ನರೇಗಾ ಕಾಮಗಾರಿ ಯೋಜನೆಯಲ್ಲಿ 37 ಲಕ್ಷಾ ಲೂಟಿ; ಇ.ಓ ಪ್ರಕಾಶ್ ವಿರುದ್ಧ.! ವಿವಿಧ ಸಂಘಟನೆ ಪ್ರತಿಭಟನೆ.!

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಇಂದು ಅಗಸ್ಟ್-25 ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಸಂಯುಕ್ತ ಸಂಘಟನೆಗಳ ನೇತೃತ್ವದಲ್ಲಿ ನರೇಗಾ ಕಾಮಗಾರಿ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿಕೊಂಡು ಹೋಗಿರುವ ಮೊಳಕಾಲ್ಮುರು ತಾಲೂಕಿನ ಈ ಹಿಂದಿನ ಇ. ಓ. ಆಗಿದ್ದ ಪ್ರಕಾಶ್ ರವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ತಾಲೂಕಿನಲ್ಲಿ 2019-20 ರಲ್ಲಿ ತಾಲೂಕು ಪಂಚಾಯಿತಿ ಇ. ಓ.ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ತಮ್ಮ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ರೈತರು ವೈಯಕ್ತಿಕ ಕಾಮಗಾರಿಗಳಿಗೆ ಕಟ್ಟಿಸಿರುವ ಕಾಮಗಾರಿಗಳ ನಾಮಫಲಕದ ಹಣವನ್ನು ರೈತರ ಖಾತೆಗೆ ಜಮಾ ಮಾಡದೇ ಗುತ್ತಿಗೆದಾರನಿಗೆ ಅಕ್ರಮವಾಗಿ ಹಣ ಸಂದಾಯ ಮಾಡಿಸಿ 37 ಲಕ್ಷ ರೂಪಾಯಿಯನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ ತಕ್ಷಣವೇ ಅವರನ್ನು ಅಮಾನತ್ತು ಪಡಿಸಬೇಕು. ತಾಲೂಕು ಪಂಚಾಯಿತಿಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ಸಂಯೋಜಕರಾದ ಹರೀಶ್ ರವರ ಮುಖಾಂತರ 1245 ರೈತರಿಗೆ ಬರಬೇಕಿದ್ದ ಹಣವನ್ನು ವಂಚಿಸಲಾಗಿದೆ. ರೈತರಿಗೆ ಬರಬೇಕಿದ್ದ ಹಣವನ್ನು ಇ. ಓ.ಪ್ರಕಾಶ್ ಹಾಗೂ ಗುತ್ತಿಗೆದಾರ ಬಿ. ಎಸ್ ಮಹೇಶ್ ರವರು ಲೂಟಿ ಮಾಡಿದ್ದು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಣ ವಸೂಲಿ ಮಾಡಿ ರೈತರ ಖಾತೆಗಳಿಗೆ ಜಮಾ ಮಾಡಬೇಕು.

ಪ್ರಕಾಶರವರು ವನ್ನು ಈಗಾಗಲೇ ಚಳ್ಳಕೆರೆಯಲ್ಲಿ ಇ. ಓ.ಆಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಭ್ರಷ್ಟಾಚಾರ ಮಿತಿಮೀರಿದ್ದು ಇದಕ್ಕೆ ಕಡಿವಾಣ ಹಾಕಬೇಕು ಜನರಿಗೆ ಸ್ಪಂದಿಸದ ಇವರನ್ನು ಅಮಾನತ್ತು ಮಾಡಬೇಕೆಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಬೇಡರಹಳ್ಳಿ ಬಸವರೆಡ್ಡಿ,ಚಿತ್ರದುರ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಬಸ್ತಿಹಳ್ಳಿ ಬಿ.ಸುರೇಶ್ ಬಾಬು,ಜಿಲ್ಲಾ ಕಾರ್ಯಾಧ್ಯಕ್ಷರಾದ ವರಕೇರಪ್ಪ ಮೊಳಕಾಲ್ಮುರು ತಾಲೂಕು ರೈತ ಸಂಘದ ಅಧ್ಯಕ್ಷರಾದ ಬೆಳಗಲ್ ಈಶ್ವರಯ್ಯ ಸ್ವಾಮಿ ಕಾಮ್ರೆಡ್ ಜಾಫರ್ ಶರೀಫ್.ಡಿಎಸ್ಎಸ್ ಮುಖಂಡರಾದ ಕೊಂಡಾಪುರ ಪರಮೇಶ್ವರಪ್ಪ. ಮರ್ಲಹಳ್ಳಿ ರವಿಕುಮಾರ್, ದುರುಗೇಶ ಈರಣ್ಣ ಈಶ್ವರಪ್ಪ ಚೆನ್ನಯ್ಯ ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು..

 

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend