ಕೂಡ್ಲಿಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ ಮಯೂರ ನೇಮಕ
ಕೂಡ್ಲಿಗಿ : ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ವಿಜಯನಗರ ಜಿಲ್ಲಾ ಅಧ್ಯಕ್ಷರಾಗಿ ಕೂಡ್ಲಿಗಿಯ ಮಂಜುನಾಥ ಮಯೂರ ಅವರನ್ನು ನೇಮಕ ಮಾಡಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೆ.ಲಯನ್ ಜಯರಾಜ್ ನಾಯ್ಡು ಅವರು ಆದೇಶಪತ್ರ ನೀಡಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೆ.ಲಯನ್ ಜಯರಾಜ್ ನಾಯ್ಡು ಮಾತನಾಡಿ ಮಂಜುನಾಥ ಮಯೂರ ಅವರು ಈಗಾಗಲೇ ನಾಡು ನುಡಿ ಸೇವೆ ಮಾಡಿರುವ ಅನುಭವ ಇದ್ದು ತಾಲೂಕು ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈಗ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ನಾಡು,ನುಡಿ ಜಲ ಸೇವೆಗೆ ಸದಾ ಸಿದ್ದವಾಗಿರಬೇಕು ಎನ್ನುವ ಧ್ಯೇಯ ವಾಕ್ಯದಂತೆ ಕಾರ್ಯನಿರ್ವಹಿಸುವಂತೆ ರಾಜ್ಯಅಧ್ಯಕ್ಷರು ತಿಳಿಸಿದ್ದು ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲಾಧ್ಯಂತ ಕನ್ನಡ ನಾಡು ಭಾಷೆಗಾಗಿ ಶ್ರಮಿಸುವ ಮೂಲಕ ಕನ್ನಡಪರ ಸೇವೆ ಮಾಡಬೇಕೆಂದು ತಿಳಿಸಿಸಿದ್ದಾರೆ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
