;

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ…!!!

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ

ಸಾಂಗ್ಲಿ: ಭಾರತದ ದಲಿತ ಚಳುವಳಿ ಮತ್ತು ಅಂಬೇಡ್ಕರ್ ವಾದದ ಸಂಶೋಧಕಿ ಹಾಗೂ ಬರಹಗಾರ್ತಿ ಡಾ.ಗೇಲ್ ಓಮ್ವೇಡ್ ಅಲ್ಪಕಾಲದ ಅನಾರೋಗ್ಯದ ಬಳಿಕ ಬುಧವಾರ ಕಾಸೆಂಗಾಂವ್ ನಲ್ಲಿ ನಿಧನರಾಗಿದ್ದು, ತಮ್ಮ 81 ವರ್ಷ ವಯಸ್ಸಿನ ಬದುಕಿಗೆ ವಿದಾಯ ಹೇಳಿದ್ದಾರೆ.

ಅಮೆರಿಕದಲ್ಲಿ ಜನಿಸಿದ್ದರೂ, ಭಾರತಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರ ವಿಚಾರಗಳಿಂದ ಆಕರ್ಷಿತರಾದ ಅವರು, ದಲಿತರು, ಬಡವರು, ರೈತರು, ಮಹಿಳೆಯರು ಮತ್ತು ಇತರ ಸಾರ್ವಜನಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಅಮೆರಿಕದಲ್ಲಿ ತಮ್ಮ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದಿದ್ದ ಅವರು, 1983ರಲ್ಲಿ ಭಾರತೀಯ ಪ್ರಜೆಯಾದರು. 1980ರ ದಶಕ ಆರಂಭದಲ್ಲಿ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು. ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್ ನಲ್ಲಿ ಜನಿಸಿದ್ದರೂ, ಭಾರತದಕ್ಕೆ ಬಂದು ಅಂಬೇಡ್ಕರ್ ವಾದದಿಂದ ಪ್ರೇರಣೆಗೊಂಡು, ಇಲ್ಲಿಯ ಪ್ರಜೆಯೇ ಆಗಿ ಬದಲಾದ ಅವರು ದಲಿತರ, ಬಡವರ, ಸಾರ್ಜನಿಕರ ಸೇವೆಯಲ್ಲಿ ತೊಡಗಿದ್ದರು.

ಡಾ.ಓಮ್ವೇಡ್ ಅವರ ಪತಿ ಡಾ.ಭರತ್ ಪಟಂಕರ್, ಪುತ್ರಿ ಪ್ರಾಚಿ, ಅಳಿಯ ತೇಜಸ್ವಿ ಹಾಗೂ ಮೊಮ್ಮಗಳು ನಿಯಾ ಅಮೇರಿಕದಲ್ಲಿ ನೆಲೆಸಿದ್ದಾರೆ. ಡಾ.ಓಮ್ವೇಡ್ತ್ ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ಬೆಳಗ್ಗೆ ಸಾಂಗ್ಲಿಯ ಕ್ರಾಂತಿವೀರ್ ಬಾಪೂಜಿ ಪತಂಕರ್ ಸಂಸ್ಥೆ ಕ್ಯಾಂಪಸ್ ನಲ್ಲಿ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;