;

2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?

2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?

ವಿಜಯಪುರ: ಕೊವಿಡ್ 19 ಸಾಂಕ್ರಾಮಿಕ ರೋಗಕ್ಕೆ ಎರಡು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದು, ಮೂರನೇ ಅಲೆ ಭೀತಿಯ ನಡುವೆಯೇ ಹೆಣ್ಣು ಮಗು ಕೊವಿಡ್ ಗೆ ಬಲಿಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವಿಜಯಪುರ ಬಡಾವಣೆಯ 2 ವರ್ಷ ವಯಸ್ಸಿನ ಮಗು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ.20ರಂದು ಮಗುವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಆರ್ ಟಿಪಿಸಿಆರ್ ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದರೂ ಸಹ, ಮಗುವಿಗೆ ಜ್ವರ, ನಿಶ್ಯಕ್ತಿಯಂತಹ ಕೊರೊನಾ ಲಕ್ಷಣಗಳು ಗೋಚರಿಸಿದ್ದರಿಂದ ಮಗು ಕೊವಿಡ್ ನಿಂದ ಮೃತಪಟ್ಟಿದೆ ಎಂದು ಪರಿಗಣಿಸಲಾಗಿದೆ. ವೈದ್ಯರ ತಂಡ ಕೂಡ ಮಗು ಕೊವಿಡ್ ನಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಮೂರನೇ ಅಲೆ ಅಲ್ಲ

ಎರಡು ವರ್ಷದ ಮಗು ಕೊವಿಡ್ ನಿಂದ ಮೃತಪಟ್ಟ ಬೆನ್ನಲ್ಲೇ ಇದು ಮೂರನೇ ಅಲೆಯ ಮುನ್ಸೂಚನೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿತ್ತು. ಈ ಸಂಬಂಧ ವಿಜಯಪುರ ಡಿಸಿ ಪಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ಇದು ಮೂರನೇ ಅಲೆಯ ಮುನ್ಸೂಚನೆ ಅಲ್ಲ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಕೊರೊನಾ ಲಕ್ಷಣಗಳು ಕಂಡು ಬಂದರೆ ಅಂತಹ ಸಾವನ್ನು ಕೊವಿಡ್ ಸಾವು ಎಂದು ಪರಿಗಣಿಸಬೇಕು ಎಂಬ ಕಾರಣಕ್ಕಾಗಿ ಇದು ಕೊರೊನಾದಿಂದಾಗಿರುವ ಸಾವು ಎಂದು ಪರಿಗಣಿಸಲಾಗಿದೆ. ವೈದ್ಯರ ವರದಿಯಲ್ಲೂ ಇದು ಕೊರೊನಾದಿಂದ ಸಂಭವಿಸಿದ ಸಾವು ಎಂದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;