ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು: ಶ್ರೀ ಕ್ಷೇತ್ರದ ವತಿಯಿಂದ ರಾಜ್ಯದ ಹಲವು ಭಾಗಗಳಲ್ಲಿ ಇರುವ ಹಳೆಯ ಮತ್ತು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ, ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಆಶಯದ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ದೇಣಿಗೆಯನ್ನು ಕೊಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಯೋಜನೆಯ ಜಿಲ್ಲಾ ನಿರ್ದೇಶಕ ಜನಾರ್ದನ ತಿಳಿಸಿದರು. ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಶ್ರೀ ಕೆಂಚೊಬಳೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕೆಂಚೊಬಳೇಶ್ವರ ಸ್ವಾಮಿ ದೇವಸ್ಥಾನ ಸಮಿತಿಗೆ ಎರಡು ಲಕ್ಷರೂಗಳ ಚೆಕ್’ ಅನ್ನು ವಿತರಣೆ ಮಾಡಿ ಮಾತನಾಡಿದರು.
ನಮ್ಮ ದೇಶ ಹಿಂದೂಗಳ ಪವಿತ್ರ ಸ್ಥಾನ ಮತ್ತು ಅನೇಕ ಮಹಾನ್ ಸಾಧು ಸಂತರು ಜನ್ಮ ಪಡೆದ ಕರ್ಮಭೂಮಿಯಾಗಿದ್ದು, ಇಲ್ಲಿ ದೇವಾಲಯಗಳು ಅತ್ಯಂತ ಪ್ರಾಮುಖ್ಯತೆ ಪಡೆದಿವೆ. ಹಿಂದೂ ಸಾಂಪ್ರದಾಯದಲ್ಲಿ ದೇವಾಲಯವನ್ನು ನಿರ್ಮಿಸಿ ದೇವರನ್ನು ಕಲ್ಲಿನಮೂರ್ತಿಯನ್ನುಟ್ಟು ಪೂಜಿಸುವುದು ನಮ್ಮ ಹಿಂದೂಗಳ ನಂಬಿಕೆ ಮತ್ತು ಸಂಸ್ಕಾರವಾಗಿದೆ. ಆದ್ದರಿಂದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ರಾಜ್ಯದ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವ ಸಂಕಲ್ಪವನ್ನು ಮಾಡಿದ್ದು , ಇದರಂತೆ ನಮ್ಮ ಸಂಸ್ಥೆಯು ಹಲವಾರು ದೇವಾಲಯಗಳಿಗೆ ಹಣದ ಸಹಾಯ ಮಾಡುವುದರ ಮೂಲಕ ಹಿಂದೂಗಳ ನಂಬಿಕೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಜನಾರ್ದನ ಅವರನ್ನು ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಶ್ರೀ ಕೆಂಚೊಬಳೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕುಂತಿಯ ಬೋರೇಶ ಮಠದ ಶಿವಮೂರ್ತಿ ಸ್ವಾಮಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ವಲಯ ಮೇಲ್ವಿಚಾರಕ ರವಿ.ಬಿ., ಶಿಕ್ಷಕ ವಸಂತ್ ಕುಮಾರ್, ಗ್ರಾಮಾಭಿವೃದ್ದಿ ಯೋಜನೆಯ ಕೃಷಿಯಂತ್ರದಾರೆ ಪ್ರಭಂದಕ ಬೊರಯ್ಯ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಷಡಾಕ್ಷರಪ್ಪ, ಗ್ರಾ.ಪಂ.ಸದಸ್ಯ ಕರಿಬಸಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಓ.ಮೊರಾರ್ಜಿ, ಚಿಕ್ಕೊಬನಹಳ್ಳಿ ಗ್ರಾಮದ ಸೇವಾ ಪ್ರತಿನಿಧಿ ಚನ್ನಬಸಮ್ಮ, ದೇವಸ್ಥಾನ ಸಮಿತಿಯ ಅಧ್ಯಕ್ಷÀ ಕೊಲ್ಲಪ್ಪ, ಚಿಕ್ಕೊಬನಹಳ್ಳಿ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತಿ ಇದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
