ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರಳಿಹಾಳ್ ಗ್ರಾಮದಲ್ಲಿ ನೆಡದ ಹುರಳಿಹಾಳ್ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ರೈತರೊಡನೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಒಂದು ಕಾರ್ಯಕ್ರಮ ವನ್ನು ಊರಿನ ಗಣ್ಯರು ರೈತ ಮುಖಂಡರು ಜ್ಯೋತಿ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯ ಕೂಡ್ಲಿಗಿ ತಾಲೂಕಿನ ಕೃಷಿ ಅಧಿಕಾರಿ ಮಹಾಲಿಂಗಯ್ಯ ಯವರ ನೇತೃತ್ವದಲ್ಲಿ ರೈತ ಕೃಷಿ ಕ್ಷೇತ್ರ ಪಾಠಶಾಲೆ ಕಾರ್ಯಾಗಾರದಲ್ಲಿ ಹಣ್ಣು ಹಂಪಲು ಗಳು ಬಗ್ಗೆ ಹಾಗೂ ಹಲವು ತಳಿಯ ಬಗೆಯ ಬೆಳೆಸುವುದರ ಕುರಿತು ಹಾಗೆ ಹಣ್ಣು ಹಂಪಲು ತರಕಾರಿಗಳನ್ನು ಸಂರಕ್ಷಿಸುವ ಕುರಿತು ಮಾಹಿತಿ ನೀಡಲಾಯಿತು.ರೈತರು ದಿರ್ಘಾವದಿ ಬೆಳೆಯಿಂದಾಗುವಾ ಅನೂಕೂಲತೆ ಗಳನ್ನು ರೈತರಿಗೆ ಹಾಗೂ ಸಂಘದ ಸದಸ್ಯರುಗಳಿಗೆ ಮನ ಮುಟ್ಟುವಂತೆ ಹೇಳಿದರು ಇದರಿಂದ ರೈತರು ದೃತಿಗೆಡದೆ ಕೃಷಿ ಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ನಮ್ಮ ಸಂಸ್ಥೆ ವತಿಯಿಂದ ನಿಮಗೆ ಆರ್ಥಿಕ ನೆರವು ಸಿಗುವುದರ ಜೋತೆಗೆ ಶ್ರೀ ಕ್ಷೇತ್ರ ದಿಂದ ಪ್ರೋತ್ಸಾಹ ಧನ ಸಿಗುತ್ತದೆ ರೈತರು ಈ ಸೌಲಭ್ಯ ಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೂಡ್ಲಿಗಿ ತಾಲೂಕು ಕೃಷಿ ಮೆಲ್ವೀಚಾರಕರಾದ ಮಹಾಲಿಂಗಯ್ಯ ನವರು ಹೇಳಿದರು. ಈ ಸಂದರ್ಭದಲ್ಲಿ ಹುರಳಿಹಾಳ್ ವಲಯದ ಮೆಲ್ವೀಚಾರಕರಾದ ರಂಗಸ್ವಾಮಿ. ಹುರಳಿಹಾಳ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳಾದ ಅನಿತಾ. ಹಾಗೂ ಗ್ರಾಮದ ಹಿರಿಯ ಮುಖಂಡರು ರೈತರು ಸಂಘದ ಸಧ್ಯಸರು ಉಪಸ್ಥಿತರಿದ್ದರು..

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
