;

ಹರಪನಹಳ್ಳಿ:-ಬಡ ವೃದ್ಧ ದಂಪತಿ ಬಸವ ವಸತಿ ಯೋಜನೆಯಡಿ ಆಶ್ರಯ ಮನೆ ಪಡೆಯಲು ಸತತ 5 ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಮನೆ ಕಟ್ಟಲು ಸರಕಾರದಿಂದ ಕೇವಲ 1 ರೂ. ಮಂಜೂರಾಗಿದೆ…!!!

 

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹೋಬಳಿ ಕೇಂದ್ರವಾದ ಚಿಗಟೇರಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿದ ಬಡ ವೃದ್ಧ ದಂಪತಿ ಬಸವ ವಸತಿ ಯೋಜನೆಯಡಿ ಆಶ್ರಯ ಮನೆ ಪಡೆಯಲು ಸತತ 5 ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಮನೆ ಕಟ್ಟಲು ಸರಕಾರದಿಂದ ಕೇವಲ 1 ರೂ. ಮಂಜೂರಾಗಿದೆ.

ಬೊಮ್ಮಮ್ಮ ಹಾಗೂ ಹನುಮಂತಪ್ಪ ದಂಪತಿ ಕಳೆದ ಐದು ವರ್ಷಗಳಿಂದ (2016-17) ಅಕ್ಷರಶಃ ನಿರಾಶ್ರಿತರಾಗಿದ್ದಾರೆ. ಅವರು ವಾಸವಿರೋದು ಸಂಬಂಧಿಗಳಿಂದ ಬಾಡಿಗೆ ಪಡೆದ ಪೂರ್ಣ

ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ. ಅವರು ಸರ್ಕಾರದ ಬಸವ ವಸತಿ ಯೋಜನೆಯಡಿ ಆಶ್ರಯ ಮನೆ ಪಡೆಯಲು ಸತತ 5ಲ
ವರ್ಷಗಳಿಂದ ಭಗಿರಥ ಪ್ರಯತ್ನದಲ್ಲಿದ್ದಾರೆ. ಮನೆ ಹೊಂದಲು ಹಿಂದೆ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿದ್ದಾರೆ. ನಂತರ ನಿರಂತರ ಮನೆಗಾಗಿ ಸರಕಾರಿ ಕಚೇರಿಗಳ ಬಾಗಿಲು ಅಲೆಯುತ್ತಿದ್ದಾರೆ.

ಕಡು ಬಡತನದಲ್ಲಿರುವ ದಂಪತಿ ನಿತ್ಯದ ಕೂಲಿಯಿಂದ ಬಂದ ಬಿಡಿಗಾಸಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇವರು ಈ ಹಿಂದೆ ಹಲವು ವರ್ಷಗಳಿಂದ ಅತ್ಯಲ್ಪ ವಿಸ್ತೀರ್ಣದ ಮನೆ ಹಳೇ ಜಂತಿನ ಮನೆಯಲ್ಲಿ ವಾಸವಿದ್ದರು. ಆದರೆ ಅದು ಶಿಥಿಲವಾಗಿ ನಂತರ ಬಿದ್ದಿದ್ದು ಈಗ ಕೆಲ ವರ್ಷಗಳಿಂದ ಖಾಲಿ ನಿವೇಶನ ರೂಪ ತಾಳಿದೆ. ತಮ್ಮದೇ ಆದ ತುಂಡು ನಿವೇಶನ ಮಾತ್ರ  ಹೊಂದಿರುವ ಇವರು ಏನೂ ಇಲ್ಲದ ಕಡುಬಡವರಗಿದ್ದಾರೆ. ವಸತಿಗಾಗಿ ಐದಾರು ವರ್ಷಗಳಿಂದಲೂ ಗ್ರಾಪಂ ಗೆ ನಿರಂತರವಾಗಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬದಲಿಗೆ ವಸತಿ ಯೋಜನೆಯಡಿ ಮಂಜೂರಾಗಿರೋದು ಕೇವಲ 1 ರೂ. ಮಾತ್ರ..!?. ಕಾರಣ ವಿಚಾರಿಸಿದರೆ ತಾಂತ್ರಿಕ ದೋಷ ಎಂದು ಗ್ರಾಪಂ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ,

ನಿಖರ ಕಾರಣ ನಿಗೂಢ: ನಿರಾಶ್ರಿತ ದಂಪತಿ ಈ ಕುರಿತಂತೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಗ್ರ‍ಾಪಂನಲ್ಲಿರುವ ಅವ್ಯವಸ್ಥೆ ವಿರುದ್ಧ ಕೆಲವು ಸಂಘಟನೆ ಪದಾದಿಕಾರಿಗಳು ಕಿಡಿಕಾರಿದ್ದಾರೆ. ಗ್ರ‍ಾಪಂ ನಲ್ಲಿ ಭ್ರಷ್ಟಾಚಾರ ತುಂಬಿದ್ದು ಹಣವಿಲ್ಲದೇ ಏನೂ ನಡೆಯೊಲ್ಲ, ನಾವು ಕೂಲಿಮಾಡಿ ಉಣ್ಣಬೇಕು ಹಣ ಇಲ್ಲ ಅದಕ್ಕಾಗಿ ಈ ಗತಿ ಎಂದು ಗ್ರಾಪಂ ಭ್ರಷ್ಟಾಚಾರದ ವಿರುದ್ಧ ಕೆಲ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈವರೆಗೂ 1ರೂ. ಮಾತ್ರ: ಪಲಾನುಭವಿಯು ಮನೆ ಕಟ್ಟಲು ಸರ್ಕಾರದಿಂದ ಈವರೆಗೂ ಇವರ ಖಾತೆಗೆ ಜಮಾ ಆಗಿರುವುದು ಕೇವಲ 1 ರೂ.ಮಾತ್ರ.!? ಅಚ್ಚರಿಯಾದರೂ ಸತ್ಯ ಸಂಗತಿಯಾಗಿದೆ.

ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಖುದ್ದು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಂಡು ವೃದ್ಧ ದಂಪತಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಒತ್ತಾಯಿಸಿದ್ದಾರೆ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *