ಭಾರತೀಯ ಅಂಚೆ ಇಲಾಖೆ ಭೌಗೋಳಿಕ ಸೂಚಿಪಟ್ಟಿಯಲ್ಲಿರುವ ವಿಶೇಷ ಲಕೋಟೆ ಬಿಡುಗಡೆ ಸಮಾರಂಭವನ್ನು ಮಲ್ಲಿಗೆ ಭವನದಲ್ಲಿ ನಡೆಯಿತು. ಇದಕ್ಕೆ ಗವಿ ಮಠದ ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳ ಸಾನಿಧ್ಯ ವಹಿಸಿದ್ದರು.
ಅಂಚೆ ಇಲಾಖೆಯ ಅಧೀಕ್ಷಕರು ಬಳ್ಳಾರಿಯ ಶ್ರೀ ವೆಂಕಟಸಾಯಿ .ತೋಟಗಾರಿಕಾ ಹಿರಿಯ ಸಹಾಯಕ ನಿ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದರು.
ಹೂವಿನ ಹಡಗಲಿ ಅಂಚೆ ಇಲಾಖೆಯ ಅಂಚೆ ಪಾಲಕರು ಶ್ರೀ ಮತಿ ಉಮಾಮಹೇಶ್ವರಿ ಅಧ್ಯಕ್ಷ ತೆ ವಹಿಸಿದ್ದರು.
ವಿಶೇಷ ಸುವಾಸನೆಯಿಂದ ಕೂಡಿರುವ ಹಡಗಲಿಯ ಸೂಜಿ ಮಲ್ಲಿಗೆ ಎಂಟು ವರ್ಷಗಳ ಹಿಂದೆ ಭೌಗೋಳಿಕ ಬೆಳೆಯಾಗಿ ಗುರುತಿಸಿಕೊಂಡು ರಾಷ್ಟ್ರೀಯ ಮಾನ್ಯತೆ ಗಳಿಸಿದೆ. ಇದೀಗ ಅಂಚೆ ಲಕೋಟೆಯಲ್ಲಿಯೂ ಮಲ್ಲಿಗೆ ಮುದ್ರಿತಗೊಳ್ಳುತ್ತಿರುವುದು ಮಲ್ಲಿಗೆ ನಾಡಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಹಡಗಲಿ ಮಲ್ಲಿಗೆ ವಿಶಿಷ್ಟ ಯಾಕೆ ?
ಕರ್ನಾಟಕದಲ್ಲಿ ಮೂರು ರೀತಿಯ ಮಲ್ಲಿಗೆಯನ್ನ ಗುರುತಿಸಬಹುದು. ಒಂದು ಮೈಸೂರು ಮಲ್ಲಿಗೆ, ಮಣಿಪಾಲ್ ಮಲ್ಲಿಗೆ ಮತ್ತು ಹಡಗಲಿ ಮಲ್ಲಿಗೆ.
ಇದರಲ್ಲಿ ಹಡಗಲಿ ಮಲ್ಲಿಗೆ ವಿಭಿನ್ನ ಪರಿಮಳ ಹೊಂದಿದ್ದು ಇದು ನಕ್ಷತ್ರದ ಅಕೃತಿಯಲ್ಲಿದೆ. ಇದಕ್ಕೆ ಹಡಗಲಿ ಭಾಗದ ಮಣ್ಣು ಮತ್ತು ವಾತಾವರಣ ಕಾರಣ ಎಂದು ತಜ್ಞರು ಸಂಶೋಧಿಸಿದ್ದಾರೆ.
ವಿಜಯನಗರ ಅರಸರ ಕಾಲದಿಂದಲೂ ಮಲ್ಲಿಗೆ ಬೆಳೆಗೆ ಹಡಗಲಿ ಪ್ರಸಿದ್ಧಿಯಾಗಿದೆ. ಹಂಪಿಯ ಅಧಿದೇವತೆ ವಿರೂಪಾಕ್ಷ, ಪಂಪಾಂಬಿಕೆಯರ ಪೂಜೆಗೆ ನಿತ್ಯವೂ ಮಲ್ಲಿಗೆ ಹೂವನ್ನು ಇಲ್ಲಿಂದ ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಕಳಿಸಲಾಗುತ್ತಿತ್ತು ಎಂಬ ಉಲ್ಲೇಖ ಚರಿತ್ರೆಯಲ್ಲಿದೆ.
ಕೋವಿಡ್ನಿಂದ ಎರಡು ವರ್ಷಗಳಿಂದ ಮಲ್ಲಿಗೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೂ ಸುಗ್ಗಿಯಲ್ಲೇ ಮಹಾನಗರಗಳ ಮಾರುಕಟ್ಟೆಗಳು ಬಂದ್ ಆಗಿದ್ದರಿಂದ ಮಲ್ಲಿಗೆ ಕೃಷಿ ಅವಲಂಬಿತರೆಲ್ಲ ತೊಂದರೆ ಅನುಭವಿಸಿದ್ದಾರೆ.
ಹೂ ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್ ಗೆ ₹25 ಸಾವಿರ ಪರಿಹಾರ ಘೋಷಿಸಿದ್ದರೂ ನೆರವು ಸಿಕ್ಕಿರುವುದು ತಾಲ್ಲೂಕಿನ ಆರೇಳು ಜನರಿಗಷ್ಟೇ. ಕಠಿಣ ಷರತ್ತುಗಳಿಂದಾಗಿ ಬಹುಪಾಲು ರೈತರು ಪರಿಹಾರ ವಂಚಿತರಾಗಿದ್ದಾರೆ. ಮಲ್ಲಿಗೆ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯೂ ಎರಡು ವರ್ಷದಿಂದ ಸ್ಥಗಿತಗೊಂಡಿದೆ.

ಮಾರುಕಟ್ಟೆಯಲ್ಲಿ ಮಲ್ಲಿಗೆಗೆ ಸ್ಥಿರಬೆಲೆ ದೊರೆಯದಿರುವುದು, ಮಧ್ಯವರ್ತಿಗಳ ಶೋಷಣೆ, ಸಾಗಣೆ ಸಮಸ್ಯೆ, ಹೂ ಬಿಡಿಸುವ ಕೂಲಿಕಾರರ ಅಭಾವ ಸೇರಿದಂತೆ ಮಲ್ಲಿಗೆ ಕೃಷಿಗೆ ನಾನಾ ಸಮಸ್ಯೆಗಳು ಮುತ್ತಿಕೊಂಡಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಮಲ್ಲಿಗೆ ತೋಟಗಳು ಕ್ಷೀಣಿಸುತ್ತಿವೆ. ಹಿಂದೆ ಸಾವಿರಾರು ಹೆಕ್ಟೇರ್ ನಲ್ಲಿದ್ದ ಮಲ್ಲಿಗೆ ಕೃಷಿ ಈಗ 250 ಹೆಕ್ಟೇರ್ ಗೆ ಕುಸಿದಿದೆ.
ಪಾರಂಪರಿಕ ಮಲ್ಲಿಗೆ ಕೃಷಿಯ ಸಂರಕ್ಷಣೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಯೋಜನೆಗಳನ್ನು ರೂಪಿಸಿಲ್ಲ. ಇನ್ನಾದರೂ ಮಲ್ಲಿಗೆ ಬೆಳೆಗಾರರಿಗೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕು..ಮಲ್ಲಿಗೆ ರೈತರಲ್ಲಿ ಮಂದಹಾಸದ ಪರಿಮಳ ಬಿರುವಂತಾಗಲಿ…

ವರದಿ.ಅಜಯ್, ಹುಗಲೂರು, ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030