ತಾಲೂಕು ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ ಜೀವ ಉಳಿಸುವ ಆಸ್ಪತ್ರೆಯ ಮುಂಭಾಗದಲ್ಲಿ ಜೀವಕ್ಕೆ ಅಪಾಯಕಾರಿಯಾಗಿ ನಿಂತಿರುವ ವಿದ್ಯುತ್ ತಂತಿಗಳು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ವಿದ್ಯುತ್ ತಂತಿಗಳು ಗಿಡಮರಗಲ್ಲಿ ಹಾದು ಹೋಗಿದ್ದರು KEB (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸಾರ್ವಜನಿಕರು ಆಸ್ಪತ್ರೆಯ ಮುಂಭಾಗಲ್ಲಿ ಗಿಡ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯಲು ಭಯ ಪಡುವಂತಹ ಪರಿಸ್ಥಿತಿ ಇಲ್ಲಿನ KEB department ಉಂಟುಮಾಡಿದೆ.

ಶಾಖ ಅಧಿಕಾರಿಗಳು, ಕಾರ್ಯ ನಿರ್ವಾಹಕ ಅಭಿಯಂತರರು ಕಂಡು ಕಾಣದ ಹಾಗೆ ಓಡಾಡುತ್ತಿದ್ದಾರೆ. ಇಲ್ಲಿನ KEB ಲೈನ್ ಮ್ಯಾನುಗಳು ಸಂಬಳಕ್ಕೋಸ್ಕರ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ವಿನ್ಹ ಯಾವದೇ ತರಹದ ಜನರಲ್ ತಪಾಸಣೆ ಮಾಡುಹುದ್ದಿಲ್ಲ ಎಂದು ಇಲ್ಲಿನ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಇಲ್ಲಿನ ಡಾಕ್ಟರ್ ಗಳು ಕೂಡ ತುಂಬಾ ನಿರ್ಲಕ್ಷತೆಯಿಂದ ಓಡಾಡುತ್ತಿದ್ದಾರೆ. ಮುಂದೆ ಅನಾಹುತ ಸಂಭವಿಸುದಕ್ಕಿಂತ ಮುಂಚೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂಬ ಮನವಿ ಇಲ್ಲಿನ ಸರ್ವಜನಿಕರದ್ದಾಗಿದೆ….
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
