;

ಕೂಡ್ಲಿಗಿ:ಓವರ್ ಡೋಜ್ ಗೆ ಆಕಳು ಬಲಿ.!?-ಮಾಲೀಕನ ಆರೋಪ…!!!

*ಕೂಡ್ಲಿಗಿ:ಓವರ್ ಡೋಜ್ ಗೆ ಆಕಳು ಬಲಿ.!?-ಮಾಲೀಕನ ಆರೋಪ*-

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೊಟ್ಟೂರು ರಸ್ಥೆ ಲ್ಲಿರುವ ಮಹಮದ್ ಸಾದಿಕ್ ರವರು, ತಮ್ಮ ಆಕಳು ಪಶುವೈಧ್ಯಕೀಯ ಚಿಕಿತ್ಸಕ ಶಿವಕುಮಾರ ಎಂಬ ಅನನುಭವಿಯ ಚಿಕಿತ್ಸೆಯಿಂದಾಗಿ ಸತ್ತಿದೆ ಎಂದು ಮಹಮದ್ ಸಾದಿಕ್ ಸೆ16ರಂದು ದೂರಿದ್ದಾರೆ. ಸಾಸಲವಾಡ ಗ್ರಾಮದ ಶಿವಕುಮಾರ ಎಂಬಾತನು ಅನನುಭವಿ ಪಶುಚಿಕಿತ್ಸಕನಾಗಿದ್ದು, ಆತನು ಮಾಡಿದ ಎಡವಟ್ಟಿನ ಚಿಕಿತ್ಸೆ ಯಿಂದಾಗಿ ಹಾಗೂ ಆತನು ನೀಡಿದ ಓವರ್ ಡೋಜ್ ಇಂಜಕ್ಷನ್ ಗೆ ಆಕಳು ಬಲಿಯಾಗಿದೆ ಎಂದು ಆಕಳು ಮಾಲಿಕ ಸಾದಿಕ್ ದೂರಿದ್ದಾರೆ.
ಕಳೆದ ಎರೆಡು ದಿನಗಳ ಹಿಂದೆ ಆಕಳು ಆಹಾರ ಸೇವಿಸದೇ ಇದ್ದು ಅನಾರೋಗ್ಯಕ್ಕೀಡಾಗಿತ್ತು,ಈ ಭಾಗದಲ್ಲಿ ತಾನು ಪಶುಚಿಕಿತ್ಸಕನೆಂದು ಹೇಳಿಕೊಂಡಿದ್ದ ಸಾಸಲವಾಡ ಗ್ರಾಮದ ಶಿವಕುಮಾರ ಎಂಬಾನನ್ನು ತಾವು ಸಂಪರ್ಕಿಸಿದ್ದು.ಅವರು ಸೆ15ರಂದು ತಮ್ಮ ಆಕಳಿಗೆ ಏಕಾ ಏಕಿ ಮೂರು ಇಂಜಕ್ಷನ್ ಗಳನ್ನು ನೀಡಿದ್ದಾರೆ,ತಕ್ಷಣವೇ ಆಕಳು ಅಸುನೀಗಿ ನೆಲಕ್ಕುರುಳಿರುವುದಾಗಿ ಆಕಳಿನ ಮಾಲೀಕ ಮಹಮದ್ ಸಾದಿಕ್ ದೂರಿದ್ದಾರೆ.
ಅನಾರೋಗ್ಯಕ್ಕೀಡಾಗಿದ್ದ ತಮ್ಮ ಆಕಳಿಗೆ ಪಶುಚಿಕಿತ್ಸಕ ಎಂದು ಹೇಳಿಕೊಳ್ಳುವ ಸಾಸಲವಾಡ ಶಿವಕುಮಾರ, ನೀಡಿದ ಹೈಡೋಜ್ ಇಂಜಕ್ಷನ್ ನಿಂದಾಗಿ ತಮ್ಮ ಹಸು ಸಾವಿಗೀಡಾಗಿದೆ ಎಂದು ಆಕಳಿನ ಮಾಲೀಕ ಮಹಮದ್ ಸಾದಿಕ್ ಹೇಳಿಕೆ ನೀಡಿದ್ದಾರೆ.ಈ ಸಂಬಂದಿಸಿದಂತೆ ಆಕಳಿನ ಮಾಲೀಕ ಹೇಳಿಕೆ ನೀಡಿದ್ದಾರೆ, ಶಿವಕುಮಾರವರ ಅನನುಭವಿ ಚಿಕಿತ್ಸಾವಿಧಾನ ಹಾಗೂ ಅವರ ಹೈಡೋಜ್ ಇಂಜಕ್ಷನ್ ನಿಂದಾಗಿ ತಮ್ಮ ದುಭಾರಿ ಬೆಲೆಯ ಆಕಳು ಸತ್ತಿರುವುದಾಗಿ ಆಕಳಿನ ಮಾಲೀಕ ಮಹಮದ್ ಸಾದಿಕ್ ದೂರಿದ್ದಾರೆ.
ತಾವು ಆಕಳಿನಿಂದ ಹೈನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದು ಅದು ಚಿಕ್ಕ ಕರುವನ್ನು ಹೊಂದಿತ್ತು, ಶಿವಕುಮಾರರು ಮಾಡಿದ ಎಡವಟ್ಟಿನಿಂದಾಗಿ ತಮ್ಮ ಜೀವನ ದುಸ್ಥರವಾಗಿದೆ ಮತ್ತು ಆಕಳಿನ ಕರು ಅನಾಥವಾಗಿದೆ ಎಂದು ಮಹಮದ್ ಸಾದಿಕ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮಗೆ ಆನ್ಯಾಯವಾಗಿದೆ ಇದೇ ರೀತಿ ಅವರಿಂದ ತಮಗೆ ಸೂಕ್ತ ಪರಿಹಾರ ದೊರಕಬೇಕು,ಹಾಗೂ ಅವರ ತಪ್ಪಿಗೆ ಅವರಿಗೆ ಕಾನೂನು ರೀತ್ಯ ತಕ್ಕ ಶಾಸ್ಥಿಕಲಿಸಬೇಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗಾದ ಅನ್ಯಾಯ ಬೇರಾರಿಗೂ ಆಗದಂತೆ ತಪ್ಪಿತಸ್ಥರಿಗೆ ಸೂಕ್ತ ಶಾಸ್ಥಿಯಾಗಬೇಕಿದೆ,ಹಾಗೂ ಹೈನುಗಾರಿಕೆ ಮಾಡುವವರು ಇದರಿಂದ ಜಾಗೃತರಾಗಬೇಕಿದೆ. ಅನನುಭವಿ ಚಿಕಿತ್ಸಕ ಶಿವಕುಮಾರರ ಬೇಜವಾಬ್ದಾರಿ ಚಿಕಿತ್ಸೆಯಿಂದಾಗಿ ಆಕಳು ಬಲಿಯಾಗಿದೆ ಇದರಿಂದಾಗಿ ತಮಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ನಷ್ಟವಾಗಿದೆ ಮತ್ತು ನೋವಾಗಿದೆ,ಕಾರಣ ತಪ್ಪಿತಸ್ಥ ಶಿವಕುಮಾರ ವಿರುದ್ಧ ಸಂಬಂದಿಸಿದ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಮಹಮದ್ ಸಾಧಿಕ್ ಈ ಮೂಲಕ ಕೊರಿದ್ದಾರೆ…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;