ರಾಷ್ಟ್ರೀಯ ಹೆದ್ದಾರಿ 50 ರ ಕಾನನಕಟ್ಟೆಯಲ್ಲಿ ವರ್ಷದ ಹಿಂದೆ ಹೊಸದಾಗಿ ಟೋಲ್ ನಿರ್ಮಾಣವಾಗಿದ್ದು, ಇದ್ದರಿಂದ ಸ್ಥಳೀಯ ವಾಹನಗಳಿಗೂ ಟೋಲ್ ಶುಲ್ಕ ಪಾವತಿಸುವ ವಿಚಾರವಾಗಿ ನಿತ್ಯವು ಒಂದಾಲ್ಲ ಒಂದು ಗಲಾಟೆಗಳು, ದಂಬಿಗಳು ನಡೆಯುತ್ತಲೆ ಇರುತ್ತಿದ್ದು, ತಮ್ಮೂರಿನ ರಸ್ತೆಯಲ್ಲಿ ತಾವೇ ಟೋಲ್ ಶುಲ್ಕ ಪಾವತಿಸಿ ಒಡಾಟ ಮಾಡುವ ಪರಿಸ್ಥಿತಿ ಸ್ಥಳೀಯರಿಗೆ ನಿರ್ಮಾಣವಾಗಿದೆ.
ಹೌದು ತಾಲ್ಲೂಕಿನ 10 ಕಿ.ಮೀ ದೂರದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 50 ಕಾನನಕಟ್ಟೆ, ಬಂಗಾರಿಗುಡ್ಡ, ಹುಚ್ಚವ್ವನಹಳ್ಳಿ ಹಿರೇಮಲ್ಲನಹೊಳೆ ಹೀಗೆ ಸ್ಥಳೀಯ ರೈತರು, ಸಾರ್ವಜನಿಕರ ನಿತ್ಯವು ಟೋಲ್ ಶುಲ್ಕದ ಬರೆಯಿಂದ ಸಂಚಾರಿಸುವಂತಾಗಿದೆ.
ಸ್ಥಳೀಯರು ಶುಲ್ಕ ಪಾವತಿಸಬೇಕು
ಹೆದ್ದಾರಿ ಪ್ರಾಧಿಕಾರ ನಿಯಮನುಸಾರ ಟೋಲ್ ಪ್ಲಾಜ್‍ದಿಂದ 20 ಕೀ.ಮಿ ದೂರದ ಸ್ಥಳೀಯ ಜನರ ಕಾರು ಲಾರಿ ಹೀಗೆ ಹಲವು ವಾಹನಗಳಿಗೆ ಶುಲ್ಕ ವಿನಯಾತಿ ಕಾರ್ಡ್ ನೀಡಿ ಅವರಿಗೆ ಶುಲ್ಕ ರಹಿತವಾಗಿ ಸಂಚಾರಿಸುವುದಕ್ಕೆ ಅನುಮಾತಿ ನೀಡಬೇಕು ಆದರೆ ಹಂಪಿ ಎಕ್ಸ್‍ಪ್ರೆಸ್ ಪ್ರೇವೆಟ್ ಲಿ. ಅವರು ಇದ್ಯಾವುದನ್ನು ಮಾಡದೇ ನಿತ್ಯ ಸಂಚಾರಿಸುವ ಸ್ಥಳೀಯ ವಾಹನಗಳಿಂದ ವರ್ಷದಿಂದ ಖಡ್ಡಾಯವಾಗಿ ಶುಲ್ಕ ಪಾವತಿಸಿಕೊಳ್ಳುತ್ತಿದೆ ಅಲ್ಲದೇ ಇದೇ ಕಂಪನಿಯ ಮತ್ತೋಂದು ಟೋಲ್ ವಿಜಯಗರ ಜಿಲ್ಲೆಯ ತಿಮ್ಮಲ್ಲಾಪುರ ಬಳಿ ಸ್ಥಳೀಯ ವಾಹನಗಳಿಗೆ ಶುಲ್ಕ ವಿಲ್ಲದೇ ಸಂಚಾರಿಸಲು ಅನುಮತಿಸಿದ್ದಾರೆ ಎಂದು ತಾಲ್ಲೂಕಿನ ಸ್ಥಳೀಯರು ಅರೋಪಿಸುತ್ತಾರೆ.
ಸರ್ವಿಸ್ ರಸ್ತೆಗಳು ಇಲ್ಲ;
ಈ ಟೋಲ್ ಅಕ್ಕ-ಪಕ್ಕದಲ್ಲಿ ಸ್ಥಳೀಯರು ಓಡಾಟಕ್ಕೆ ಸರ್ವಿಸ್ ರಸ್ತೆಯೇ ಇಲ್ಲ ಹೆದ್ದಾರಿ ಪ್ರಾಧಿಕಾರದ ನಿಯಮದಲ್ಲಿ ಸ್ಥಳೀಯ ರೈತರು ಟ್ಯಾಕ್ಟರ್ ಇನ್ನೀತರ ಕೃಷಿಗೆ ಸಂಬಂದಿಸಿದ ಕೆಲಸಗಳಿಗೆ ಓಡಾಡಲು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದಕ್ಕೆ ಸರ್ವಿಸ್ ರಸ್ತೆಗಳು ನಿರ್ಮಾಣ ಅವಶ್ಯವಾಗಿದೆ ಆದರೆ ಸರ್ವಿಸ್ ರಸ್ತೆಗಳೆ ಇಲ್ಲದಿರುವುದು ರೈತರು, ಸ್ಥಳೀಯರಿಗೆ ತೊಂದರೆಯಾಗುತ್ತಿದೆ.
ಟೋಲ್ ತಪ್ಪಿಸವ ವಾಹನಗಳು;
ವಾಹನ ಸವಾರರು ಟೋಲ್ ತಪ್ಪಿಸುವ ಉದ್ದೇಶದಿಂದ ಬಂಗಾರಕ್ಕನಗುಡ್ಡ, ಹುಚ್ಚವ್ವನಹಳ್ಳಿ, ಹಿರೇಮಲ್ಲನಹೊಳೆ ಹೀಗೆ ದಿನಕ್ಕೆ ಒಂದೊಂದು ಮಾರ್ಗದಲ್ಲಿ ನೂರಾರು ವಾಹನಗಳುÀ ಗ್ರಾಮೀಣ ರಸ್ತೆಯಲ್ಲಿ ಹಾದು ಹೋಗುತ್ತಿದ್ದು, ಗ್ರಾಮಗಳಲ್ಲಿ ಶಾಲಾ ಮಕ್ಕಳಿಗೆ ಹಾಗೂ ರಸ್ತೆ ಅಕ್ಕ ಪಕ್ಕದ ಮನೆಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಈ ಮಾರ್ಗಗಳಲ್ಲಿ ತಿಂಗಳಿಗೆ ಎರಡು ತಿಂಗಳಿಗೋಮ್ಮೆ ಅಫಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಗಳ ಜನರು ಹೇಳುತ್ತಿದ್ದಾರೆ.
ಉದ್ಯೋಗದಲ್ಲಿ ಸ್ಥಳೀಯರಿಗಿಲ್ಲ ಕಿಮ್ಮತ್ತು
ಕಾನನಕಟ್ಟೆ ಬಂಗಾರಕ್ಕನಗುಡ್ಡ, ಹಿರೇಮಲ್ಲನಹೊಳೆ, ಹುಚ್ಚವ್ವನಹಳ್ಳಿ ಹೀಗೆ ಹಲವು ಗ್ರಾಮದ ರೈತರು ತಮ್ಮ ಮಕ್ಕಳಿಗೆ ಟೋಲ್‍ನಲ್ಲಿ ಉದ್ಯೋಗ ಸಿಗಬಹುದು ಎಂಬ ಉದ್ದೇಶನ್ನು ಕಂಪನಿಯ ಮುಂದಿಟ್ಟು ತಮ್ಮ ಹೊಲಗಳನ್ನು ಹೆದ್ದಾರಿಗೆ ಮಾರಾಟ ಮಾಡಿದ್ದಾರೆ. ಟೋಲ್ ಸಂಸ್ಥೆಯಲ್ಲಿ ಎರಡು ಟೋಲ್‍ಗಳಲ್ಲಿ 200 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ನಿರ್ವಸುತ್ತಾರೆ ಅಲ್ಲದೇ ಸ್ಥಳೀಯರಿಗೆ ಶೇ.75 ರಷ್ಟು ಮೀಸಲಾತಿಯನ್ನು ನೀಡಲೇಬೇಕು ಆದರೆ ಸ್ಥಳೀಯ ವ್ಯಕ್ತಿಗಳು ಬೆರಳಿಕೆ ಮಾತ್ರ, ಅಲ್ಲದೇ 15 ಕ್ಕೂ ಹೆಚ್ಚು ಸ್ಥಳೀಯ ಉದ್ಯೋಗಿಗಳಲ್ಲಿ ಮೂರು ತಿಂಗಳು ಕೆಲಸ ಮಾಡಿಸಿಕೊಂಡು ಮಾನಸಿಕವಾಗಿ ಕಿರುಕುಳ ನೀಡಿ ಸ್ಥಳೀಯ ಉದ್ಯೋಗಿಗಳು ಅವರಾಗಿಯೇ ಕೆಲಸ ಬೀಡುವಂತೆ ವಾತಾವರಣ ಸೃಷ್ಟಿ ಮಾಡುತ್ತಾರೆಲ್ಲದೇ ಕುಂಟು ನೆಪಹೊಡ್ಡಿ ಕೆಲಸದಿಂದ ತೆಗೆಯುತ್ತಾರೆ ಎಂದು ಲಕ್ಷ್ಮಣ ಎಂಬ ಸ್ಥಳೀಯ ಉದ್ಯೋಗಿಯು ತಮ್ಮ ಅಳನ್ನು ತೊಡಿಕೊಂಡನು.
ಕನ್ನಡಕಿಲ್ಲ ಕಿಂಚಿತ್ತು ಕಿಮ್ಮತ್ತು.
ಈ ಟೋಲ್ ಆರಂಭವಾಗಿ ಒಂದು ವರ್ಷವೇ ಕಳೆದರು “ಕಾನನಕಟ್ಟೆ ಟೋಲ್’ ಎಂಬ ನಾಮಫಲಕವೇ ಇಲ್ಲ, ಹಂಪಿ ಎಕ್ಸ್‍ಪ್ರೆಸ್ ಎಂದು ಆಂಗ್ಲಭಾಷೆಯ ನಾಮಫಲಕವಿದ್ದು, ಕರ್ನಾಟಕದಲ್ಲಿ ಮೊದಲಿಗೆ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುವ ಬದಲು ಇನ್ಯಾವುದೇ ಭಾಷೆಯಲ್ಲಿ ನಾಮಪಲದ್ದು, ಟೋಲ್‍ನಲ್ಲಿ ಕನ್ನಡಕ್ಕೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ.
ಬಾಕ್ಸ್ ;
ಕಳೆದ ವರ್ಷ ಟೋಲ್ ಕಚೇರಿಯಲ್ಲಿ ಸ್ಥಳೀಯ ಉದ್ಯೋಗಿಗಳೆಲ್ಲ ಕನ್ನಡ ರಾಜೋತ್ಸವವನ್ನು ಆಚರಿಸಲು ಸಿದ್ದತೆ ನಡೆಸಿದ್ದು, ಆಚರಣೆಗೆ ಅವಕಾಶಗಳು ನೀಡಿಲ್ಲ ಎಂಬ ಮಾತುಗಳು ಇಲ್ಲಿ ಕೇಳಿಬರುತ್ತಿವೆ.
ಕೋಟ್; 1
ಸ್ಥಳೀಯರು ಶುಲ್ಕ ವಿಲ್ಲದೇ ಸಂಚಾರಿಸಲು ಹೆದ್ದಾರಿ ಪ್ರಾಧಿಕಾರದಿಂದ ಶುಲ್ಕ ವಿನಾಯಿತಿ ಕಾರ್ಡ್‍ಗಳುನ್ನು ನೀಡುತ್ತಿದ್ದಾರೆ ಆದರೆ ಸ್ಥಳೀಯರಿಗೆ ಈ ಮಾಹಿತಿಯ ಕೊರತೆ ಇದ್ದು, ವಿನಾಯಿತು ಕಾರ್ಡ್ ಪೆಡಯಲು ಸ್ಥಳೀಯರಿಗೆ ಮಾರ್ಗದರ್ಶನ ನೀಡುತ್ತೇವೆ.
ರಮೇಶ್ ಟೋಲ್ ವವ್ಯಸ್ಥಾಪಕರು ಹಂಪಿ ಎಕ್ಸ್‍ಪ್ರೇಸ್ ಪ್ರೇವೆಟ್ ಲಿ.
ಕೋಟ್-2
ಟೋಲ್‍ನಿಂದಾಗಿ ತಮ್ಮೋರಿನ ರಸ್ತೆಯಲ್ಲಿ ಓಡಾಡಲು ತಾವೇ ಶುಲ್ಕ ಕೊಟ್ಟು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಸ್ಥಳೀಯರು ಸಂಚಾರಿಸಲು ಪ್ರತ್ಯೇಕವಾಗಿ ಸರ್ವಿಸ್ ರಸ್ತೆಗಳು ಇಲ್ಲ ಎಂದರು.
ಏಳುಕೋಟಿ ದಿನನಿತ್ಯ ಸಂಚಾರಿಸುವ ಸ್ಥಳೀಯ ವ್ಯಕ್ತಿ…

ವರದಿ. ಸಂದೇಪ್, ಎಚ್, ಸಿ.ಎಂ.ಹೊಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
