ಸಮಸ್ತ ಕನ್ನಡ ನಾಡಿನ ಎಲ್ಲಾ ಶಿಕ್ಷಕ ಬಾಂಧವರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು…!!!

ಸಮಸ್ತ ಕನ್ನಡ ನಾಡಿನ ಎಲ್ಲಾ ಶಿಕ್ಷಕ ಬಾಂಧವರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು.
ಶಿಕ್ಷಕರ ದಿನಾಚರಣೆಗೆ, ನಮಗೆಲ್ಲಾ ನೆನಪಾಗುವುದು, ಸರ್ವೆಪಲ್ಲಿ ರಾಧಾಕೃಷ್ಣನ್ ರ ವರು, ಮತ್ತು ಸಾವಿತ್ರಿಬಾಯಿ ಬಾಯಿಪುಲೆ, ಯವರು.
ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ ನೋವು, ಅವಮಾನಗಳನ್ನು ಮೆಟ್ಟಿನಿಂತು ಹೆಣ್ಣು ಮಕ್ಕಳಿಗೆ ಶಾಲೆ ಆರಂಭಿಸಿ ಅಕ್ಷರ ಕಲಿಸಿದ,ದಿಟ್ಟ ಮಹಿಳೆ,ಸಾವಿತ್ರಿಬಾಯಿ ಫುಲೆ.


ಇನ್ನೂ ಸರ್ವೆಪಲ್ಲಿ ರಾಧಾಕೃಷ್ಣನ್ ಇವರ ಬಗ್ಗೆ ಹೇಳುವುದಾದರೆ, ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ,ಪ್ರೀತಿ,ನಿಷ್ಠೆಯನ್ನು, ಹೊಂದಿದ್ದರು.
ಸ್ವತಹ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಗೈದಿರುವ ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ.
ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ.
ಸರ್ವೆಪಲ್ಲಿ ರಾಧಾಕೃಷ್ಣನ್ ಅವರು, ತಮಿಳುನಾಡಿನ ತಿರುತ್ತಣಿ, ಎಂಬಲ್ಲಿ ಸೆಪ್ಟಂಬರ 5,1888 ರಂದು ಜನನ. ತಂದೆ ಸರ್ವಪಲ್ಲಿ ವೀರಸ್ವಾಮಿ, ತಾಯಿ ಸೀತಮ್ಮ,
ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು, 16ನೇ ವಯಸ್ಸಿನಲ್ಲಿ ಶಿವ ಕಾಮಮ್ಮ, ಎಂಬುವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ,ಸಾರ ವೇದ, ಉಪನಿಷತ್, ಜೈನ, ತತ್ವಜ್ಞಾನ, ಶಂಕರ, ರಾಮಾನುಜ, ಮಧ್ವ, ಪ್ಲೇಟೋ,ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದ್ದರು.
ಸತತ ಅಧ್ಯಯನ ಕಠಿಣ ಪರಿಶ್ರಮ ದಿಂದ, ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು.
ಡಾಕ್ಟರ್ ರಾಧಾಕೃಷ್ಣನ್ ರವರು ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರದ ಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಭಾರತೀಯ ಶಿಕ್ಷಣ ಕ್ಷೇತ್ರ ಕ್ಕೋದಕ್ಕೆ, ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ ತತ್ವಜ್ಞಾನ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು.
ರಾಧಾಕೃಷ್ಣನ್ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
1962 ರಲ್ಲಿ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆ ಗೊಂಡ ಸಂದರ್ಭದಲ್ಲಿ,
ಇವರು ದೆಹಲಿಗೆ ಹೊರಡುವ ಸಂದರ್ಭ ದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಅವರನ್ನು ಕಳುಹಿಸಿಕೊಡಲು ಸಾ ರೋಟವನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ ರಾಧಾಕೃಷ್ಣನ್ ಅವರು ಕುಳಿತ ಸಾರೋಟವನ್ನು, ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದ ವರೆಗೂ ಎಳೆದುಕೊಂಡು ಹೋಗಿ ಭಾವಪೂರ್ಣವಿದಾಯ ಹೇಳಿದರು. ಈ ಸನ್ನಿವೇಶವನ್ನು ಕಂಡು ಡಾಕ್ಟರ್ ರಾಧಾಕೃಷ್ಣನ್ ಅವರು ಭಾವುಕರಾದರಂತೆ.
ಅವರ ಜನ್ಮದಿನ ಸೆಪ್ಟೆಂಬರ್ 5 ರಂದು ಪ್ರತಿವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಸೂಚಿಸಿದರು.
1954 ರಲ್ಲಿ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಹಾಗೂ ಇನ್ನೂ ಅನೇಕ ವಿದೇಶಗಳ ಪ್ರಶಸ್ತಿಗಳಿಗೆ ಪಾತ್ರರಾದರು.
ರಾಷ್ಟ್ರಪತಿ ಹುದ್ದೆಯ ಅಧಿಕಾರಾವಧಿ ಮುಗಿದ ನಂತರ 1967 ರಲ್ಲಿ ತಮ್ಮ ನಿವೃತ್ತಿ ಜೀವನವನ್ನು ಮದ್ರಾಸಿನ ಮೈಲಾಪುರದಲ್ಲಿ ತಮ್ಮ ಅಧಿಕೃತ ನಿವಾಸ ಗಿರಿಜಾ ನಿವಾಸದಲ್ಲಿ ಕಳೆದ ರಾಧಾಕೃಷ್ಣನ್ 1975ರಲ್ಲಿ ಏಪ್ರಿಲ್ 17 ರಂದು, ಇಹಲೋಕ ತ್ಯಜಿಸಿದರು.
ಭಾರತೀಯ ಶಿಕ್ಷಣ ಕ್ಷೇತ್ರ ಕ್ಕೋದಕ್ಕೆ, ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ ತತ್ವಜ್ಞಾನ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವಂತ ಸಮಸ್ತ ನಾಡಿನ ಗುರುಗಳಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳನ್ನು, ಎಚ್ಚರಿಕೆ ಕನ್ನಡ ಕ್ರಾಂತಿಕಾರಿವಾರ ಪತ್ರಿಕೆಯ ಹಾಗೂ ಟೈಮ್ಸ್ ಆಪ್ ಬಳ್ಳಾರಿ ಮತ್ತು ಉಕ್ಕಿನ ಕೋಟೆ ಪತ್ರಿಕಾ ಬಳಗದಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಅರ್ಪಿಸುತ್ತಿದೆ.

ಸಂಪಾದಕರು.  ಎನ್,ಕಲಾವತಿ, ಶ್ರೀ ,ಎನ್. ಮಂಜುನಾಥ್..
ಉಪ ಸಂಪಾದರು, ಎಂ. ಎಲ್. ವೆಂಕಟೇಶ್.
ಬಳ್ಳಾರಿ.
ಹಾಗೂ ಪತ್ರಿಕಾ ಬಳಗದವತಿಯಿಂದ
🙏🌺🙏🌺🙏🌺🙏.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend