ಭ್ರಷ್ಟಾಚಾರ ನಿರ್ಮೂಲನೆಗೆ. ತಾಲೂಕು ಆರ್.ಟಿ.ಐ.ಸಂಘಟನೆಯು ಸಿದ್ಧ : ಹೆಚ್.ಜಿ.ರಮೇಶ ಕರೆ.
ಕೊಟ್ಟೂರು ಭ್ರಷ್ಠಚಾರವನ್ನು ಹೋಗಲಾಡಿಸಿ ಪಾರದರ್ಶಕ ಆಡಳಿತ ಸಿಗುವತ್ತ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ಜನತೆಯನ್ನು ರಾಜ್ಯದಲ್ಲೆಡೆ ಸಿದ್ದಗೊಳಿಸಬೇಕು. ಇದರ ಮೂಲಕ ಎಲ್ಲಾ ಬಗೆಯ ಸಾಮಾಜಿಕ ನ್ಯಾಯ ಸಿಗುವಂತೆ ಆಗಬೇಕು ಯಾವುದೇ ಕಾರಣಕ್ಕೂ ಮಾಹಿತಿ ಹಕ್ಕನ್ನು ದುರುಪಯೋಗಪಡಿಸಿಕೊಳ್ಳಲು ಯಾರೊಬ್ಬರು ಮುಂದಾಗಬಾರದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟದ ರಾಜ್ಯ ಸಂಘಟನೆಯ ಅಧ್ಯಕ್ಷ ಹೆಚ್.ಜಿ.ರಮೇಶ ಕರೆ ನೀಡಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಕೊಟ್ಟೂರು ತಾಲೂಕು ಪದಾಕಾರಿಗಳ ಅಕಾರಿಗಳ ಪದಗ್ರಹಣ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾಹಿತಿ ಹಕ್ಕು ಹೋರಾಟಗಾರರನ್ನು ಅಕಾರಿಗಳನ್ನು ಮತ್ತು ಅಕಾರವಂತರು ಕೀಳು ದೃಷ್ಠಿಯಿಂದ ನೋಡುತ್ತಾರೆ. ಇದನ್ನೆ ಸವಾಲಾಗಿರಿಸಿಕೊಂಡು ಪ್ರತಿಯೊಂದು ಸರ್ಕಾರದ ಯೋಜನೆ ಮತ್ತಿತರ ಲಾಭಗಳನ್ನು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ದೊರಕಿಸಲು ಕಾರ್ಯಕರ್ತರು ದುಡಿಯಬೇಕು. ಲಂಚ ರಹಿತ ಆಡಳಿತದ ವಾತಾವರಣ ಸೃಷ್ಠಿಯಾದರೆ ಮಾತ್ರ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕುತ್ತದೆ ಎಂದರು.
ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ, ಸುಭಾಷ್ ಅಡಿ ಮತ್ತಿತರ ಆಶಯದಂತೆ ಮಾಹಿತಿ ಹಕ್ಕು ಕಾರ್ಯಕರ್ತರು ಕಾರ್ಯ ನಿರ್ವಹಿಸಿ ಅವರ ವಿಶ್ವಾಸಕ್ಕೆ ಧಕ್ಕೆ ತರದಂತೆ ಸಾಮಾಜಿಕ ಸೇವೆ ಮಾಡಬೇಕು ಮಾಹಿತಿ ಹಕ್ಕು ಕಾರ್ಯಕರ್ತರ ರಕ್ಷಣೆಯ ವಿಷಯವನ್ನು ಪ್ರಧಾನವಾಗಿರಿಸಿಕೊಂಡು ಎಲ್ಲೆಡೆ ತುಳಿತಕ್ಕೊಳದವರು ಮತ್ತು ಬಡವರಿಗೆ ನ್ಯಾಯ ಒದಗಿಸಿ ಕೊಡುವತ್ತಾ ಮುಂದಾಗಬೇಕು ಎಂದರು.
ಆರ್.ಟಿ.ಐ. ಸಂಘಟನೆಯ ರಾಜ್ಯ ಮುಖಂಡ ಪ.ಯ.ಗಣೇಶ ಮಾತನಾಡಿ ಮಾಹಿತಿ ಹಕ್ಕು ಸಂಘಟನಾಗಾರರು ತಮ್ಮ ಉದ್ದೇಶಗಳನ್ನು ಸ್ಪಷ್ಠವಾಗಿ ತಿಳಿದುಕೊಂಡು ಯಾವುದೇ ಉದ್ದೇಶಗಳಿಗೆ ಲೋಪ ಬರದಂತೆ ಕಾರ್ಯ ಮಾಡಬೇಕು.ಲಂಚದ ಪದ್ದತಿಯನ್ನು ಅಕಾರಿಗಳು ಕೈಬಿಡುವಂತಹ ವಾತಾವರಣ ಸೃಷ್ಠಿ ಮಾಡಬೇಕು ಎಂದರು.
ಆರ್.ಟಿ.ಐ ಉಪಾಧ್ಯಕ್ಷ ಬಿ.ಶಿವಶಂಕರ, ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ಚಂದ್ರಶೇಖರ, ವಿಜಯನಗರ ಜಿಲ್ಲಾ ಅಧ್ಯಕ್ಷ ಬಸವರಾಜ್, ಆರ್.ಟಿ.ಐ.ಮಾಹಿತಿ ಸಂಪಾದಕ ಅಮರಕಳ್ಳಿ ಗುಡ್ಡ, ಮುಖಂಡರುಗಳಾದ ರಾಮಕೃಷ್ಣ ಕಣವಿಹಳ್ಳಿ, ಟಿ.ಹೆಚ್.ಎಂ.ರಾಜಕುಮಾರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವರದಿ:ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
