ಸಿಂಧನೂರು : ವಿರುಪಾಪುರ ಗ್ರಾಮ ಪಂಚಾಯತಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಅಧಿಕಾರಿಗಳಿಂದ ದಾರಿ ತಪ್ಪಿಸುವ ಕೆಲಸ.
ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ್ ತಂದೆ ಈರಪ್ಪ ಇವರು ದಿನಾಂಕ :19/1/2021 ರಂದು ಅಂಗವಿಕಲರ ಶೇ5%ರ ಅನುದಾನದಲ್ಲಿ ಎಷ್ಟು ಖರ್ಚಾಗಿದೆ, ಇದರ ಬಗ್ಗೆ ಸೂಕ್ತ ದಾಖಲಾತಿ ಮತ್ತು ಎಸ್ಸಿ ಎಸ್ಟಿ ಅನುದಾನದಲ್ಲಿ ಎಷ್ಟು ಖರ್ಚಾಗಿದೆ ಇದರ ಬಗ್ಗೆ ಸೂಕ್ತ ದಾಖಲೆ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ವಿರುಪಾಪುರ ಮಾಹಿತಿ ಹಕ್ಕಿನ ಅಧಿನಿಯಮದಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಅಧಿಕಾರಿಯು ಯಾವುದೇ ಮಾಹಿತಿ ನೀಡದ ಕಾರಣ ದಿನಾಂಕ :02/03/2021 ರಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಸಿಂಧನೂರ್ ಇವರಿಗೆ ಮೇಲ್ಮನೆಯನ್ನು ಸಲ್ಲಿಸಿದ್ದು,ಇವರು ಸಹ ಯಾವುದೇ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ :30/3/2021 ರಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಚೂರು ಇವರಿಗೆ ರಿಜಿಸ್ಟರ್ ಪೋಸ್ಟ್ ಮುಖಾಂತರ ಕಳಿಸಿದ್ದರೂ ಕೂಡಾ ಮಾಹಿತಿ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬಸವರಾಜ್ ಇವರು ಆರೋಪಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಅರ್ಜಿದಾರರು ಅಂಗವಿಕಲರು ಎಂದು ಗೊತ್ತಿದ್ದರೂ ಯಾವುದೇ ಮಾಹಿತಿ ನೀಡದೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅರ್ಜಿದಾರನು ಅರ್ಜಿ ಸಲ್ಲಿಸಿದ ದಿನದಿಂದ ಕಲಂ 7(1) ರನ್ವಯ 30 ದಿನಗಳಲ್ಲಿ ಮಾಹಿತಿಯನ್ನು ನೀಡಬೇಕು.ಸಾರ್ವಜನಿಕ ಮಾಹಿತಿ ಅಧಿಕಾರಿ ತಮ್ಮಲ್ಲಿ ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಸದರಿ ಅರ್ಜಿಯನ್ನು ಐದು ದಿನದೊಳಗೆ ಸಂಬಂಧಪಟ್ಟ ಮಾಹಿತಿ ಅಧಿಕಾರಿಗೆ ತಿಳಿಸಬೇಕು , ಅರ್ಜಿದಾರರಿಗೆ ಹಿಂಬರಹ ಕಳಿಸಬೇಕು ಇದ್ಯಾವುದನ್ನು ಮಾಡದೇ ನನ್ನನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
