ಸಾಧನೆ ಮೂಲಕ ಶಾಲೆಗೆ ಕೀರ್ತಿ ತಂದ ಶಿವನಾಯಕ ದೊರೆ – ಶಿವರಾಜ್ ಪಾಲ್ತೂರ್. ಕೂಡ್ಲಿಗಿ :- ಸತತ ಹತ್ತು ವರ್ಷಗಳಿಂದ ಪ್ರತಿಭಾ ಕಾರಂಜಿಯಲ್ಲಿ ಬಡೇಲಡಕು ಸರ್ಕಾರಿ ಪ್ರೌಢಶಾಲೆಯ ಮಕ್ಕಳ ನಾಟಕ ಪ್ರದರ್ಶನವನ್ನು ರಾಜ್ಯಮಟ್ಟದವರೆಗೆ ಆಯ್ಕೆ ಯಾಗುವಂತೆ ನಿರ್ದೇಶನ ನೀಡಿದ ನಾಟಕ ಶಿಕ್ಷಕ ಶಿವನಾಯಕ ದೊರೆಗೆ ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಇವರ ಸಾಧನೆಯಿಂದ ಕೂಡ್ಲಿಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್ ಪಾಲ್ತೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲೂಕಿನ ಬಡೇಲಡಕು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿವನಾಯಕ ದೊರೆಯ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಕ್ಕಳನ್ನು ನಾಟಕ ಕಲೆಯಲ್ಲಿ ತಲ್ಲೀನರನ್ನಾಗಿ ಮಾಡಿ ನಾಟಕ ನಿರ್ದೇಶನ ಮಾಡಿ ಸತತ ಹತ್ತುವರ್ಷದಿಂದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ನಾಟಕ ಪ್ರದರ್ಶನದಲ್ಲಿ ರಾಜ್ಯ ಮಟ್ಟದವರಿಗೆ ಈ ಶಾಲೆಯ ಕೀರ್ತಿಪತಾಕೆ ಹಾರಿಸಿದ್ದಾರೆ ಇಂತಹ ಶಿಕ್ಷಕ ಶಿವನಾಯಕ ದೊರೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದ್ದು ತುಂಬಾ ಅಭಿನಂದನಾರ್ಹ ಎಂದು ಶಿವರಾಜ್ ತಿಳಿಸಿದರು. ಬಡೇಲಡಕು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾರಾದ ರಾಮಕೃಷ್ಣ ಮುಸಳೆ ಮಾತನಾಡಿ ಮಕ್ಕಳ ಏಳ್ಗೆಯನ್ನು ಬಯಸಿ ಇಂದು ರಂಗಕಲೆಯನ್ನು ಉಳಿಸುವ ನಿಟ್ಟಿನಲ್ಲಿ 2014ರಲ್ಲಿ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಅಂಗುಲಿಮಾನ ಪಾತ್ರಧಾರಿ ಬಡೇಲಡಕು ಪ್ರೌಢಶಾಲೆಯ ವಿದ್ಯಾರ್ಥಿ ಗಾದಿಲಿಂಗೇಶನಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಲು ಮುಖ್ಯ ಕಾರಣಕರ್ತರು ನಾಟಕ ಶಿಕ್ಷಕ ಶಿವನಾಯಕ ದೊರೆಗಳು ಅಲ್ಲದೆ 2017ರಲ್ಲಿ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಶಿವನಾಯಕದೊರೆ ಸ್ವರಚಿತ ವೀರ ಸಿಂಧೂರ ಲಕ್ಷ್ಮಣ ನಾಟಕದ ನಿರ್ದೇಶನದ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಲಭಿಸಿದ್ದು ರಾಜ್ಯಮಟ್ಟದವರೆಗೂ ನಾಟಕ ಪ್ರದರ್ಶನದಲ್ಲಿ ಬಡೇಲಡಕು ಸರ್ಕಾರಿ ಪ್ರೌಢಶಾಲೆಯ ಕೀರ್ತಿ ಪತಾಕೆ ಹಾರಿಸಿದ ಶಿವನಾಯಕದೊರೆಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ನಮಗೆಲ್ಲಾ ಸಂತಸ ತಂದಿದೆ ಎಂದರು. ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತ ಶಿವನಾಯಕ ದೊರೆ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸುವಲ್ಲಿ ಬಡೇಲಡಕು ಪ್ರೌಢಶಾಲೆಯ ಶಿಕ್ಷಕರ ಸಹಕಾರ ಹಾಗೂ ಬಡೇಲಡಕು ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳ ಪಾಲಕ ಪೋಷಕರ ಸಹಕಾರ ಪ್ರೋತ್ಸಾಹ ಕಾರಣವಾಗಿದೆ ಎಂದರು.. ಈ ಸಂಧರ್ಭದಲ್ಲಿ ಸಹಶಿಕ್ಷಕರಾದ ಮಲ್ಲಿಕಾರ್ಜುನ, ಬಿ. ಸುಧಾಕರ, ಜಿ. ನೀಲಕಂಠ, ಮಂಜುನಾಥ, ಸುಸೈನಾ, ಯು ಎಂ ಮಮತಾ, ಪಾರ್ವತಿ ಹಾಗೂ ಜವಾನ ಗಣೇಶಪ್ಪ ಇತರರು ಉಪಸ್ಥಿತರಿದ್ದು ಶಿವನಾಯಕದೊರೆಯನ್ನು ಸನ್ಮಾನಿಸಿ ಗೌರವಿಸಿದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
