ಮೊಳಕಾಲ್ಮೂರು: ವಿದ್ಯುತ್ ಖಾಸಗೀಕರಣ ವಿರೋಧಿಸಿ ನಾನಾ ಸಂಘಟನೆಗಳಿಂದ ಪ್ರತಿಭಟನೆ..!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ಆಗಸ್ಟ್-25 ಇಂದು ಪಟ್ಟಣದ ತಾಲೂಕು ಕಚೇರಿಯ ಅವರಣದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ನಾನಾ ಸಂಘಟನೆಗಳಿಂದ ಪ್ರತಿಭಟನೆ. ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಖಾಸಗಿಕರಣ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ವಿದ್ಯುತ್ ಕಂಪನಿಗಳು ಖಾಸಗಿಯವರ ಕೈವಶವಾದ ರೈತರಿಗೆ ಕೈಗಾರಿಕೆಗಳಿಗೆ ಪಂಪ್ಸೆಟ್ ಗಳಿಗೆ ರಿಯಾಯ್ತಿ ದರದಲ್ಲಿ ಕೊಡುತ್ತಿರುವ ವಿದ್ಯುತ್ ಮೀಟರ್ ಅಳವಡಿಸಿ ರೈತರನ್ನು ಶೋಷಣೆ ಮಾಡಲಾಗುತ್ತದೆ.

ದಲಿತರಿಗೆ ಬಡವರಿಗೆ ಕೊಡುವ ಭಾಗ್ಯಜ್ಯೋತಿ, ಮಂಡಲ ಜ್ಯೋತಿ, ಕುಟೀರ ಜ್ಯೋತಿ, ಗಳಂತಹ ಯೋಜನೆಗಳಲ್ಲಿ ಕೊಡುವ ಉಚಿತ ವಿದ್ಯುತ್ ಕಂಪನಿಗಳು ಮೀಟರ್ ಅಳವಡಿಸಿದಾಗ ಕರೆನ್ಸಿ ಮಾದರಿಯಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಇದು ರೈತ ವಿರೋಧಿ ನೀತಿಯಾಗಿದ್ದು ನೆಲಕಚ್ಚಿರುವ ರೈತರಿಗೆ ಇನ್ನೊಂದು ಆಘಾತಕಾರಿ ವಿಷಯವಾಗಿದೆ ಎಂದೂ ಪ್ರತಿಭಟನಾಕರಾರು ಕಿಡಿಕಾರಿದರು. ಸರ್ಕಾರವು ತಕ್ಷಣವೇ ಈ ಕಾಯ್ದೆಯ ರೂಪು ರೇಷೆಗಳಿಗೆ ನೀಡುತ್ತಿರುವ ನಿಯಮಗಳಿಗೆ ಕಡಿವಾಣ ಹಾಕಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆಗಳು ರಾಜ್ಯ ಮತ್ತು ರಾಷ್ಟ್ರದ ಎಲ್ಲೆಡೆ ಆಗುತ್ತವೆ ಎಂದು ಎಚ್ಚರಿಸಿದರು. ಮನವಿ ಪತ್ರವನ್ನು ತಹಶಿಲ್ದಾರ ಸುರೇಶ್ ಕುಮಾರ್ ಅವರಿಗೆ ನೀಡಲಾಯಿತು.

ಈ ಪ್ರತಿಭಟನೆಯಲ್ಲಿ ನಾನಾ ಸಂಘಟನೆಗಳ ಮುಖಂಡರಾದ ಬೇಡರಹಳ್ಳಿ ಬಸವರೆಡ್ಡಿ, ವರಕೇರಪ್ಪ, ಶಿವಕುಮಾರ್, ಕೊಂಡಾಪುರ ಪರಮೇಶ್ವರ್, ಜಾಫರ್ ಷರೀಫ್, ಬೆಳಗಲ್ ಈಶ್ವರಯ್ಯ, ಸ್ವಾಮಿ ಮರ್ಲಹಳ್ಳಿ, ರವಿಕುಮಾರ್, ವಿರೇಶ್, ಪೆನ್ನಯ್ಯ ರಾಂಪುರ, ಬಸವರಾಜ್, ಸೇರಿದಂತೆ ನಾನಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend