೂಕಿನ ಮಿಯ್ಯಾಪುರದಲ್ಲಿ ನೆಡೆದ ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ ರಾಜ್ಯಾದಂತ ತೀವ್ರ ಸಂಚಲನೆ ಮೂಡಿಸಿದ್ದಕ್ಕಾಗಿ ಅಸ್ಪೃಶ್ಯತೆ ಆಚರಣೆಯನ್ನು ಮಾಡಿದವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ಜಿಲ್ಲೆಯ ಜನತೆ ಅಷ್ಟೇ ಅಲ್ಲ ಮನುಕುಲ ಸಮಾಜ ತಲೆತಗ್ಗಿಸುವಂತಹ ಪ್ರಕರಣ. ಹೀಗಾಗಿ ಅಸ್ಪೃಶ್ಯತೆ ಆಚರಣೆ ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ಇಂಥ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಮರುಕಳಿಸದಂತೆ ನಾವೆಲ್ಲರೂ ಜಾಗೃತರಾಗೋಣ. ಹೀಗಾಗಿ ನಾವು ಅಸ್ಪೃಶ್ಯತೆ ಮುಕ್ತ ಗ್ರಾಮ ಪ್ರಾಯೋಗಿಕ ಅಭಿಯಾನ ಕಾರ್ಯಕ್ರಮವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂತಿರುವ ಬೇವಿನಹಳ್ಳಿ ಗ್ರಾಮವನ್ನೆ ಆಯ್ಕೆ ಮಾಡಿಕೊಂಡಿರುವ ಉದ್ದೇಶ ಈ ಗ್ರಾಮದಲ್ಲಿ ಆಸ್ಪಶ್ಯತೆ ತೊಲಗಲಿ ಎಂದು….

ವರದಿ. ದಾವಲ್ ಮಲ್ಲಿಕ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
