ಸಕಾ೯ರಿ ಪ್ರೌಢ ಶಾಲೆ ಪೂಜಾರಹಳ್ಳಿಯಲ್ಲಿ ದಾಖಲಾತಿ ಹಾಜರಾತಿ ಆಂದೋಲನ ಕಾರ್ಯಕ್ರಮ…!!!

ಇಂದು ಸಕಾ೯ರಿ ಪ್ರೌಢ ಶಾಲೆ ಪೂಜಾರಹಳ್ಳಿಯಲ್ಲಿ ದಾಖಲಾತಿ ಹಾಜರಾತಿ ಆಂದೋಲನದ ಅಂಗವಾಗಿಶಿಕ್ಷಣ ಇಲಾಖೆ ಯಲ್ಲಿಯೇ ವಿನೂತನ ಯೋಜನೆ “ಶಿಕ್ಷಕರ ನಡೆ ಮಕ್ಕಳ ಮನೆ ಕಡೆ “ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಾಲೆಯ ಮಕ್ಕಳ ಹಾಜರಾತಿಯನ್ನು ಶೇ 100 ರಷ್ಟು ಹೆಚ್ಚಿಸುವ ಉದ್ದೇಶ ದಿಂದ ಪ್ರಾರಂಭ ಮಾಡಲಾಗಿದ್ದು, ಶಾಲೆಯ ವ್ಯಾಪ್ತಿಯಲ್ಲಿ ಬರುವ ಮೂರು ಗ್ರಾಮ ಗಳಾದ ಪೂಜಾರಹಳ್ಳಿ, ಕನ್ನಿಬೋರಯ್ಯನಹಟ್ಟಿ ಪೂಜಾರಹಳ್ಳಿ ತಾಂಡಾ ದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿ ಇದಕ್ಕೆ ಉತ್ತಮ ಸ್ಪಂದನೆ ದೊರೆ ಯಿತು ಇಂದಿನ ಸಭೆಯಲ್ಲಿ ಪಾಲ್ಗೊಂಡ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವ ಮೂಲಕ ಇಂದು ತಮ್ಮಎಲ್ಲಾ ಮಕ್ಕಳನ್ನುಶಾಲೆಗೆ ಕಳುಹಿಸಿ ದರು ಇದಕ್ಕೆ ಇಂದು ಶಾಲೆಯ ಎಲ್ಲಾ ಮಕ್ಕಳುಹಾಜರಾಗಿ ಪಾಠಗಳನ್ನು ಕೇಳಿರುವುದೇ ಸಾಕ್ಷಿ. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪಬಸಪ್ಪ ಹಾಗೂ ಗ್ರಾಮಪಂಚಾಯತಿ ಸದಸ್ಯರಾದ ನಾಗರಾಜ ಹಾಗೂ ಅಪಾರ ಸಂಖ್ಯೆಯ ಪಾಲಕರು ಪೋಷಕರುಹಾಜರಿದ್ದರು. ಶಾಲೆಯ ಮುಖ್ಯ ಗುರು ಗಳಾದ ಬಸಯ್ಯ.ಮತ್ತು ಶಿಕ್ಷಕರಾದ ಸಿದ್ದಾರಾಧ್ಯ, ನಾಗಭೂಷಣ, ಜಯಣ್ಣ, ನವೀನ್ ಕುಮಾರ್, ಸುವರ್ಣ ಹಾಜರಿದ್ದರು.ಇದರ ಅಂಗವಾಗಿ ಇಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥ ನಡೆಸಲಾಯಿತು..

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend