ಗುಡೇಕೋಟೆ ಕರಡಿ ದಾಮ:ಪವರ್ ಸ್ಟಾರ್ ಪುನಿತ್ ವೀಕ್ಷಣೆ…!!!

ಗುಡೇಕೋಟೆ ಕರಡಿ ದಾಮ:ಪವರ್ ಸ್ಟಾರ್ ಪುನಿತ್ ವೀಕ್ಷಣೆ..
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೊಟೆ ಕರಡಿದಾಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇಟಿ ನೀಡಿದರು, ಕರ್ನಾಟಕದ ಎರಡನೇ ಪ್ರಸಿಧ್ದ ಕರಡಿ ಧಾಮ ಎಂಬ ಹೆಗ್ಗಳಿಕೆ ಹೊಂದಿರೋ ಗುಡೇಕೊಟೆ ಗ್ರಾಮದ ಕರಡಿದಾಮಕ್ಕೆ ಪುನೀತ್ ಹಾಗೂ ಅವರ ಸ್ನೇಹಿತರು ಮತ್ತು ಸಿನಿಮಾ ತಂಡ ಬೇಟಿನೀಡಿತು.ಅರಣ್ಯ ಇಲಾಖೆ ಸಿಬ್ಬಂದಿಯ ಮಾರ್ಗದರ್ಶನದಲ್ಲಿ
ಕರಡಿ ದಾಮದಲ್ಲಿ ಸಂಚರಿಸಿ ವನ್ಯ ಸಂಪತ್ತಿನ ಸೌಂದರ್ಯವನ್ನು ಕಣ್ಣೋಟದಲ್ಲಿ ಸವಿದರು,
ಈ ಮೂಲಕ ದಾಮದಲ್ಲಿರುವ ಕರಡಿ,ತೋಳ,ಜಾಕ್ ವೇಲ್,ಹಾಗೂ ಇತರೆ ಅಪರೂಪದ ಹಕ್ಕಿಗಳನ್ನು ಪುನಿತ್ ಮತ್ತು ಅವರ ಸ್ನೇಹಿತರು ಕಣ್ತುಂಬಿಕೊಂಡರು.ಕರ್ನಾಟಕದಲ್ಲಿರುವ ದರೋಜಿ ಹಾಗೂ ಗುಡೇಕೋಟೆ ಕರಡಿ ದಾಮಗಳು,
ಏಷ್ಯಾ ಖಂಡದಲ್ಲಿಯೇ ಪ್ರಸಿದ್ದಿ ಹೊಂದಿವೆ ಎಂದು ಹೇಳಲಾಗುತ್ತಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಯವರು ಪವರ್ ಸ್ಟಾರ್
ಪುನಿತ್ ಭೇಟಿಯಿಂದ ಭರ್ಜರಿ ಖುಷಿಗೊಂಡಿದ್ದು ಅವರು ಪುಳಕಿತರಾಗಿದ್ದರು. ಈ ಸಂದರ್ಭದಲ್ಲಿ ನಟ ಪುನೀತ್ ಅರಣ್ಯ ಸಿಬ್ಬಂದಿಯೊಂದಿಗೆ
ಕೆಲ ಕಾಲ ಆತ್ಮೀಯತೆಯಿಂದ ಮಾತನಾಡಿದರು,ಈ ಮೂಲಕ ಅರನ್ನು ಖುಷಿಪಡಿಸಿದರು ನಂತರ ಕರಡಿದಾಮದ ರಮ್ಯನಿಸರ್ಗ ಸಿರಿಯನ್ನ ಕಂಡು ಪವರ್ ಸ್ಢಾರ್ ಮಹಾದಾನಂದ ಅನುಭವಿಸಿದರು. ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಹಾಜರಿದ್ದರು,ನಟ ಪವರ್ ಸ್ಟಾರ್ ರನ್ನು ನೋಡಲು ಗುಡೇಕೋಟೆ ಗ್ರಾಮ ಸೇರಿದಂತೆ ಕೂಡ್ಲಿಗಿ ತಾಲೂಕಿನ ಹಲವು ಗ್ರಾಮಗಳಿಂದ ನೂರಾರು ಅಭಿಮಾನಿಗಳು ಜಮಾಯಿಸಿದ್ದರು….

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend